ADVERTISEMENT

ಆನ್‌ಲೈನ್ ಮೀಟಿಂಗ್: ಕರೆಗೆ ಮುನ್ನ ಎಚ್ಚರ

​ಪ್ರಜಾವಾಣಿ ವಾರ್ತೆ
Published 12 ಮೇ 2020, 19:30 IST
Last Updated 12 ಮೇ 2020, 19:30 IST
   

ಕೊರೊನಾ ವೈರಸ್ ಹಾವಳಿಯಿಂದಾಗಿ ಮನೆಯೊಳಗಿಂದಲೇ ಕೆಲಸ ಮಾಡುವ ಪ್ರಕ್ರಿಯೆ ಸಂದರ್ಭದಲ್ಲಿ ವರದಾನವಾಗಿ ಬಂದಿರುವ ಆನ್‌ಲೈನ್ ಕಾನ್ಫರೆನ್ಸಿಂಗ್ ಆ್ಯಪ್‌ಗಳಿಗೆ ಭಾರಿ ಬೇಡಿಕೆ ಬಂದಿದೆ. ಹೆಚ್ಚಿನ ಜನರು ತಮಗೆ ಲಭ್ಯವಿರುವ ಆನ್‌ಲೈನ್ ವೇದಿಕೆಗಳ ಮೂಲಕ ಕರೆ ಅಥವಾ ವಿಡಿಯೊ ಕಾನ್ಫರೆನ್ಸಿಂಗ್‌ನಲ್ಲಿ ತೊಡಗಿಕೊಂಡಿದ್ದಾರೆ. ಆದರೆ, ಮೊಬೈಲ್ ಮೂಲಕ ಆನ್‌ಲೈನ್ ಮೀಟಿಂಗ್‌ಗಳಿಗೆ ಹಾಜರಾಗುವ ನಾಗರಿಕರು ಹೆಚ್ಚಿನ ಎಚ್ಚರ ವಹಿಸಬೇಕಾಗಿದೆ.

ಕೆಲವರಿಗೆ ಈಗಾಗಲೇ ದೊಡ್ಡ ಮೊತ್ತದ ಬಿಲ್ ಬಂದಿರುವುದು ಆಘಾತಕ್ಕೆ ಕಾರಣವಾಗಿದೆ. ಈ ಹಿನ್ನೆಲೆಯಲ್ಲಿ ಟೆಲಿಕಾಂ ನಿಯಂತ್ರಣ ಪ್ರಾಧಿಕಾರ (ಟ್ರಾಯ್) ನಾಗರಿಕರಿಗೆ ಸೂಚನೆಯೊಂದನ್ನು ನೀಡಿದೆ. ಆನ್‌ಲೈನ್ ಕಾನ್ಫರೆನ್ಸಿಂಗ್‌ಗಾಗಿ ಈ ನಾಗರಿಕರು ಮೀಟಿಂಗ್ ಆಹ್ವಾನದ ಜೊತೆಯಲ್ಲೇ ಬರುವ ಸಂಖ್ಯೆಯೊಂದಕ್ಕೆ ಕರೆ ಮಾಡುತ್ತಾರೆ. ಅದು ಅಂತರರಾಷ್ಟ್ರೀಯ ಕರೆಯಾಗಿರುತ್ತದೆ. ಈ ಕಾರಣಕ್ಕೆ ದೊಡ್ಡ ಮೊತ್ತದ ಬಿಲ್ ಬರುವ ಸಾಧ್ಯತೆಗಳಿವೆ ಎಂದು ಟ್ರಾಯ್, ಟೆಲಿಕಾಂ ಬಳಕೆದಾರರಿಗೆ ಎಚ್ಚರಿಕೆ ಸಂದೇಶ ನೀಡಿದೆ.

ಇಷ್ಟೇ ಅಲ್ಲದೆ, ಕೆಲವು ಆ್ಯಪ್‌ಗಳ ಗ್ರಾಹಕ ಸಂಪರ್ಕ ಸೇವಾ ಸಂಖ್ಯೆಗಳು ಕೂಡ ಅಂತರರಾಷ್ಟ್ರೀಯ ಅಥವಾ ಪ್ರೀಮಿಯಂ ಸಂಖ್ಯೆಗಳೇ ಆಗಿರುತ್ತವೆ. ಅವುಗಳಿಗೆ ಕರೆ ಮಾಡಿದರೂ ಜೇಬಿಗೆ ಕತ್ತರಿ ಬೀಳುವ ಸಾಧ್ಯತೆಗಳಿವೆ. ಹೀಗಾಗಿ, ವಿಡಿಯೊ ಕಾನ್ಫರೆನ್ಸಿಂಗ್ ವೇಳೆ, ಯಾವುದೇ ಸಂಖ್ಯೆಗೆ ಕರೆ ಮಾಡದೆ, ಇಂಟರ್ನೆಟ್ ಮೂಲಕವೇ ಆನ್‌ಲೈನ್ ಸಭೆಗಳಿಗೆ ಸೇರಿಕೊಳ್ಳುವುದು ಹಾಗೂ ಕರೆ ಮಾಡುವ ಮೊದಲು ಅದು ಅಂತರರಾಷ್ಟ್ರೀಯ ಕರೆಯೋ ಎಂಬುದನ್ನು ದೃಢಪಡಿಸಿಕೊಳ್ಳುವುದು ಸೂಕ್ತ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.