ADVERTISEMENT

ಗೂಗಲ್ ಮ್ಯಾಪ್‌ನಲ್ಲಿ ಸೇಫ್ಟಿ ಫೀಚರ್

ರಶ್ಮಿ ಕಾಸರಗೋಡು
Published 7 ಆಗಸ್ಟ್ 2019, 7:43 IST
Last Updated 7 ಆಗಸ್ಟ್ 2019, 7:43 IST
   

ಗೂಗಲ್ ಮ್ಯಾಪ್‌ ಆ್ಯಪ್‌ನಲ್ಲಿ ಸ್ಟೇ ಸೇಫರ್ ಎಂಬ ಹೊಸ ಫೀಚರ್ ಲಭ್ಯವಿದೆ. ಟ್ಯಾಕ್ಸಿ, ಆಟೊ ಅಥವಾ ಇನ್ಯಾವುದೇ ಸಾರ್ವಜನಿಕ ವಾಹನಗಳಲ್ಲಿ ಪ್ರಯಾಣಿಸುವಾಗ ಪ್ರಯಾಣಿಕರ ಸುರಕ್ಷೆಗಾಗಿ ಈ ಹೊಸ ಫೀಚರ್‌ನ್ನು ಗೂಗಲ್ ಪರಿಚಯಿಸಿದೆ.ಅಂಡ್ರಾಯ್ಡ್ ಫೋನ್‌ಗಳ ಅಪ್‌ಡೇಟ್ ಆಗಿರುವ ಗೂಗಲ್ ಮ್ಯಾಪ್ ಆ್ಯಪ್‌ನಲ್ಲಿ ಮಾತ್ರ ಈ ಸೌಲಭ್ಯ ಲಭ್ಯ.

ಬಳಕೆ ಹೇಗೆ?

ಗೂಗಲ್ ಮ್ಯಾಪ್ ಓಪನ್ ಮಾಡಿ

ADVERTISEMENT

ನೀವು ಹೋಗಬೇಕಾಗಿರುವ ಸ್ಥಳ ನಮೂದಿಸಿದಾಗ ಹೇಗೆ ಹೋಗಬಹುದು ಎಂಬ ನಿರ್ದೇಶನ ಕಾಣಿಸುತ್ತದೆ.

ಕೆಳಗಡೆ Start ಆಪ್ಶನ್‌ನ ಬಲಭಾಗದಲ್ಲಿ Stay safer ಬಟನ್ ಇದೆ ಇದು ಕ್ಲಿಕ್ ಮಾಡಿದ ಕೂಡಲೇ Stay Safer ಅಡಿಯಲ್ಲಿ ಎರಡು ಆಪ್ಶನ್ ಕಾಣಿಸುತ್ತದೆ.

1. Share live trip ಆಪ್ಶನ್‌ ಕ್ಲಿಕ್ ಮಾಡುವ ಮೂಲಕ ನೀವು ಸಂಚರಿಸುತ್ತಿರುವ ರೂಟ್‌ನ್ನು ನಿಮ್ಮ ಗೆಳೆಯರು ಅಥವಾ ಆಪ್ತರೊಂದಿಗೆ ಹಂಚಿಕೊಳ್ಳಬಹುದು.

2.Get off-route alerts ಕ್ಲಿಕ್ ಮಾಡಿದ ಕೂಡಲೇ Tracking your trip ಎಂಬ ವಿಂಡೊ ತೆರೆದುಕೊಳ್ಳುತ್ತದೆ, ಇಲ್ಲಿ ನೀವು ಸಂಚರಿಸುತ್ತಿರುವ ರೂಟ್ ಮ್ಯಾಪ್ ಕಾಣಿಸುತ್ತದೆ. ಅಲ್ಲಿ Stop ಬಟನ್ ಕೂಡಾ ಇದೆ.

ನಿಮ್ಮ ಸಾಗುತ್ತಿರುವ ಹಾದಿಯ ದೂರ ಮತ್ತು ಕ್ರಮಿಸಲು ಬೇಕಾಗುವ ಸಮಯವೂ ಇಲ್ಲಿ ಕಾಣಿಸುತ್ತದೆ. ಒಂದು ವೇಳೆ ನೀವು ಸಾಗುತ್ತಿರುವ ದಾರಿ ಬಿಟ್ಟು ನಿಮ್ಮ ವಾಹನ ಬೇರೆ ದಾರಿಯಾಗಿ 500 ಮೀ ಹೋದರೆ ನಿಮ್ಮ ಫೋನ್‌ಗೆ alert ಸಂದೇಶ ಬರುತ್ತದೆ.

ಅಲ್ಲಿಯೇ ಕೆಳಗೆ Share live trip ಬಟನ್ ಇದ್ದು, ನಿಮ್ಮ ಗೆಳೆಯರಿಗೆ ನೀವಿರುವ ಸ್ಥಳದ ಮಾಹಿತಿಯನ್ನು ಕಳುಹಿಸಬಹುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.