ADVERTISEMENT

ಜಾಗೃತಿಗಾಗಿ ಶೇರ್‌ ಚಾಟ್‌

​ಪ್ರಜಾವಾಣಿ ವಾರ್ತೆ
Published 16 ಏಪ್ರಿಲ್ 2019, 20:21 IST
Last Updated 16 ಏಪ್ರಿಲ್ 2019, 20:21 IST
ಶೇರ್ ಚಾಟ್
ಶೇರ್ ಚಾಟ್   

ಲೋಕಸಭೆ ಚುನಾವಣೆಯ ಸಂದರ್ಭದಲ್ಲಿ ಆನ್‌ಲೈನ್‌ನಲ್ಲಿ ಅದರಲ್ಲೂ ಕನ್ನಡದಲ್ಲಿ ಉಚಿತವಾಗಿ ಮತ ಜಾಗೃತಿ ನಡೆಸಲು ಕರ್ನಾಟಕ ಮುಖ್ಯ ಚುನಾವಣಾ ಅಧಿಕಾರಿಗಳ ಕಚೇರಿ ಶೇರ್‌ಚಾಟ್ ಖಾತೆ ತೆರೆದಿದೆ.

ಇಲ್ಲಿ ಪ್ರಾದೇಶಿಕವಾಗಿ ನಡೆಯುವ ಜಾಗೃತಿ ಜಾಲತಾಣ ಇದಾಗಿದೆ. ಶೇರ್‌ಚಾಟ್‌ನಲ್ಲಿ @CEO_karnataka ಮೂಲಕ ಮಾಹಿತಿಯುಕ್ತವಿಡಿಯೋ, ಆಡಿಯೋ ಹಾಗೂ ಫೋಟೊಗಳನ್ನೂ ಅಪ್‌ಲೋಡ್ ಮಾಡಬಹುದು.

ಏಪ್ರಿಲ್‌ 18ರಂದು ಚುನಾವಣೆ ಮುಗಿಯುವವರೆಗೂ ಇದರಲ್ಲಿ ಜಾಗೃತಿ ಅಭಿಯಾನ ನಡೆಸಲು ಅವಕಾಶ ನೀಡಲಾಗಿದೆ. ಸಖತ್‌ ಸ್ಟುಡಿಯೋ ಇದಕ್ಕೆ ಕ್ರಿಯೇಟಿವ್‌ ಪಾಲುದಾರಿಕೆ ಹೊಂದಿದೆ.

ADVERTISEMENT

‘ಚಿಕ್ಕ ಗ್ರಾಮಗಳಲ್ಲೂ ಶೇರ್ ಚಾಟ್ ಬಳಕೆದಾರರು ಇದ್ದಾರೆ. ಇದರಲ್ಲಿ ಪೋಸ್ಟ್ ಮಾಡುವ ಮೂಲಕ ಮತದಾರರ ಸಂಖ್ಯೆ ಕೂಡ ಹೆಚ್ಚುವ ಸಾಧ್ಯತೆ ಇದೆ’ ಎಂದು ಜಂಟಿ ಮುಖ್ಯ ಚುನಾವಣಾ ಅಧಿಕಾರಿ ಎ.ವಿ. ಸೂರ್ಯಸೇನ್‌ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.