ADVERTISEMENT

ಏಕರೂಪದ ಚಾರ್ಜರ್: ವರದಿ ನೀಡಲು ಸರ್ಕಾರದಿಂದ ತಜ್ಞರ ಸಮಿತಿ

ದೇಶದಲ್ಲಿ ಏಕರೂಪದ ಚಾರ್ಜರ್ ಬಳಕೆಗೆ ತರುವಲ್ಲಿನ ಸಾಧ್ಯತೆಗಳ ಬಗ್ಗೆ ಪರಿಶೀಲನೆ

ಪಿಟಿಐ
Published 17 ಆಗಸ್ಟ್ 2022, 16:02 IST
Last Updated 17 ಆಗಸ್ಟ್ 2022, 16:02 IST
   

ನವದೆಹಲಿ: ಮೊಬೈಲ್ ಮತ್ತು ಎಲ್ಲ ಮಾದರಿಗ ಗ್ಯಾಜೆಟ್, ಉಪಕರಣಗಳಿಗೆ ಏಕರೂಪದ ಚಾರ್ಜರ್ ಬಳಕೆಗೆ ತರುವ ಕುರಿತಂತೆ ಸಾಧ್ಯತೆಗಳನ್ನು ಪರಿಶೀಲಿಸಲು ಸರ್ಕಾರ ತಜ್ಞರ ಸಮಿತಿ ರೂಪಿಸಿದೆ.

ಸಮಿತಿ, ಎರಡು ತಿಂಗಳಿನಲ್ಲಿ ವರದಿ ನೀಡಲಿದೆ ಎಂದು ಗ್ರಾಹಕ ವ್ಯವಹಾರಗಳ ಇಲಾಖೆ ಕಾರ್ಯದರ್ಶಿ ರೋಹಿತ್ ಕುಮಾರ್ ಸಿಂಗ್ ಹೇಳಿದ್ದಾರೆ.

ಚಾರ್ಜರ್ ಬಳಕೆಗೆ ತರುವ ಮೊದಲು, ಉದ್ಯಮದವರು, ಹೂಡಿಕೆದಾರರು, ಬಳಕೆದಾರರ ಸಹಿತ ವಿವಿಧ ವರ್ಗದವರ ಅಭಿಪ್ರಾಯ ಕೇಳಬೇಕಿದೆ. ನಮಗೆ ಚಾರ್ಜರ್ ಉತ್ಪಾದಿಸುವ ಸಾಮರ್ಥ್ಯವಿದೆ. ಆದರೆ ಏಕರೂಪದ ಚಾರ್ಜಿಂಗ್ ಪೋರ್ಟ್ ಬಳಕೆಗೆ ಎಲ್ಲರ ಸಮ್ಮತಿ ಮುಖ್ಯವಾಗಿದೆ ಎಂದು ಅವರು ತಿಳಿಸಿದ್ದಾರೆ.

ADVERTISEMENT

ತಜ್ಞರ ಸಮಿತಿ, ಈ ಕುರಿತಂತೆ ವಿವಿಧ ಸಾಧ್ಯತೆಗಳನ್ನು ಪರಿಶೀಲಿಸಿ, ವಿವಿಧ ಕ್ಷೇತ್ರಗಳಲ್ಲಿನ ಬಳಕೆ ಮತ್ತು ಬೇಡಿಕೆ ಹಾಗೂ ಉತ್ಪಾದನೆಯ ಅವಕಾಶ ಸಹಿತ ಎಲ್ಲ ಮಾದರಿಯಲ್ಲಿ ಅಧ್ಯಯನ ನಡೆಸಿ ಸರ್ಕಾರಕ್ಕೆ ವರದಿ ಸಲ್ಲಿಸಲಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.