ADVERTISEMENT

ಏನಿದು FaceBook Watch Party ?

ರಶ್ಮಿ ಕಾಸರಗೋಡು
Published 7 ಆಗಸ್ಟ್ 2019, 7:44 IST
Last Updated 7 ಆಗಸ್ಟ್ 2019, 7:44 IST

ಏನಿದು ಫೇಸ್‌ಬುಕ್ ವಾಚ್‌ಪಾರ್ಟಿ

ಫೇಸ್‌ಬುಕ್‌ನಲ್ಲಿ Watch party ನೋಟಿಫಿಕೇಶನ್ ಬಂದಾಗ ಅದನ್ನು ಕ್ಲಿಕ್ಕಿಸಿ ವಿಡಿಯೊ ನೋಡಿರುತ್ತೇವೆ. ಕೆಲವು ಫೇಸ್‌ಬುಕ್ ಪುಟಗಳು ಕೂಡಾ Watch party ಮೂಲಕ ವಿಡಿಯೊಗಳನ್ನು ತೋರಿಸುತ್ತವೆ. 2018 ನವೆಂಬರ್ ತಿಂಗಳಲ್ಲಿ ಫೇಸ್‌ಬುಕ್ ಈ ಫೀಚರ್ ಪರಿಚಯಿಸಿದ್ದರೂ, ಏನದು watch party? ಎಂಬ ಪ್ರಶ್ನೆ ಕೆಲವರಲ್ಲಿದೆ.

ಚುಟುಕಾಗಿ ಹೇಳುವುದಾದರೆ ಎಲ್ಲರೂ ಜತೆಯಾಗಿ ವಿಡಿಯೊ ನೋಡುವಂತೆ ಮಾಡುವ ಫೀಚರ್ ‘ಈ ವಾಚ್ ವಾರ್ಟಿ’. ಈಗಾಗಲೇ ರೆಕಾರ್ಡ್ ಆಗಿರುವ ವಿಡಿಯೊವನ್ನು ನಿಮ್ಮ ಫೇಸ್‌ಬುಕ್ ಟೈಮ್‌ಲೈನ್‌ಲ್ಲಿ ಅಪ್‌ಲೋಡ್ ಮಾಡಿರುತ್ತೀರಿ. ನಿಮ್ಮ ಸ್ನೇಹಿತರ ಪಟ್ಟಿಯಲ್ಲಿರುವ ಕೆಲವೇ ಕೆಲವರು ಮಾತ್ರ ಅದನ್ನ ನೋಡಿ ಲೈಕ್ ಒತ್ತಿರುತ್ತಾರೆ. ಅದೇ ವಿಡಿಯೊವನ್ನು ನೀವು ವಾಚ್‌ಪಾರ್ಟಿ ಮಾಡಿ ನೋಡಿ, ಹಲವಾರು ಗೆಳೆಯರು ಒಟ್ಟಿಗೆ ವೀಕ್ಷಿಸುತ್ತಾರೆ, ಲೈಕ್, ಕಾಮೆಂಟ್ ಎಲ್ಲವೂ ಬಂದು ಬಿಡುತ್ತದೆ.

ADVERTISEMENT

ವಾಚ್ ಪಾರ್ಟಿ create ಅಥವಾ Host ಮಾಡುವುದು ಹೇಗೆ?
ನಿಮ್ಮ ಫೇಸ್‌ಬುಕ್ ಟೈಮ್‌ಲೈನ್‌ನಲ್ಲಿ ಸ್ಟೇಟಸ್ ಬರೆಯುವ ಫೋಟೊ/ ವಿಡಿಯೊ ಅಪ್‌ಲೋಡ್ ಮಾಡುವ ಆಯ್ಕೆ ಇರುವಂತೆಯೇ ಅಲ್ಲಿ ಕೆಳಗೆ Watch Party ಎಂಬ ಆಯ್ಕೆ ಇದೆ. ಗಮನಿಸಿ ವಾಚ್‌ಪಾರ್ಟಿಗಾಗಿರುವ ವಿಡಿಯೊಗಳು ನಿಮ್ಮ ಫೇಸ್‌ಬುಕ್‌ನಲ್ಲಿ ಮೊದಲು ಅಪ್‌ಲೋಡ್ ಆಗಿರಬೇಕು. Wath party ಕ್ಲಿಕ್ ಮಾಡಿದ ಕೂಡಲೇ For you, Watched, Live ಮತ್ತು Saved ಎಂಬ ಕೆಟಗರಿಗಳಡಿಯಲ್ಲಿ ಒಂದಷ್ಟು ವಿಡಿಯೊಗಳು ಕಾಣಿಸುತ್ತವೆ. ಇವುಗಳು ರೆಕಾರ್ಡ್ ಮಾಡಿದ ವಿಡಿಯೊಗಳಾಗಿವೆ. For you ಎಂದು ಕ್ಲಿಕ್ ಮಾಡಿದರೆ ನೀವು ಅಪ್‌ಲೋಡ್ ಮಾಡಿರುವ ವಿಡಿಯೊಗಳು, ನೀವು ಫೇಸ್‌ಬುಕ್‌ನಲ್ಲಿ ಹೆಚ್ಚು ಬಾರಿ ನೋಡಿದ ಅಥವಾ ಇಷ್ಟಪಟ್ಟ ವಿಡಿಯೊಗಳು, ನಿಮ್ಮ ಆಸಕ್ತಿಗೆ ಅನುಗುಣವಾಗಿರುವ ವಿಡಿಯೊಗಳು ಇಲ್ಲಿ ಡಿಸ್‌ಪ್ಲೇ ಆಗುತ್ತವೆ. ಉದಾಹರಣೆಗೆ ನೀವು ಯಾವುದಾದರೂ ಒಂದು ಪೇಜ್‌ನಲ್ಲಿರುವ ವಿಡಿಯೊಗಳನ್ನು ಹೆಚ್ಚು ಬಾರಿ ನೋಡಿ, ಮೆಚ್ಚಿದ್ದರೆ ಆ ಪುಟದಲ್ಲಿರುವ ವಿಡಿಯೊಗಳು ಕಾಣಿಸಿಕೊಳ್ಳುತ್ತವೆ.

Watched ಎಂದು ಕ್ಲಿಕ್ ಮಾಡಿದರೆ ನೀವುಇತ್ತೀಚೆಗೆ ವೀಕ್ಷಿಸಿದ ವಿಡಿಯೊಗಳು ಕಾಣಿಸುತ್ತವೆ. Live ಕ್ಲಿಕ್ ಮಾಡಿದರೆ ಲೈವ್ ವಿಡಿಯೊ (ಸೇವ್ ಆಗಿರುವ ಲೈವ್ ವಿಡಿಯೊಗಳು) ಕಾಣಿಸುತ್ತವೆ. Saved ಕ್ಲಿಕ್ ಮಾಡಿದರೆ ನೀವು ಫೇಸ್‌ಬುಕ್‌ನಲ್ಲಿ ಸೇವ್ ಮಾಡಿರುವ ವಿಡಿಯೊಗಳು ಕಾಣಿಸುತ್ತವೆ.

ಈ ವಿಡಿಯೊಗಳಲ್ಲಿ ನಿಮ್ಮ ಆಯ್ಕೆಯ ವಿಡಿಯೊ ಪಕ್ಕ ಇರುವ Add to Queue ಬಟನ್ ಕ್ಲಿಕ್ ಮಾಡಿ. Done ಒತ್ತಿ, ನಿಮ್ಮ ಫೇಸ್‌ಬುಕ್ ಟೈಮ್‌ಲೈನ್‌ನಲ್ಲಿ ವಿಡಿಯೊ ಪ್ಲೇ ಆಗುವ ಹೊತ್ತಿಗೆ ನಿಮ್ಮ ಫೇಸ್‌ಬುಕ್ ಸ್ನೇಹಿತರಿಗೆ ನೋಟಿಫಿಕೇಶನ್ ಹೋಗುತ್ತದೆ. ಹೀಗೆ ಎಲ್ಲರೂ ಲೈವ್ ವಿಡಿಯೊ ನೋಡಿದಂತೆ ವಿಡಿಯೊಗಳನ್ನು ವೀಕ್ಷಿಸಬಹುದು. ಈ ವಿಡಿಯೊ ವೀಕ್ಷಿಸಲು audience ಸೆಟ್ಟಿಂಗ್ಸ್ ಕೂಡಾ ಬದಲಿಸಬಹುದು. ಅಂದರೆ NewsFeed ಮುಂದೆ ಇರುವ Friends ಆಪ್ಶನ್ ತೆಗೆದು Public ಅಥವಾ ಕೆಲವೇ ಕೆಲವು ಸ್ನೇಹಿತರಿಗೆ ಕಾಣುವಂತೆಯೂ ಸೆಟ್ಟಿಂಗ್ಸ್ ಬದಲಿಸಬಹುದು. Audience ಸೆಟ್ಟಿಂಗ್ಸ್ ಬದಲಿಸಿದ ನಂತರ Post ಎಂದು ಕ್ಲಿಕ್ ಮಾಡಿದರೆ ವಿಡಿಯೊ ಪ್ಲೇ ಆಗುತ್ತದೆ. ಗಮನಿಸಿ ಈ ವಿಡಿಯೊ ಯಾವುದಕ್ಕೆ ಸಂಬಂಧಿಸಿದ್ದು ಎಂಬ ಚಿಕ್ಕ ವಿವರಣೆಯನ್ನು ನೀಡಿದರೆ ವಿಡಿಯೊ ವೀಕ್ಷಿಸುತ್ತಿರುವವರಿಗೆ ವಿಷಯ ಏನೆಂಬುದು ಅರಿಯಲು ಅನುಕೂಲವಾಗುತ್ತದೆ.

ಉದಾಹರಣೆಗೆ ನಿಮ್ಮ ಮನೆಯ ಮುಂದೆ ನಡೆಯುತ್ತಿರುವ ಸಾಂಸ್ಕೃತಿಕ ಕಾರ್ಯಕ್ರಮವೊಂದರ ರೆಕಾರ್ಡ್ ಮಾಡಿದ ವಿಡಿಯೊವನ್ನು ನೀವು ಇಲ್ಲಿ ಪ್ಲೇ ಮಾಡುತ್ತೀರಿ ಎಂದಾದರೆ ಆ ಕಾರ್ಯಕ್ರಮದ ಬಗ್ಗೆ ಚಿಕ್ಕ ವಿವರಣೆಯನ್ನು ಬರೆಯಿರಿ. ಒಂದು ವೇಳೆ ನೀವು ಒಂದಕ್ಕಿಂತ ಹೆಚ್ಚು ವಿಡಿಯೊಗಳನ್ನು ಪ್ಲೇ ಮಾಡಲು ಇಚ್ಚಿಸುವುದಾದರೆ Queueಗೆ ಸೇರಿಸುವ ಮತ್ತು ವಾಚ್ ಪಾರ್ಟಿ ವೀಕ್ಷಿಸಲು ಸ್ನೇಹಿತರನ್ನು ಆಹ್ವಾನಿಸುವ ಅವಕಾಶವೂ ಇದೆ. ನಿಮ್ಮ ಫೇಸ್‌ಬುಕ್ ಪುಟದಲ್ಲಿಯೂ ಇದೇ ರೀತಿ ವಾಚ್ ಪಾರ್ಟಿ ಮಾಡಬಹುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.