ADVERTISEMENT

ಭಾರತದ ಬ್ರ್ಯಾಂಡ್‌ನಿಂದ ಡಾಲ್ಬಿ ಆಟ್ಮೋಸ್ ಬೆಂಬಲಿತ ಸೌಂಡ್‌ಬಾರ್

​ಪ್ರಜಾವಾಣಿ ವಾರ್ತೆ
Published 1 ಅಕ್ಟೋಬರ್ 2020, 13:28 IST
Last Updated 1 ಅಕ್ಟೋಬರ್ 2020, 13:28 IST
ಜೆಬ್ರಾನಿಕ್ಸ್ ಸೌಂಡ್ ಬಾರ್
ಜೆಬ್ರಾನಿಕ್ಸ್ ಸೌಂಡ್ ಬಾರ್   

ಹಾಡುಗಳನ್ನು ಆಲಿಸಲು ಮತ್ತು ಟಿವಿ ನೋಡುವಾಗ, ಗೇಮ್ ಆಡುವಾಗಉತ್ತಮ ಧ್ವನಿ ವ್ಯವಸ್ಥೆಗಾಗಿ ಸೌಂಡ್‌ಬಾರ್‌ಗಳು ಇತ್ತೀಚಿನ ಟ್ರೆಂಡ್. ಮನೆಯಲ್ಲಿ ಕುಳಿತು ಥಿಯೇಟರ್ ಅನುಭವ ನೀಡುವ ಈ ಸ್ಪೀಕರ್‌ಗಳಲ್ಲಿ ಡಾಲ್ಬಿ ಅಟ್ಮಾಸ್ ತಂತ್ರಜ್ಞಾನದ ಸಬ್‌ವೂಫರ್‌ಗಳು ಜಗತ್ತಿನಲ್ಲೇ ಪ್ರಸಿದ್ಧಿ ಪಡೆದಿವೆ. ಈ ತಂತ್ರಜ್ಞಾನವನ್ನು ಇದೀಗ ಭಾರತೀಯ ಕಂಪನಿಯೊಂದು ಮೊದಲ ಬಾರಿ ಬಳಸಿ, ಸೌಂಡ್ ಬಾರ್ ತಯಾರಿಸಿ ಮಾರುಕಟ್ಟೆಗೆ ಪರಿಚಯಿಸಿದೆ.

ಜೆಬ್ ಜೂಕ್ ಬಾರ್ 9700 ಪ್ರೋ ಡಾಲ್ಬಿ ಅಟ್ಮಾಸ್ ಎಂಬ ಈ ಸೌಂಡ್‌ಬಾರ್ ಅನ್ನು ಚೆನ್ನೈ ಮೂಲದ ಜೆಬ್ರಾನಿಕ್ಸ್ ಕಂಪನಿಯು ಬಿಡುಗಡೆ ಮಾಡಿದ್ದು, ಈ ಅತ್ಯಾಧುನಿಕ ಸ್ಪೀಕರ್‌ಗೆ ಬ್ಲೂಟೂತ್, ಯುಎಸ್‌ಬಿ, ಆಪ್ಟಿಕಲ್, ಹೆಚ್‌ಡಿಎಂಐ ಹಾಗೂ ಎಯುಎಕ್ಸ್ ಮೂಲಕ ಸಂಪರ್ಕ ಕಲ್ಪಿಸಿ ಹಾಡುಗಳನ್ನು ಆನಂದಿಸಬಹುದು.

ಟಿವಿಯಲ್ಲಿ ಅಥವಾ ಫೋನ್‌ನಲ್ಲಿ ಚಲನಚಿತ್ರ, ಗೇಮಿಂಗ್, ಇತರ ಕಾರ್ಯಕ್ರಮಗಳನ್ನು ವೀಕ್ಷಿಸುವಾಗ ಈ ಸೌಂಡ್‌ಬಾರ್ ಇದ್ದರೆ, ಸಿನಿಮಾ ಮಂದಿರದಲ್ಲಿ ಸಿಗುವ ಧ್ವನಿಯ ಅನುಭವ ದೊರೆಯುತ್ತದೆ. ವೈರುಗಳಿಲ್ಲದೆಯೇ ಸರೌಂಡ್ ಸೌಂಡ್ ಸ್ಪೀಕರ್‌ಗಳು ಅದ್ಭುತವಾದ ಧ್ವನಿಯನ್ನು ಹೊರಹೊಮ್ಮಿಸಬಲ್ಲವು. 16.51 ಸೆ.ಮೀ. ಉದ್ದದ ಸಬ್‌ವೂಫರ್ ಇದರಲ್ಲಿದೆ.

ADVERTISEMENT

ಎಲ್ಇಡಿ ಡಿಸ್‌ಪ್ಲೇ, ರಿಮೋಟ್ ಕಂಟ್ರೋಲ್ ಇದ್ದು, ಗೋಡೆಯಲ್ಲಿ ಕೂಡ ಅಳವಡಿಸಬಹುದು. 300 ವಾಟ್ಸ್‌ನ ಸೌಂಡ್‌ಬಾರ್ ಹಾಗೂ 150 ವಾಟ್ಸ್ ಸಾಮರ್ಥ್ಯದ ಸಬ್‌ವೂಫರ್ ಇದರಲ್ಲಿದೆ.

ಉತ್ಪನ್ನದ ಮಾಹಿತಿ ನೀಡಿದ ಡಾಲ್ಬಿ ಲ್ಯಾಬೊರೇಟರೀಸ್ ಎಮರ್ಜಿಂಗ್ ಮಾರ್ಕೆಟ್ಸ್ ವಿಭಾಗದ ಎಂಡಿ ಪಂಕಜ್ ಕೇಡಿಯಾ ಹಾಗೂ ಜೆಬ್ರಾನಿಸ್ಕ್ ನಿರ್ದೇಶಕ ಪ್ರದೀಪ್ ದೋಶಿ ಅವರು, ಡಾಲ್ಬಿ ಅಟ್ಮಾಸ್ ಇರುವ ಜೆಬ್ರಾನಿಕ್ಸ್ ಸೌಂಡ್‌ಬಾರ್ ಅನ್ನು ಭಾರತೀಯ ಗ್ರಾಹಕರಿಗೆ ಪರಿಚಯಿಸಲು ಸಂತಸವಾಗುತ್ತಿದೆ ಎಂದಿದ್ದಾರೆ. ZEB-Juke Bar 9700 Pro Dolby Atmos ಸೌಂಡ್ ಬಾರ್ ಈಗಾಗಲೇ ಫ್ಲಿಪ್‌ಕಾರ್ಟ್ ಮೂಲಕ ಲಭ್ಯವಿದ್ದು, ಬೆಲೆ ರೂ.17,999.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.