ಭೋಪಾಲ್: ಮೊಬೈಲ್ ಕಳ್ಳತನದ ಆರೋಪದ ಮೇಲೆ ಬಾಲಕನೊಬ್ಬನನ್ನು ಸಾಯಿಸುವ ಉದ್ದೇಶದಿಂದ ಬಾವಿಯೊಳಗೆ ಇಳಿಬಿಟ್ಟಿದ್ದಘಟನೆ ಮಧ್ಯಪ್ರದೇಶದ ಛಾತ್ರಪುರ್ ಜಿಲ್ಲೆಯಲ್ಲಿ ನಡೆದಿದೆ.
ಘಟನೆಗೆ ಸಂಬಂಧಿಸಿದ ವಿಡಿಯೊ ವೈರಲ್ ಆಗಿದೆ. ಈ ಘಟನೆ ಮಧ್ಯಪ್ರದೇಶದಛಾತ್ರಪುರ್ ಜಿಲ್ಲೆಯ ಆಟ್‌ಕೋನಾದಲ್ಲಿ ಇತ್ತೀಚೆಗೆ ನಡೆದಿದೆ.
ವಿಡಿಯೊದಲ್ಲಿ ಆರೋಪಿ 14 ವರ್ಷದ ಬಾಲಕನಿಗೆ ‘ನೀನು ಮೊಬೈಲ್ ಕದ್ದಿರುವುದನ್ನು ಒಪ್ಪಿಕೊ ಇಲ್ಲವಾದರೆ ಇಲ್ಲಿಯೇ ನಿನ್ನನ್ನು ಸಾಯಿಸುತ್ತೇನೆ’ ಎಂದು ನೀರು ತುಂಬಿದ ಬಾವಿಯೊಳಗೆ ನೇತುಹಾಕಿ ಜೀವ ಬೆದರಿಕೆ ಹಾಕಿರುವುದು ಕಾಣುತ್ತದೆ. ಅಲ್ಲದೇ ಬಾಲಕ, ಆರೋಪವನ್ನು ನಿರಾಕರಿಸುತ್ತಾ ಸಾಯಿಸಬೇಡ’ ಎಂದು ಬೇಡಿಕೊಳ್ಳುವುದು ವಿಡಿಯೊದಲ್ಲಿ ದಾಖಲಾಗಿದೆ. ಈ ವಿಡಿಯೊ ನೆಟ್ಟಿಗರ ಮನಕಲುಕಿದೆ.
ಕಡೆಗೆ ಬಾಲಕ ಜೀವಾಪಯದಿಂದ ಪಾರಾಗಿದ್ದು, ವಿಡಿಯೊ ವೈರಲ್ ಆದ ನಂತರ ಛಾತ್ರಪುರ ಜಿಲ್ಲೆಯ ಪೊಲೀಸರು ಆರೋಪಿಯ ಮೇಲೆ ಸೆಕ್ಷನ್ 308ರ ಅಡಿ ಪ್ರಕರಣ ದಾಖಲಿಸಿಕೊಂಡು ಬಂಧಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.