ಕಣ್ಣೂರು, ಕೇರಳ: ಕಂಠಪೂರ್ತಿ ಕುಡಿದ ವ್ಯಕ್ತಿಯೊಬ್ಬ ರೈಲು ಹಳಿಯಲ್ಲಿ ಕಾರು ಚಲಾಯಿಸಿರುವ ಘಟನೆ ಕೇರಳದ ಕಣ್ಣೂರಿನಲ್ಲಿ ನಡೆದಿದೆ.
ಈ ಘಟನೆಗೆ ಸಂಬಂಧಿಸಿದ ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.
ಕಣ್ಣೂರು ಬಳಿಯ ತಾಜಿ ರೈಲ್ವೆ ಕ್ರಾಸಿಂಗ್‌ನಲ್ಲಿ ಟ್ರ್ಯಾಕ್ ಮೇಲೆ ಕಾರು ಚಲಾಯಿಸಿದ ವ್ಯಕ್ತಿಯನ್ನು ಕಣ್ಣೂರಿನ ಜಯಪ್ರಕಾಶ್ ಎಂದು ಗುರುತಿಸಲಾಗಿದೆ.
ರೈಲ್ವೆ ಕ್ರಾಸಿಂಗ್‌ನಿಂದ ಸುಮಾರು 15 ಮೀಟರ್ ಕಾರು ಚಲಾಯಿಸಿಕೊಂಡು ಹೋಗಿದ್ದ ವ್ಯಕ್ತಿ ಮುಂದಕ್ಕೆ ಹೋಗಲಾಗದೇ ಅಲ್ಲಿಯೇ ಕೆಲಹೊತ್ತು ಕಾರಿನಲ್ಲಿ ಕೂತಿದ್ದಾನೆ. ಇದನ್ನು ನೋಡಿದ ಸ್ಥಳೀಯರು ಓಡಿ ಬಂದು ಆತನನ್ನು ಹೊರಗೆಳೆದು ಬಳಿಕ ಕಾರನ್ನು ಟ್ರ್ಯಾಕ್‌ನಿಂದ ನೂಕಿದ್ದಾರೆ.
ಸುದ್ದಿ ತಿಳಿದು ಜಯಪ್ರಕಾಶ್ ವಿರುದ್ಧ ಕಣ್ಣೂರು ನಗರ ಠಾಣೆ ಪೊಲೀಸರು ಮೋಟಾರು ವಾಹನ ಕಾಯ್ದೆ ಹಾಗೂ ರೈಲ್ವೆ ಕಾಯ್ದೆ ಪ್ರಕಾರ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಆತನನ್ನು ಬಂಧಿಸಿ ಬಳಿಕ ಜಾಮೀನಿನ ಮೇಲೆ ಬಿಡುಗಡೆ ಮಾಡಿದ್ದಾರೆ. ಈ ಕುರಿತು Free Press Journal ವೆಬ್‌ಸೈಟ್ ವರದಿ ಮಾಡಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.