ADVERTISEMENT

ಹೋಟೆಲ್‌ನಲ್ಲಿ ಗಂಟೆಗಟ್ಟಲೆ ಕೂತರೆ ₹1,000 ಪಾವತಿಸಬೇಕಾದೀತು ಎಚ್ಚರ!

ಡೆಕ್ಕನ್ ಹೆರಾಲ್ಡ್
Published 28 ಜನವರಿ 2026, 6:45 IST
Last Updated 28 ಜನವರಿ 2026, 6:45 IST
<div class="paragraphs"><p>ಹೋಟೆಲ್‌ವೊಂದರಲ್ಲಿ ಹಾಕಿದ ಫಲಕ</p></div>

ಹೋಟೆಲ್‌ವೊಂದರಲ್ಲಿ ಹಾಕಿದ ಫಲಕ

   

ಬೆಂಗಳೂರು: ಭಾರತದ ಸಿಲಿಕಾನ್‌ ಸಿಟಿ ಎಂದೇ ಹೆಸರಾಗಿರುವ ಬೆಂಗಳೂರಿನಲ್ಲಿ ಕಂಪನಿಗಳ ಮಾಲೀಕರು ಅಥವಾ ಬಹುರಾಷ್ಟ್ರೀಯ ಕಂಪನಿಗಳ ವ್ಯವಸ್ಥಾಪಕರು, ರಿಯಲ್‌ ಎಸ್ಟೇಟ್‌ ಉದ್ಯಮಿಗಳು, ಮದುವೆ ಬ್ರೋಕರ್‌ಗಳು ದೊಡ್ಡ ದೊಡ್ಡ ಹೋಟೆಲ್‌ಗಳಲ್ಲಿ, ರೆಸ್ಟೋರೆಂಟ್‌ಗಳಲ್ಲಿ ಸಭೆ ನಡೆಸುವುದು ಸಾಮಾನ್ಯ ಎನ್ನುವಂತಾಗಿದೆ. 

ಗಂಟೆಗಟ್ಟಲೆ ಸಭೆ ನಡೆಸುವುದರಿಂದ ಹೋಟೆಲ್‌ಗಳಿಗೆ ಊಟಕ್ಕೆ ಬರುವ ಸಾಮಾನ್ಯ ಗ್ರಾಹಕರು ಸರತಿ ಸಾಲಿನಲ್ಲಿ ನಿಲ್ಲುವಂತಾಗುತ್ತದೆ. ಹೀಗಾಗಿ ಹೋಟೆಲ್‌ವೊಂದರಲ್ಲಿ 1 ಗಂಟೆಗಿಂತ ಹೆಚ್ಚು ಕಾಲ ಕುಳಿತರೆ ಗಂಟೆಗೆ ₹1 ಸಾವಿರ ಪಾವತಿಸಬೇಕು ಎಂದು ಫಲಕವನ್ನು ಹಾಕಲಾಗಿದೆ.

ADVERTISEMENT

‘ಯಾವುದೇ ಮೀಟಿಂಗ್‌ಗಳಿಗೆ ಅವಕಾಶವಿಲ್ಲ, ಒಂದು ಗಂಟೆಗಿಂತ ಹೆಚ್ಚು ಕಾಲ ಕುಳಿತರೆ ಗಂಟೆಗೆ ಒಂದು ಸಾವಿರ ಪಾವತಿಸಬೇಕು’ ಎಂದು ಹೋಟೆಲ್‌ವೊಂದರಲ್ಲಿ ಬರೆದ ಫಲಕ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. 

ಈ ಫಲಕ ನಗರದ ಇಂದಿರಾನಗರದ ಹೋಟೆಲ್‌ನಲ್ಲಿ ಹಾಕಲಾಗಿದೆ ಎಂದು ಪೋಸ್ಟ್‌ಗೆ ಹಲವರು ಕಮೆಂಟ್ ಮಾಡಿದ್ದಾರೆ.

ಕಾರ್ಪೊರೇಟ್ ಮತ್ತು ವ್ಯಾಪಾರ ಸಭೆಗಳಿಂದ ಇತರ ಗ್ರಾಹಕರು ಹೋಟೆಲ್‌ಗಳಿಗೆ ಹೋದಾಗ ಟೇಬಲ್‌ ಖಾಲಿ ಇಲ್ಲ ಅಥವಾ ಒಂದು ಗಂಟೆ ತಡವಾಗಲಿದೆ ಎಂದೆಲ್ಲ ಉತ್ತರಗಳನ್ನು ಪಡೆದು ವಾಪಸ್ಸಾಗುತ್ತಾರೆ. ಇದನ್ನು ತಡೆಯಲು ಹೋಟೆಲ್‌ ಈ ತಂತ್ರ ಅಳವಡಿಸಿಕೊಂಡಿದೆ.

ಸಾಮಾಜಿಕ ಮಾಧ್ಯಮ ಎಕ್ಸ್‌ನಲ್ಲಿ ಶೋಬಿತ್ ಬಾಕ್ಲಿವಾಲ್‌ ಎನ್ನುವವರು ಪೋಸ್ಟ್‌ ಹಂಚಿಕೊಂಡಿದ್ದು, ‘ಬೆಂಗಳೂರಿನಲ್ಲಿ ರೆಸ್ಟೋರೆಂಟ್‌ವೊಂದರಲ್ಲಿ ಕಾಣಿಸಿಕೊಂಡ ಫಲಕ’ ಎಂದು ಬರೆದುಕೊಂಡಿದ್ದಾರೆ. 

ಈ ಪೋಸ್ಟ್‌ಗೆ ಬಳಕೆದಾರರೊಬ್ಬರು, ’ಬೆಂಗಳೂರಿನಲ್ಲಿ ಅನೇಕ ಹೋಟೆಲ್‌, ರೆಸ್ಟೋರೆಂಟ್‌ಗಳಲ್ಲಿ ತಾಸುಗಟ್ಟಲೆ ಕಾಯಬೇಕಾದ ಸ್ಥಿತಿಯನ್ನು ನೋಡಿದ್ದೇನೆ. ಜನರು ಗಂಟೆಗಟ್ಟಲೆ ಕುಳಿತು ಹರಟುತ್ತಾರೆ, ಆದರೆ ಕನಿಷ್ಠ ಒಂದು ಪಾನೀಯವನ್ನೂ ಖರೀದಿ ಮಾಡುವುದಿಲ್ಲ. ಬಂಡವಾಳ ಹೂಡಿರುವ ಮಾಲೀಕರ ಬಗ್ಗೆ ಯೋಚಿಸಿದರೆ ಬೇಸರವಾಗುತ್ತದೆ’ ಎಂದು ಕಮಂಟ್ ಮಾಡಿದ್ದಾರೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.