ಕ್ಯಾಲಿಪೋರ್ನಿಯಾ: ಲಾಸ್ ಏಂಜಲೀಸ್ ಜಗತ್ತಿನ ಅತಿ ದುಬಾರಿ ನಗರವೆಂದು ಹೆಸರುಪಡೆದಿದೆ. ಈ ನಗರದಲ್ಲಿ ಬಿಹಾರ ಮೂಲದ ವ್ಯಕ್ತಿಯೊಬ್ಬರು ಚಹಾ, ಅವಲಕ್ಕಿ (ಪೋಹಾ) ಮಾರಿ ಹಣಗಳಿಸುತ್ತಿದ್ದಾರೆ.
ಪ್ರಭಾಕರ್ ಪ್ರಸಾದ್ ಎನ್ನುವವರು ಸಾಮಾಜಿಕ ಜಾಲತಾಣದಲ್ಲಿ ‘ಚಾಯ್ ಗಾಯ್’ ಎಂಬ ಖಾತೆಯಲ್ಲಿ ತಮ್ಮ ವಿಡಿಯೊಗಳನ್ನು ಹಂಚಿಕೊಳ್ಳುತ್ತಿದ್ದು, ಸದ್ಯ ಎಲ್ಲರ ಗಮನ ಸೆಳೆದಿದೆ.
ಇನ್‌ಸ್ಟಾಗ್ರಾಂನಲ್ಲಿ ಹಿಂದುಪಿಡಿಯಾ ಎನ್ನುವ ಖಾತೆಯಲ್ಲಿ ಈ ವ್ಯಕ್ತಿಯ ಬಗ್ಗೆ ವಿಡಿಯೊ ಮಾಡಿ ಹಂಚಿಕೊಳ್ಳಲಾಗಿತ್ತು.
ತಮ್ಮ ಮಾರಾಟದ ಬಗ್ಗೆ ಮಾಹಿತಿ ನೀಡಿರುವ ಪ್ರಭಾಕರ್, ‘ಹಿಂದಿಯಲ್ಲೇ ಮಾತನಾಡುತ್ತಾ ವ್ಯವಹಾರ ಮಾಡುತ್ತೇನೆ. ಒಂದು ಕಪ್ ಚಹಾಗೆ ₹782, ಅವಲಕ್ಕಿ₹1,512ರಂತೆ ಮಾರಾಟ ಮಾಡುತ್ತೇನೆ’ ಎಂದಿದ್ದಾರೆ.
ಸದ್ಯ ಈ ವಿಡಿಯೊ ನೋಡಿರುವ ನೆಟ್ಟಿಗರು, ‘5 ಕಪ್ ಚಹಾ ಮತ್ತು 5 ಪ್ಲೇಟ್ ಅವಲಕ್ಕಿ ನನ್ನ ತಿಂಗಳ ಸಂಬಳಕ್ಕೆ ಸರಿಯಾಗಿದೆ’ ಎಂದಿದ್ದಾರೆ. ಇನ್ನೊಬ್ಬರು ‘ಇವರಿಗೆ ಸಮೋಸಾ ಮತ್ತು ಜಿಲೇಬಿಯನ್ನೂ ಮಾರಲು ಹೇಳಿ’ ಎಂದಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.