ತಿರುವನಂತಪುರಂ: ಬಹುತೇಕ ಮಹಿಳೆಯರು ತಾವು ಅಜ್ಜಿಯಾದ ಮೇಲೆ ಮನೆ ಮೂಲೆ ಸೇರಿ ಬಿಡುತ್ತಾರೆ. ಆದರೆ, ಕೇರಳದ ಈ ಅಜ್ಜಿ ಡಾಕ್ಟರುಗಳು ಅದಕ್ಕೆ ತದ್ವಿರುದ್ಧ.
ಕೇರಳದ ಕ್ಯಾಲಿಕಟ್ ಮೆಡಿಕಲ್ ಕಾಲೇಜಿನ 1966 ರ ಬ್ಯಾಚ್‌ನ ಸ್ನೇಹಿತೆಯರು ಅಂದರೆ ಈಗ 75 ವರ್ಷ ವಯಸ್ಸಿನ ಈ ಅಜ್ಜಿಯರು ಬಹಳ ಖುಷಿಯಿಂದ ಸಾಮೂಹಿಕ ನೃತ್ಯ ಮಾಡಿದ್ದಾರೆ.
ಅಜ್ಜಿ ಡಾಕ್ಟರ್‌ಗಳ ಈ ಜೋಶ್ ಕಂಡು ಹಲವರು ಮೆಚ್ಚಿಗೆ ಸೂಚಿಸಿದ್ದಾರೆ. ಹಳೇ ವಿದ್ಯಾರ್ಥಿಗಳ ಸಮಾಗಮದಲ್ಲಿ ಅಜ್ಜಿಯರು ಸಾಮೂಹಿಕ ನೃತ್ಯ ಮಾಡಿದ್ದಾರೆ.
ಈ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ಗಮನ ಸೆಳೆದಿದ್ದು ಹಲವರು ಮೆಚ್ಚಿಗೆ ಸೂಚಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.