ADVERTISEMENT

ಅತಿಯಾದ ಕೆಲಸದ ಒತ್ತಡದಿಂದ ಚೀನಾ ಟೆಕಿ ಸಾವು: ಸಾಯುತ್ತಿದ್ದರೂ ಬಿಡಲಿಲ್ಲ!

​ಪ್ರಜಾವಾಣಿ ವಾರ್ತೆ
Published 25 ಜನವರಿ 2026, 5:59 IST
Last Updated 25 ಜನವರಿ 2026, 5:59 IST
<div class="paragraphs"><p>ಕೆಲಸದ ಒತ್ತಡ</p></div>

ಕೆಲಸದ ಒತ್ತಡ

   

– ಗೆಟ್ಟಿ ಚಿತ್ರ

ಬೆಂಗಳೂರು: ಕೆಲವು ಕಂಪನಿಗಳಲ್ಲಿ ಉದ್ಯೋಗಿಗಳಿಗೆ ಅತಿಯಾದ ಕೆಲಸದ ಒತ್ತಡವನ್ನು ನೀಡಿ ಕಡೆಗೆ ಉದ್ಯೋಗಿಗಳ ಪ್ರಾಣಕ್ಕೆ ಕುತ್ತು ಬರುವ ಅನೇಕ ಪ್ರಕರಣಗಳು ಇತ್ತೀಚೆಗೆ ಹೆಚ್ಚು ವರದಿಯಾಗುತ್ತಿವೆ.

ADVERTISEMENT

ಇದೇ ರೀತಿ ಚೀನಾದಲ್ಲಿಯೂ ಒಂದು ಪ್ರಕರಣ ನಡೆದಿದ್ದು ಆ ದೇಶದಲ್ಲಿ ಕೆಲಸದ ಒತ್ತಡದ ಕುರಿತು ದೊಡ್ಡ ಮಟ್ಟದಲ್ಲಿ ಚರ್ಚೆ ನಡೆಯುತ್ತಿವೆ.

ಚೀನಾದ Guangzhou ಪ್ರಾಂತ್ಯದಲ್ಲಿರುವ  ಟೆಕ್‌ ಕಂಪನಿಯೊಂದರಲ್ಲಿ ಕೆಸಲ ಮಾಡುತ್ತಿದ್ದ 32 ವರ್ಷದ Gao Guanghui ಎಂಬ ವ್ಯಕ್ತಿ ಇತ್ತೀಚೆಗೆ ಹೃದಯಾಘಾತದಿಂದ ಮೃತಪಟ್ಟಿದ್ದರು.

ಮೃತನ ಲ್ಯಾಪ್‌ಟಾಪ್‌ ಹಾಗೂ ಕಂಪನಿಯ ಮೇಲ್‌ಗಳನ್ನು ಹಾಗೂ ಆ ವ್ಯಕ್ತಿಯ ಮೊಬೈಲ್‌ ಸಂಭಾಷಣೆಗಳನ್ನು ಪೊಲೀಸರ ಅನುಮತಿಯೊಂದಿಗೆ ಪರಿಶೀಲಿಸಿದ ಮೃತಳ ಪತ್ನಿಗೆ ಅಚ್ಚರಿ ಕಾದಿತ್ತು.

Gao Guanghui ಅವರಿಗೆ ಕಂಪನಿ ಕೆಲಸದ ಸಲುವಾಗಿ ನಿರಂತರ ಒತ್ತಡ ಹೇರುತ್ತಿತ್ತು. ಐದಾರು ಜನ ಮಾಡುವ ಕೆಲಸವನ್ನು ಒಬ್ಬರಿಂದ ನಿರೀಕ್ಷೆ ಮಾಡುತ್ತಿತ್ತು. ಇದರ ಪರಿಣಾಮವಾಗಿ Gao ಅವರ ಆರೋಗ್ಯದಲ್ಲಿ ಏರುಪೇರಾಗಿತ್ತು. ಆಸ್ಪತ್ರೆಗೆ ದಾಖಲಾದರೂ ಕೆಲಸ ಮಾಡಿದ್ದರು. ಅಲ್ಲದೇ ಆತ ಸಾಯುವ ದಿನ ಐದಾರು ಸಾರಿ ಕಂಪನಿಯ ಮೇಲಾಧಿಕಾರಿಗಳು ಜೊತೆ ಮಾತನಾಡಿದ್ದರು ಎಂದು Gao ಅವರ ಪತ್ನಿ ಆರೋಪಿಸಿದ್ದಾರೆ.

ಈ ಸುದ್ದಿ ಚೀನಾದಲ್ಲಿ ಹೆಚ್ಚು ಚರ್ಚೆಯಾಗುತ್ತಿದ್ದು, ಚೀನಾದಲ್ಲಿ ಟೆಕಿಗಳಿಗೆ ಅತಿ ಹೆಚ್ಚು ಕೆಲಸ ಮಾಡಲು ಹೆಚ್ಚು ಒತ್ತಡ ಹೇರುತ್ತಿದ್ದಾರೆ ಎಂದು ಆರೋಪಿಸಿದ್ದಾರೆ. ಈ ಕುರಿತು ದಿ ಹಿಂದೂಸ್ತಾನ್‌ ಟೈಮ್ಸ್‌ ವರದಿ ಮಾಡಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.