ನೀರಿನ್ನು ಪರೀಕ್ಷೆಗೆ
ಒಳಪಡಿಸಿರುವುದು.
ಚಿತ್ರ ಕೃಪೆ; River Monsters
ಭಾರತದ ಪ್ರಮುಖ ನದಿಗಳಲ್ಲಿ ಗಂಗಾ ನದಿಯೂ ಒಂದು. ಧಾರ್ಮಿಕವಾಗಿ ಗಂಗಾ ನದಿಗೆ ವಿಶೇಷ ಸ್ಥಾನಮಾನವಿದೆ. ಇತ್ತೀಚೆಗೆ ಬ್ರಿಟಿಷ್ ಜೀವಶಾಸ್ತ್ರಜ್ಞರೊಬ್ಬರು ಗಂಗಾ ನದಿಯ ನೀರನ್ನು ಪರೀಕ್ಷೆಗೆ ಒಳಪಡಿಸಿ, ನೀರಿನ ಸ್ವಚ್ಛತೆ ಕುರಿತ ವೀಡಿಯೊವನ್ನು ಹಂಚಿಕೊಂಡಿದ್ದಾರೆ.
ಇಂಗ್ಲೆಂಡ್‌ನ ದೂರದರ್ಶನ ನಿರೂಪಕ, ಲೇಖಕ ಹಾಗೂ ಜೀವಶಾಸ್ತ್ರಜ್ಞ ‘ಜೆರೆಮಿ ವೇಡ್’ ಅವರು ಗಂಗಾ ನದಿಯ ನೀರನ್ನು ಪರೀಕ್ಷೆಗೆ ಒಳಪಡಿಸಿದ್ದಾರೆ. ನೀರನ್ನು ಶುದ್ಧೀಕರಿಸುವ ರಾಸಾಯನಿಕ ತುಂಬಿದ ಎರಡು ಡಬ್ಬಿಗಳನ್ನು ತೆಗೆದುಕೊಳ್ಳುತ್ತಾರೆ. ಒಂದಕ್ಕೆ ಗಂಗಾ ನದಿಯ ನೀರನ್ನು ತುಂಬಿಸುತ್ತಾರೆ. ಮತ್ತೊಂದು ಡಬ್ಬಿಗೆ ಖನಿಜಯುಕ್ತ ನೀರನ್ನು ಬೆರೆಸುತ್ತಾರೆ.
‘ಖನಿಜಯುಕ್ತ ನೀರನ್ನು ಪರೀಕ್ಷೆಗೆ ಒಳಪಡಿಸಿದಾಗ ಆ ನೀರು ಗುಲಾಬಿ ಬಣ್ಣಕ್ಕೆ ತಿರುಗಿದೆ. ಇದು ಶುದ್ಧವಾದ ನೀರು ಎಂದು ಜೆರೆಮಿ ವೇಡ್ ವಿವರಿಸಿದ್ದಾರೆ.‘
‘ಗಂಗಾನದಿಯ ನೀರನ್ನು ಪರೀಕ್ಷೆಗೆ ಒಳಪಡಿಸಿದಾಗ ಅದರ ನೀರು ತಿಳಿ ಕಂದು ಬಣ್ಣಕ್ಕೆ ತಿರುಗಿದೆ. ಈ ನೀರು ಕಲುಷಿತವಾಗಿದ್ದು, ಕೋಲಿಫಾರ್ಮ್ ಬ್ಯಾಕ್ಟೀರಿಯಾಗಳಿಂದ ಕೂಡಿದೆ. ಅಲ್ಲದೇ ನೀರಿಗೆ ಮಾನವ ತ್ಯಾಜ್ಯ ಹೆಚ್ಚಿನ ಪ್ರಮಾಣದಲ್ಲಿ ಸೇರುತ್ತಿದೆ. ಗಂಗಾ ನದಿಯ ನೀರು ಅಶುದ್ಧವಾಗಿದೆ ಎಂದು ಹೇಳುವುದನ್ನು ಅನೇಕ ಹಿಂದೂಗಳು ತೀವ್ರವಾಗಿ ಖಂಡಿಸುತ್ತಾರೆ’ ಎಂದು ಅವರು ಹೇಳಿದ್ದಾರೆ.
ಸಾಧುವಿನ ಜತೆಗೆ ‘ಜೆರೆಮಿ ವೇಡ್‘ ನೀರಿನಲ್ಲಿ ಈಜುತ್ತಾರೆ. ನಂತರ ಗಂಗಾ ನದಿಯ ನೀರನ್ನು ಕುಡಿಯುತ್ತಾರೆ. ‘ನನಗೆ ಆರೋಗದ್ಯದಲ್ಲಿ ಏನಾದರೂ ಏರುಪೇರು ಆಗುತ್ತದೆಯೇ ಎಂಬುದನ್ನು ಕಾದು ನೋಡಬೇಕಿದೆ‘ ಎಂದು ಅವರು ಹೇಳಿದ್ದಾರೆ.
ಸಾಮಾಜಿಕ ಮಾಧ್ಯಮದಲ್ಲಿ ವ್ಯಾಪಕ ಪ್ರತಿಕ್ರಿಯೆಗಳು ವ್ಯಕ್ತವಾಗಿದೆ. ‘ಧಾರ್ಮಿಕ ನಂಬಿಕೆಗಳು ಗಂಗೆಯನ್ನು ಕೊಲ್ಲುತ್ತಿವೆ. ಜ್ಞಾನವಿಲ್ಲದ ಶಿಕ್ಷಣವು ಅಜ್ಞಾನದ ಮತ್ತೊಂದು ರೂಪವಾಗಿದೆ.’ ‘ಇಡೀ ಭಾರತವು ಧರ್ಮದ ಹೆಸರಿನಲ್ಲಿ ವಿನಾಶದತ್ತ ಸಾಗುತ್ತಿದೆ. ಯಾವುದೇ ಧರ್ಮವು ಇತರರಿಗಿಂತ ಉತ್ತಮವಾಗಿಲ್ಲ, ಯಾವುದೇ ಧರ್ಮಗ್ರಂಥವು ವಿಜ್ಞಾನವನ್ನು ಸೋಲಿಸಲು ಸಾಧ್ಯವಿಲ್ಲ’, ‘ನಮ್ಮ ಪ್ರೀತಿಯ ಗಂಗಾ ನದಿಯನ್ನು ಸ್ವಚ್ಛಗೊಳಿಸುವ ಹೆಸರಿನಲ್ಲಿ ಎಲ್ಲಾ ತೆರಿಗೆದಾರರ ಹಣವನ್ನು ವ್ಯರ್ಥ ಮಾಡುವುದನ್ನು ನೋಡುವುದು ತುಂಬಾ ದುರದೃಷ್ಟಕರ’ ಎಂದು ಕಮೆಂಟ್ ಮಾಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.