ADVERTISEMENT

ಡೊಮಿನೋಸ್ ಪಿಜ್ಜಾ ಡೆಲಿವರಿ ಮಹಿಳೆ ಹಿಡಿದು ಥಳಿಸಿದ ಯುವತಿಯರು: ವಿಡಿಯೊ ವೈರಲ್!

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 14 ಜೂನ್ 2022, 11:30 IST
Last Updated 14 ಜೂನ್ 2022, 11:30 IST
ನಂದಿನಿ ಯಾದವ್ ಅವರನ್ನು ಥಳಿಸುತ್ತಿರುವುದು– ಟ್ವಿಟರ್ ಕೃಪೆ ಚಿತ್ರ
ನಂದಿನಿ ಯಾದವ್ ಅವರನ್ನು ಥಳಿಸುತ್ತಿರುವುದು– ಟ್ವಿಟರ್ ಕೃಪೆ ಚಿತ್ರ    

ಬೆಂಗಳೂರು: ಪಿಜ್ಜಾ ಡೆಲಿವರಿ ಮಹಿಳೆಗೆ ನಾಲ್ವರು ಯುವತಿಯರು ಸೇರಿಕೊಂಡು ಮನಸೋಇಚ್ಛೆ ಥಳಿಸಿರುವ ಘಟನೆ ಮಧ್ಯಪ್ರದೇಶದ ಇಂಧೋರ್‌ನಲ್ಲಿ ನಡೆದಿದೆ.

ನಂದಿನಿ ಯಾದವ್ ಎನ್ನುವ ಡೊಮಿನೋಸ್ ಮಿಜ್ಜಾ ಡೆಲಿವರಿ ಮಹಿಳೆ ಮನೆಯೊಂದಕ್ಕೆ ಪಿಜ್ಜಾ ತಲುಪಿಸಲು ಹೋಗಿದ್ದರು. ಈ ವೇಳೆ ನಾಲ್ವರು ಯುವತಿಯರು ಕ್ಷುಲ್ಲಕ ಕಾರಣದಿಂದ ಬಡಿಗೆಯಿಂದ ನಯನಾ ಅವರ ಮೇಲೆ ಹಲ್ಲೆ ನಡೆಸಿದ್ದಾರೆ.

ಘಟನೆಗೆ ಸಂಬಂಧಿಸಿದಂತೆ ಟ್ವಿಟರ್‌ನಲ್ಲಿ ದೀಪಿಕಾ ಭಾರದ್ವಾಜ ಎನ್ನುವರು ವಿಡಿಯೊ ಹಂಚಿಕೊಂಡಿದ್ದು ಮಹಿಳೆಗೆ ನ್ಯಾಯ ಸಿಗಬೇಕು ಎಂದು ಒತ್ತಾಯಿಸಿದ್ದಾರೆ.

ADVERTISEMENT

ಇನ್ನು ಇತ್ತೀಚಿನ ವರ್ತಮಾನಗಳ ಪ್ರಕಾರ ನಂದಿನಿ ಯಾದವ್ ಯುವತಿಯರ ವಿರುದ್ಧ ಸ್ಥಳಿಯ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದು ತನಿಖೆ ನಡೆಯುತ್ತಿದೆ ಎನ್ನಲಾಗಿದೆ. ಪಿಜ್ಜಾ ಡೆಲಿವರಿ ಕೊಡುವಾಗ ಮಾತಿಗೆ ಮಾತು ಬೆಳೆದು ಯುವತಿಯರು ಹಲ್ಲೆ ಮಾಡಿದ್ದಾರೆ ಎಂದು ಕೆಲವರು ಆರೋಪಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.