ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿದ ವಿಡಿಯೊದಲ್ಲಿನ ದೃಶ್ಯ
ಭುವನೇಶ್ವರ: ಪ್ರಸಿದ್ಧ ಪುರಿ ಜಗನ್ನಾಥ ದೇವಾಲಯದ ಮೇಲಿರುವ ಧ್ವಜದ ಬಣ್ಣದ ಬಟ್ಟೆ ಅಂಟಿಕೊಂಡ ಗಿಡುಗ ದೇಗುಲದ ಗೋಪುರವನ್ನು ಸುತ್ತು ಹಾಕುತ್ತಿರುವ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ಹರಿದಾಡುತ್ತಿದೆ.
ವರದಿಗಳ ಪ್ರಕಾರ, ಶನಿವಾರ ಸಂಜೆ 5 ಗಂಟೆಯ ಹೊತ್ತಿಗೆ ಗಿಡುಗ ದೇಗುಲದ ಗೋಪುರದ ಸುತ್ತ ಹಾರಾಡುತ್ತಿರುವುದು ಕಂಡುಬಂದಿದೆ. ಗಿಡುಗದ ಕಾಲಿಗೆ ದೇಗುಲದ ಮೇಲಿರುವ ಕೇಸರಿ ಬಣ್ಣದ ಧ್ವಜದಂತೆಯೇ ಕಾಣುವ ಬಟ್ಟೆಯೊಂದು ಸಿಲುಕಿಕೊಂಡಿರುವುದು ವಿಡಿಯೊದಲ್ಲಿ ಸೆರೆಯಾಗಿದೆ.
ಆದರೆ ಈವರೆಗೆ ದೇಗುಲದ ಆಡಳಿತ ಮಂಡಳಿ ಈ ಬಗ್ಗೆ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಅಲ್ಲದೆ, ಅದು ಧ್ವಜದ ಬಟ್ಟೆ ಹೌದೋ ಅಲ್ಲವೋ ಎಂದೂ ಯಾರೂ ಖಚಿತಪಡಿಸಿಲ್ಲ.
ವಿಡಿಯೊ ಹರಿದಾಡುತ್ತಿದ್ದಂತೆ ಅಚ್ಚರಿಗೊಂಡ ನೆಟ್ಟಿಗರು ತರಹೇವಾರಿ ಕಮೆಂಟ್‌ಗಳನ್ನು ಮಾಡಿದ್ದಾರೆ. ಹಲವರಂತೂ ದೊಡ್ಡ ಗಂಡಾಂತರವೇ ಕಾದಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ವಿಡಿಯೊ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.