ಯುವತಿಯೊಬ್ಬರು ಒಂದೇ ಬಾರಿಗೆ 15 ಚಿತ್ರಗಳನ್ನು ಬಿಡಿಸುತ್ತಾರೆ ಎನ್ನಲಾದ ವಿಡಿಯೊವೊಂದನ್ನು ಮಹೀಂದ್ರಾ ಗ್ರೂಪ್ ಅಧ್ಯಕ್ಷ ಆನಂದ್ ಮಹೀಂದ್ರಾ ತಮ್ಮ ಟ್ವಿಟರ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.
ನಕಲಿ ಅಥವಾ ಎಡಿಟೆಡ್ ವಿಡಿಯೊ ರೀತಿ ಕಾಣುವ ಈ ವಿಡಿಯೊ ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿದೆ.
ವಿಡಿಯೊದಲ್ಲಿ ಏನಿದೆ?
ಲಂಬ ಮತ್ತು ಸಮತಲವಾಗಿ ಕೋಲುಗಳಿಗೆಬಣ್ಣದ ಪೆನ್ನುಗಳನ್ನು ಕಟ್ಟಿದ ಯುವತಿ. ಬಳಿಕ 15 ಕ್ಯಾನ್ವಾಸ್ ಮೇಲೆ ಒಂದೇ ಬಾರಿಗೆ ಸ್ವಾತಂತ್ರ್ಯ ಹೋರಾಟಗಾರರ ವಿವಿಧ ಭಾವಚಿತ್ರಗಳನ್ನು ಚಿತ್ರಿಸಲು ಪ್ರಾರಂಭಿಸಿದರು. ಕೆಲವೇ ಸಮಯದಲ್ಲಿ ಎಲ್ಲ ಭಾವಚಿತ್ರಗಳನ್ನು ರಚಿಸಿ ಮುಗಿಸಿದರು. ಆ ಯುವತಿ ರಚಿಸಿದ ಭಾವಚಿತ್ರಗಳ ದೃಶ್ಯ ಸಹ ವಿಡಿಯೊದಲ್ಲಿ ಕಾಣುತ್ತದೆ.
ಈ ವಿಡಿಯೊ ಹಂಚಿಕೊಂಡಿರುವ ಮಹೀಂದ್ರಾ,‘ಇದು ಹೇಗೆ ಸಾಧ್ಯ? ಅವಳು ನಿಜವಾಗಿಯೂ ಪ್ರತಿಭಾವಂತ ಕಲಾವಿದೆ ಆಗಿರಬೇಕು. ಆದರೆ, ಒಂದೇ ಬಾರಿಗೆ 15 ಭಾವಚಿತ್ರಗಳನ್ನು ಚಿತ್ರಿಸುವುದು ಕಲೆಗಿಂತ ಹೆಚ್ಚಿನದು. ಇದು ಒಂದು ಪವಾಡ! ಅವಳ ಸಮೀಪ ಇರುವ ಯಾರಾದರೂ ಈ ಸಾಧನೆ ಬಗ್ಗೆ ಖಚಿತಪಡಿಸಬಹುದೇ? ಇದು ನಿಜವೇ ಆಗಿದ್ದರೆ ಈ ಯುವತಿಯನ್ನು ಪ್ರೋತ್ಸಾಹಿಸಬೇಕು. ಹಾಗಾಗಿ, ನಾನು 'ಸ್ಕಾಲರ್‌ಶಿಪ್ ಮತ್ತು ಇತರೆ ಬೆಂಬಲವನ್ನು ಒದಗಿಸಲು ಇಚ್ಛಿಸುತ್ತೇನೆ’ ಎಂದುಬರೆದುಕೊಂಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.