ಭಾರತ ಕ್ರಿಕೆಟ್ ತಂಡದಲ್ಲಿ ಆಕರ್ಷಕ ಬ್ಯಾಟಿಂಗ್ ಶೈಲಿಯಿಂದಲೇ ಜನಪ್ರಿಯರಾದವರು ವಿರಾಟ್ ಕೊಹ್ಲಿ. ಅತ್ಯುತ್ತಮ ಆಟದೊಂದಿಗೆ ಆಕ್ರಮಣಕಾರಿ ಹೊಡೆತಗಳಿಗೆ ಕೊಹ್ಲಿ ಫೇಮಸ್. ಲಡಾಕ್‌ನ ಬಾಲಕಿಯೊಬ್ಬಳು ಕೊಹ್ಲಿ ರೀತಿಯಲ್ಲೇ ಬ್ಯಾಟ್ ಬೀಸುವ ಮೂಲಕ ಅಂತರ್ಜಾಲ ಜಗತ್ತಿನಲ್ಲಿ ಜನಪ್ರಿಯವಾಗಿದ್ದಾಳೆ. ಆಕೆಯ ಕ್ರಿಕೆಟ್ ವಿಡಿಯೊ ಸಾಮಾಜಿಕ ಜಾಲತಾಣದಲ್ಲೀಗ ವೈರಲ್ ಆಗಿದೆ.
ಕ್ರಿಕೆಟ್ ಅನ್ನು ಧರ್ಮವೆಂದು ಕಾಣುವ ದೇಶದಲ್ಲಿ ಭಾರತೀಯ ಕ್ರಿಕೆಟ್ ತಂಡ ಸೇರುವುದು ಹಲವರ ಕನಸು. ಆದರೆ ನನಸಾಗುವುದು ಕೆಲವರಿಗೆ ಮಾತ್ರ. ಈಕೆ ಮಾತ್ರ ಯಾವ ರಾಜ್ಯ, ರಾಷ್ಟ್ರೀಯ ಪಂದ್ಯವನ್ನೂ ಆಡದೆ ನೆಟ್ಟಿಗರ ಪಾಲಿಗೆ ಲೇಡಿ ವಿರಾಟ್ ಕೊಹ್ಲಿ ಎನಿಸಿದ್ದಾಳೆ.
ಲಡಾಕ್‌ನ ಶಿಕ್ಷಣ ಇಲಾಖೆ ಈ ವಿಡಿಯೊವನ್ನು ಟ್ವೀಟ್ ಮಾಡಿದೆ. 6ನೇ ತರಗತಿಯಲ್ಲಿ ಓದುತ್ತಿರುವ ಮಕ್ಸೂಮಾಕೊಹ್ಲಿ ರೀತಿಯಲ್ಲೇ ಬ್ಯಾಟ್ ಮಾಡುವ ಹುಡುಗಿ. ವಿಡಿಯೊ ಈಗ ಅಂತರ್ಜಾಲದಲ್ಲಿ ವೈರಲ್ ಆಗಿದೆ.
‘ಮನೆಯಲ್ಲಿ ತಂದೆ, ಶಾಲೆಯಲ್ಲಿ ಗುರುಗಳು ಕ್ರಿಕೆಟ್ ಆಡಲು ನನಗೆ ಪ್ರೋತ್ಸಾಹ ನೀಡುತ್ತಾರೆ. ನಾನು ಕೊಹ್ಲಿ ರೀತಿಯಲ್ಲಿ ಆಡಲು ಎಲ್ಲ ಶ್ರಮ ಹಾಕುತ್ತೇನೆ’ ಎಂದು ಮಕ್ಸೂಮಾಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.