ADVERTISEMENT

ವೈರಲ್ | ಈ ಪೊಲೀಸ್ ಠಾಣೆಯ ಲಾಕಪ್‌ಗೆ 4 ಸ್ಟಾರ್ ರೇಟಿಂಗ್ !

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 29 ನವೆಂಬರ್ 2019, 6:47 IST
Last Updated 29 ನವೆಂಬರ್ 2019, 6:47 IST
   

ಚೆನ್ನೈ: ತಮಿಳುನಾಡಿನಲ್ಲಿ ಪೊಲೀಸ್‌ ಠಾಣೆಯೊಂದರ ಬಗ್ಗೆ ವ್ಯಕ್ತಿಯೊಬ್ಬರು ಅಪ್‌ಡೇಟ್ ಮಾಡಿದ ಗೂಗಲ್‌ ರಿವ್ಯೂಸಾಮಾಜಿಕ ಜಾಲತಾಣಗಳಲ್ಲಿವೈರಲ್‌ ಆಗಿದೆ.

ಇದರಿಂದ ಸ್ಫೂರ್ತಿಪಡೆದ ಜನರು ಪೊಲೀಸ್ ಠಾಣೆಯ ಬಗ್ಗೆ ತಮ್ಮ ಅಭಿಪ್ರಾಯಗಳನ್ನು ಸಾಮಾಜಿಕ ಜಾಲ ತಾಣಗಳಲ್ಲಿ ಪೋಸ್ಟ್‌ ಮಾಡುತ್ತಿದ್ದಾರೆ.

ತಿರುಮುಲ್ಲೈವೊಯಲ್ ಟಿ10 ಪೊಲೀಸ್ ಠಾಣೆಯಲ್ಲಿ ರಾತ್ರಿ ತಂಗಿದ ಅನುಭವವನ್ನುಲೋಗೇಶ್ವರನ್ ಎಸ್‌. ಎನ್ನುವವರು ನ.26ಕ್ಕೆ ಮೊದಲ ಬಾರಿಗೆ ಗೂಗಲ್‌ ಮ್ಯಾಪ್‌ನಲ್ಲಿ ಬರೆದಿದ್ದರು.

ADVERTISEMENT

ಹೊಟೆಲ್‌ಗಳಲ್ಲಿ ತಂಗಿದ ಅನುಭವವನ್ನು ವಿವರಿಸುವ ರೀತಿಯಲ್ಲಿ ಬರೆದಿರುವಲೋಗೇಶ್ವರನ್, ತನ್ನನ್ನುತಾನು ಲೋಕಲ್ ಗೈಡ್ ಎಂದು ಕರೆದುಕೊಂಡಿದ್ದಾರೆ. ಮಧ್ಯರಾತ್ರಿಯಲ್ಲಿ ದಾಖಲೆ ಪತ್ರಗಳಿಲ್ಲದೆ ದ್ವಿಚಕ್ರ ವಾಹನ ಚಲಾಯಿಸುತ್ತಿದ್ದಾಗ ಪೊಲೀಸರು ಬಂಧಿಸಿದರು. ಮಾರನೇ ದಿನ ಮುಂಜಾನೆ ದಾಖಲೆಪತ್ರಗಳನ್ನು ತೋರಿಸಿದ ನಂತರ ಮನೆಗೆ ಕಳಿಸಿದರು.

ನಗರದ ಮುಖ್ಯರಸ್ತೆಯಲ್ಲಿರುವ ಪೊಲೀಸ್ ಠಾಣೆಯು ಸ್ವಚ್ಛವಾಗಿದೆ, ಇಲ್ಲಿನ ಸಿಬ್ಬಂದಿಗಳುಮೃದು ಸ್ವಭಾವದವರುಯಾವುದೇಕಿರುಕುಳ ಕೊಡಲಿಲ್ಲ ಎಂದು ವಿವರಿಸಿದ್ದಾರೆ.

ಠಾಣೆಯ ಸಿಬ್ಬಂದಿ ನನ್ನನ್ನು ಬಿಡುಗಡೆ ಮಾಡುವಾಗ ಲಂಚ ಕೇಳಲಿಲ್ಲ ಎಂದುವಿವರಿಸಿರುವಲೋಗೇಶ್ವರನ್ ನೀವು ನಿಮ್ಮ ಜೀವನದಲ್ಲಿ ನೋಡಲೇಬೇಕಾದ ಸ್ಥಳ ಈ ಪೊಲೀಸ್ ಠಾಣೆ ಎಂಬ ಒಕ್ಕಣೆಯೊಂದಿಗೆ4 ಸ್ಟಾರ್ ನೀಡಿದ್ದಾರೆ. ಇದಾದ ನಂತರ ಹಲವರು ರೇಟಿಂಗ್‌ ಕೊಟ್ಟಿದ್ದಾರೆ.3.7ಸರಾಸರಿ ಸ್ಟಾರ್‌ ರೇಟಿಂಗ್ ಇದ್ದತಿರುಮುಲ್ಲೈವೊಯಲ್ ಪೊಲೀಸ್‌ ಠಾಣೆಯ ಗೂಗಲ್ ರೇಟಿಂಗ್ ಇದೀಗ4.2ಕ್ಕೆ ಏರಿದೆ.

ಇದರಿಂದಾಗಿ ಪ್ರಭಾವಿತರಾದ ಜನರು ಸಾಮಾಜಿಕ ಜಾಲತಾಣಗಳಲ್ಲಿತಮ್ಮ ಸಮೀಪದ ಪೊಲೀಸ್ ಠಾಣೆಗಳ ಬಗ್ಗೆ ಗೂಗಲ್ಮ್ಯಾಪ್‌ನಲ್ಲಿ ರಿವ್ಯೂ ಬರೆಯಲು ಆರಂಭಿಸಿದ್ದಾರೆ.

ಸಾಮಾಜಿಕ ಜಾಲತಾಣಗಳಲ್ಲಿ ಪೊಲೀಸ್‌ ಠಾಣೆಗಳ ಬಗ್ಗೆ ಸಾಕಷ್ಟು ಜನರು ಚರ್ಚೆ ಮಾಡುತ್ತಿರುವ ವಿಷಯ ಅರಿವಿಗೆ ಬಂದಿದೆ.ಈ ಕುರಿತು ತನಿಖೆ ನಡೆಸಲು ಸೂಚಿಸಿದ್ದಾರೆ. ಕೆಲ ವಿಮರ್ಶೆಗಳೇನೋ ಚೆನ್ನಾಗಿವೆ. ಆದರೆ ಒಟ್ಟಾರೆಯಾಗಿ ಇದುಒಳ್ಳೆಯ ಬೆಳವಣಿಗೆಯಲ್ಲ ಎಂದು ಡಿಸಿಪಿಈಶ್ವರನ್ ಹೇಳಿದ್ದಾರೆ.

ಕಾಕತಾಳೀಯ ಎಂಬಂತೆ, ಈ ಹಿಂದೆ ಶ್ರೀಲಂಕಾದಲ್ಲಿ ವಿಜೆಶೇಕರ ಪಥುಜನ್‌ ಎನ್ನುವವರು ಕುಲ್ಲುಪಿಟ್ಯ್ ಪೊಲೀಸ್ ಠಾಣೆಗೆ 5–ಸ್ಟಾರ್ ರೇಟಿಂಗ್‌ ನೀಡಿದ್ದು ಸಾಮಾಜಿಕ ಜಾಲಾತಾಣಗಳಲ್ಲಿ ವೈರಲ್ ಅಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.