ADVERTISEMENT

ತುಂಬಿ ತುಳುಕುತ್ತಿರುವ ನಮ್ಮ ಮೆಟ್ರೊ: ಮುಂಬೈ ಲೋಕಲ್‌ ರೈಲಿಗೆ ನೆಟ್ಟಿಗರ ಹೋಲಿಕೆ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 27 ಅಕ್ಟೋಬರ್ 2023, 13:52 IST
Last Updated 27 ಅಕ್ಟೋಬರ್ 2023, 13:52 IST
<div class="paragraphs"><p>ಎಕ್ಸ್‌ ಚಿತ್ರ</p></div>

ಎಕ್ಸ್‌ ಚಿತ್ರ

   

ಬೆಂಗಳೂರು: ವಾಹನ ದಟ್ಟಣೆಯಿಂದ ಹೈರಾಣಾಗಿದ್ದ ಬೆಂಗಳೂರು ಜನರಿಗೆ ಹೆಚ್ಚು ಅನುಕೂಲವಾಗಿರುವ ನಮ್ಮ ಮೆಟ್ರೊ ವಿಸ್ತರಿಸಿದ ಮಾರ್ಗದಿಂದಾಗಿ ನಮ್ಮ ಮೆಟ್ರೊದಲ್ಲೂ ಈಗ ಜನದಟ್ಟಣೆ ಹೆಚ್ಚಾಗಿದೆ.

ನೇರಳೆ ಮಾರ್ಗದ ಮೆಟ್ರೊ ಚಲ್ಲಘಟ್ಟದಿಂದ ವೈಟ್‌ಫೀಲ್ಡ್‌ (ಕಾಡುಗೋಡಿ)ವರೆಗೆ ಸಂಚರಿಸುವುದರಿಂದ ಜನರಿಗೆ ಹೆಚ್ಚು ಅನುಕೂಲವಾಗಿರುವುದರಿಂದ ಮೆಟ್ರೊ ಅವಲಂಬಿಸಿದವರ ಸಂಖ್ಯೆಯೂ ಏರುಮುಖವಾಗಿದೆ. ಪರಿಣಾಮ ಮೆಟ್ರೊ ರೈಲುಗಳು ಪ್ರಯಾಣಿಕರಿಂದ ತುಂಬಿ ತುಳುಕುತ್ತಿವೆ. ಇದರ ಒಂದು ವಿಡಿಯೊ ಸಾಮಾಜಿಕ ಜಾಲತಾಣ ‘ಎಕ್ಸ್‌‘ನಲ್ಲಿ ಹರಿದಾಡುತ್ತಿದೆ. 

ADVERTISEMENT

ಮೆಟ್ರೊ ನಿಲ್ದಾಣದಲ್ಲಿ ರೈಲನ್ನು ಹತ್ತಲಾಗದಷ್ಟು ಮತ್ತು ಬಾಗಿಲು ಮುಚ್ಚಿಕೊಳ್ಳಲು ಆಗದಷ್ಟು ಜನ ತುಂಬಿಕೊಂಡಿರುವ ವಿಡಿಯೊವೊಂದು ಹರಿದಾಡುತ್ತಿದೆ. ಮೂಲತಃ ಈ ವಿಡಿಯೊವನ್ನು ಮುಗ್ಧಾ ವಾರಿಯರ್‌ ಎನ್ನುವವರು ಎಕ್ಸ್‌ನಲ್ಲಿ ಹಂಚಿಕೊಂಡಿದ್ದಾರೆ. ಬಳಿಕ ಇಂಡಿಯನ್‌ ಟೆಕ್‌ & ಇನ್ಫ್ರಾ ಖಾತೆ ಪೋಸ್ಟ್‌ ಮಾಡಿದೆ.

ಈ ವಿಡಿಯೊವನ್ನು 15 ಲಕ್ಷಕ್ಕೂ ಹೆಚ್ಚು ಜನರು ವೀಕ್ಷಿಸಿದ್ದಾರೆ. ಅಚ್ಚರಿಯ ವಿಚಾರವೆಂದರೆ ಬೆಂಗಳೂರಿನ ಮೆಟ್ರೊವನ್ನು ಮುಂಬೈ ಲೋಕಲ್‌ ರೈಲಿಗೆ ಹೋಲಿಸಿ ನೆಟ್ಟಿಗರು ಕಾಮೆಂಟ್‌ ಮಾಡಿದ್ದಾರೆ.

ವಿಶೇಷವಾಗಿ ಬೆಳಿಗ್ಗೆ ಮತ್ತು ಸಂಜೆಯ ಸಮಯ ಉದ್ಯೋಗಕ್ಕೆ ಹೋಗುವವರು, ಶಾಲಾ–ಕಾಲೇಜಿನ ವಿದ್ಯಾರ್ಥಿಗಳು ಮೆಟ್ರೊವನ್ನೇ ನೆಚ್ಚಿಕೊಂಡಿದ್ದಾರೆ. ಆದರೆ ಹತ್ತಲೂ ಅವಕಾಶ ಸಿಗದ ಹಲವರು ನಿಗದಿತ ಸ್ಥಳಕ್ಕೆ ಸಮಯಕ್ಕೆ ಸರಿಯಾಗಿ ತಲುಪಲಾಗದೆ ಪರಿತಪಿಸುತ್ತಿದ್ದಾರೆ. ಇದು ನಿರ್ವಹಣೆಯ ಕೊರತೆ ಎಂದೂ ಹಲವರು ದೂರಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.