ADVERTISEMENT

ಹೊಸ ಸೇಫ್ಟಿ ಪಿನ್‌ ಬಿಡುಗಡೆ ಮಾಡಿದ ಪ್ರಾಡಾ: ಬೆಲೆ ಕೇಳಿದರೆ ಅಚ್ಚರಿ ಗ್ಯಾರಂಟಿ!

ಏಜೆನ್ಸೀಸ್
Published 6 ನವೆಂಬರ್ 2025, 7:51 IST
Last Updated 6 ನವೆಂಬರ್ 2025, 7:51 IST
<div class="paragraphs"><p>ಪ್ರಾಡಾ ಕಂಪನಿ ಬಿಡುಗಡೆ ಮಾಡಿರುವ ಸೇಫ್ಟಿ ಪಿನ್‌ಗಳು&nbsp;</p></div>

ಪ್ರಾಡಾ ಕಂಪನಿ ಬಿಡುಗಡೆ ಮಾಡಿರುವ ಸೇಫ್ಟಿ ಪಿನ್‌ಗಳು 

   

ಚಿತ್ರಕೃಪೆ: ಎಕ್ಸ್‌

ಬೆಂಗಳೂರು: ಈ ಹಿಂದೆ ಕೊಲ್ಹಾಪುರಿ ಚಪ್ಪಲಿಯನ್ನು ಹೋಲುವ ₹1.02 ಲಕ್ಷದ ಪಾದರಕ್ಷೆ ತಯಾರಿಸಿ ಸುದ್ದಿಯಾಗಿದ್ದ ಇಟಲಿಯ ಐಷಾರಾಮಿ ಉತ್ಪನ್ನಗಳ ಫ್ಯಾಷನ್‌ ಕಂಪನಿ ಪ್ರಾಡಾ ಈಗ ಮತ್ತೆ ಸುದ್ದಿಯಲ್ಲಿದೆ. 

ADVERTISEMENT

ಆದರೆ ಈ ಬಾರಿ ಸೇಫ್ಟಿ ಪಿನ್‌ ವಿಚಾರವಾಗಿ ಸುದ್ದಿಯಾಗುತ್ತಿದೆ. ಹೌದು, ಪ್ರಾಡಾ ಕಂಪನಿ ಮಾರುಕಟ್ಟೆಗೆ ಸೇಫ್ಟಿ ಪಿನ್‌ವೊಂದನ್ನು ಬಿಡುಗಡೆ ಮಾಡಿದ್ದು ಇದರ ಬೆಲೆ ₹69 ಸಾವಿರ ($775) ಎನ್ನುವ ವಿಚಾರ ಈಗ ನೆಟ್ಟಿಗರ ಹುಬ್ಬೇರುವಂತೆ ಮಾಡಿದೆ.

ಫ್ಯಾಷನ್‌ ಇನ್‌ಫ್ಲುಯೆನ್ಸರ್‌ blackswansazy ಎನ್ನುವವರು ‘ಈ ರೀತಿಯಲ್ಲಿ ಹಣ ಮಾಡುವುದನ್ನು ನಿಲ್ಲಿಸಿ’ ಎಂಬ ಒಕ್ಕಣೆಯೊಂದಿಗೆ ವಿಡಿಯೊವನ್ನು ಹಂಚಿಕೊಂಡಿದ್ದಾರೆ,

ವಿಡಿಯೊದಲ್ಲಿ ಪ್ರಾಡಾ ಹೊಸ ಉತ್ಪನ್ನದ ಬಗ್ಗೆ ಹೇಳುತ್ತಾ, ‘ಶ್ರೀಮಂತರು ತಮ್ಮ ಹಣದಲ್ಲಿ ಏನೆಲ್ಲಾ ಮಾಡುತ್ತಾರೆ’ ಎಂದಿದ್ದಾರೆ. 

ಈ ವಿಡಿಯೊಗೆ ತರಹೇವಾರಿ ಕಮೆಂಟ್‌ಗಳು ಬಂದಿವೆ. ‘ಈ ಪಿನ್ ಚಿನ್ನದಿಂದ ಮಾಡಲ್ಪಟ್ಟಿದೆ ಎಂದು ಭಾವಿಸಿದ್ದೆ. ಆದರೆ ಇದು ಹಿತ್ತಾಳೆಯದ್ದು, ಇದು ನೈಜವಾಗಿಲ್ಲ’ ಎಂದು ಬಳಕೆದಾರರೊಬ್ಬರು ಹೇಳಿದ್ದಾರೆ.

ಪ್ರಾಡಾ ಕಂಪನಿಯ ಈ ದುಬಾರಿ ಬೆಲೆಯ ಸೇಫ್ಟಿ ಪಿನ್ ತಿಳಿ ನೀಲಿ, ಗುಲಾಬಿ ಮತ್ತು ಕೇಸರಿ ಬಣ್ಣದಲ್ಲಿ ಸಿಗಲಿದೆ. ವರ್ಣರಂಜಿತ ಕ್ರೋಶೆಯಿಂದ ಅಲಂಕರಿಸಲಾಗಿದೆ. ಈ ದುಬಾರಿ ಪಿನ್ ಅನ್ನು ಹಿತ್ತಾಳೆಯಿಂದ ತಯಾರಿಸಲಾಗಿದೆ ಎಂದು ಕಂಪನಿ ಹೇಳಿಕೊಂಡಿದೆ. ಇದರಲ್ಲಿ ಕಂಪನಿ ಲೋಗೊ ಕಾಣುವಂತಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.