ADVERTISEMENT

'ಪುಲ್ವಾಮ ದಾಳಿಗೆ ಪ್ರತ್ಯುತ್ತರ ನೀಡುತ್ತೇವೆ,ಸಂಧಾನ ಮಾಡಲು ನಾವು ರಾಜಕಾರಣಿಗಳಲ್ಲ'

​ಪ್ರಜಾವಾಣಿ ವಾರ್ತೆ
Published 18 ಫೆಬ್ರುವರಿ 2019, 10:44 IST
Last Updated 18 ಫೆಬ್ರುವರಿ 2019, 10:44 IST
   

ತಿರುವನಂತಪುರಂ: ಪುಲ್ವಾಮ ದಾಳಿ ನಂತರ ರಜೆಯಲ್ಲಿರುವ ಯೋಧರಿಗೆ ಕರ್ತವ್ಯಕ್ಕೆ ಹಾಜರಾಗುವಂತೆ ಆದೇಶ ನೀಡಲಾಗಿದೆ.ಸೇನೆಯ ಆದೇಶ ಸ್ವೀಕರಿಸಿ ಮತ್ತೆ ಕರ್ತವ್ಯಕ್ಕೆ ಹಾಜರಾಗುತ್ತಿರುವ ರಂಜಿತ್ ರಾಜ್ ಎಂಬ ಯೋಧ ಫೇಸ್‍ಬುಕ್‍ನಲ್ಲಿ ಬರೆದ ಪೋಸ್ಟ್ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದೆ.

ಕೇರಳದ ಪತ್ತನಂತಿಟ್ಟ ಜಿಲ್ಲೆಯ ಆರಂನ್ಮುಳ ನಿವಾಸಿಯಾದ ರಂಜಿತ್ ರಾಜ್ ಅವರ ಫೇಸ್‍ಬುಕ್ ಪೋಸ್ಟ್ ‍ನ ಅನುವಾದ ಇಲ್ಲಿದೆ.

ರಜೆ ಮುಗಿಯುವ ಮುನ್ನವೇ ಕರೆ ಬಂದಿದೆ.ಈ ಹೊತ್ತಲ್ಲಿ ಭಯ ಅಥವಾ ದುಃಖ ಆಗುತ್ತಿಲ್ಲ, ಹೆಮ್ಮೆ ಎನಿಸುತ್ತಿದೆ.ದೇಶಕ್ಕಾಗಿ ಕಾಶ್ಮೀರದಲ್ಲಿ ಪ್ರಾಣ ತೆತ್ತ ನನ್ನ ಸಹೋದರರಿಗಾಗಿ ನಾನು ಹೋಗುತ್ತಿದ್ದೇನೆ.ಇಡೀ ದೇಶದ ಪ್ರಾರ್ಥನೆ ಜತೆಗಿರುವಾಗ ಪುಲ್ವಾಮ ದಾಳಿಗೆ ತಕ್ಕ ಉತ್ತರವನ್ನು ನೀಡುತ್ತೇವೆ.

ADVERTISEMENT

ಯೋಧರಲ್ಲದೇ ಇರುವ ಭಾರತೀಯರುನಾಳೆ ಅಥವಾ ಮುಂಬರುವ ದಿನಗಳಲ್ಲಿ ನಡೆಯುವ ರಾಜಕೀಯ ಕೋಲಾಹಲದಲ್ಲಿ ಈ ವಿಷಯವನ್ನು ಮರೆಯಲು ಸಾಧ್ಯವಾಗಬಹುದು.
ಸುದ್ದಿ ಮಾಧ್ಯಮಗಳು ಬುದ್ದಿಜೀವಿಗಳನ್ನು ವಾಹಿನಿಯಲ್ಲಿ ಕೂರಿಸಿ ದೇಶಪ್ರೇಮದ ಮಾತನ್ನು ಬಿತ್ತರಿಸಬಹುದು.

ಒಂದು ಬಾರಿ ನಮ್ಮ ಈ ಸಮವಸ್ತ್ರ ಧರಿಸಿ ಕಾಶ್ಮೀರದ ಹೆದ್ದಾರಿಯಲ್ಲಿ ನಡೆಯಲು ಇಲ್ಲಿನ ರಾಜಕಾರಣಿಗಳನ್ನು ನಾನು ಆಮಂತ್ರಿಸುತ್ತೇನೆ.
the beauty of JOURNEY through heaven valley of India ಎಂಬುದು ನಿಮಗೆ ಆಗ ಅರ್ಥವಾಗುತ್ತದೆ.

ಚರ್ಚೆ ಅಥವಾ ಸಂಧಾನಗಳನ್ನು ಮಾಡಲು ನಾವೇನೂ ರಾಜಕಾರಣಿಗಳಲ್ಲ, ನಾವು ಭಾರತೀಯ ಸೇನೆ.
ಈ ದಾಳಿಗೆ 10 ಪಟ್ಟು ಉತ್ತರವನ್ನು ನಾವು ಕೊಡಲಿದ್ದೇವೆ.

ನನ್ನ ಧೀರ ಸಹೋದ್ಯೋಗಿಗಳಿಗೆ ಶ್ರದ್ಧಾಂಜಲಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.