
ಮಾರಿಯೋ ಸಾಲ್ಸೆಡೊ
ಚಿತ್ರ: ಫೇಸ್‌ಬುಕ್
ಭಾರತೀಯರು ಸೇರಿದಂತ ಅನೇಕರು ಹಡುಗುಗಳಲ್ಲಿ ಒಂದು ದಿನ ಅಥವಾ ಒಂದು ವಾರದ ಮಟ್ಟಿಗೆ ಜೀವಿಸುವುದನ್ನು ಇಷ್ಟಪಡುತ್ತಾರೆ. ಭೂಮಿ ಮೇಲಿನ ಜೀವನ ಹೊರತುಪಡಿಸಿ, ವಿಭಿನ್ನ ಜಗತ್ತಿನ ಅನುಭವ ಪಡೆಯಲು ನೀರಿನ ಮೇಲಿನ ಪ್ರವಾಸ ಕೈಗೊಳ್ಳುತ್ತಾರೆ. ಆದರೆ, ಇಲ್ಲೊಬ್ಬ ವ್ಯಕ್ತಿ ಬರೋಬ್ಬರಿ 25 ವರ್ಷಗಳಿಂದ ಹಡಗುಗಳ ಮೇಲೆ ವಾಸ ಮಾಡುತ್ತಿದ್ದಾರೆ.
ಹೀಗೆ ಹಡಗುಗಳ ಮೇಲೆ ವಾಸಿಸುತ್ತಿರುವ ವ್ಯಕ್ತಿ ಹೆಸರು ಮಾರಿಯೋ ಸಾಲ್ಸೆಡೊ. ಇವರು, ಫ್ಲೋರಿಡಾ ಮೂಲದ ಹಣಕಾಸು ಸಲಹೆಗಾರ. ಇವರು ದಶಕಗಳಿಂದ ಕ್ರೂಸ್ ಮೇಲೆ ವಾಸಿಸುತ್ತಿದ್ದಾರೆ. ಕ್ರೂಸ್‌ನ ಸಿಬ್ಬಂದಿ ಮತ್ತು ಸಹ ಪ್ರಯಾಣಿಕರು ಇವರನ್ನು ‘ಸೂಪರ್ ಮಾರಿಯೋ’ ಎಂದು ಕರೆಯುತ್ತಾರೆ.
ಮಾರಿಯೋ ಸಾಲ್ಸೆಡೊ ಅವರು ತಮ್ಮ ಸಂಪೂರ್ಣ ಜೀವನದ ಬಹುಮುಖ್ಯ ಘಟ್ಟವನ್ನು ಒಂದು ಹಡಗಿನಿಂದ ಮತ್ತೊಂದು ಹಡಗಿಗೆ ಬದಲಿಸುತ್ತಾ ಕಳೆಯುತ್ತಿದ್ದಾರೆ ಎಂದರೆ ತಪ್ಪಾಗುವುದಿಲ್ಲ. ಸಾಗರದ ಅತ್ತುತ್ತಮ ನೋಟಗಳನ್ನು ವೀಕ್ಷಿಸುತ್ತಾ, ಒಂದು ಹಡಗಿನಿಂದ ಇನ್ನೊಂದು ಹಡಗಿಗೆ ತಮ್ಮ ಪ್ರಯಾಣವನ್ನು ಬದಲಿಸುತ್ತಾ ಕಾಲ ಕಳೆಯುತ್ತಿದ್ದಾರೆ.
ಸಾಲ್ಸೆಡೊ ಅವರು ಭೂಮಿಯ ಮೇಲಿನ ಜೀವನವನ್ನು ಬಹುತೇಕ ತ್ಯಜಿಸಿದ್ದಾರೆ. ಅಂದಹಾಗೆ, ಅವರು ಭೂಮಿಯ ಮೇಲೆ ಯಾವುದೇ ಮನೆ ಹೊಂದಿಲ್ಲ, ಬಾಡಿಗೆಯನ್ನು ಪಾವತಿಸುತ್ತಿಲ್ಲ ಮತ್ತು ಆಸ್ತಿಗೆ ಸಂಬಂಧಿಸಿದಂತೆ ತೆರಿಗೆ ಸಹ ಕಟ್ಟುತ್ತಿಲ್ಲ.
ಪ್ರಸ್ತುತ ಅವರ ದಿನಚರಿ ರಾಯಲ್ ಕೆರಿಬಿಯನ್ ಹಡಗುಗಳ ಡೆಕ್‌ಗಳು, ಲಾಂಜ್‌ಗಳು ಮತ್ತು ಕ್ಯಾಬಿನ್‌ಗಳಲ್ಲಿ ಆರಂಭವಾಗಿ ಅಲ್ಲಿಯೇ ಕೊನೆಗೊಳ್ಳುತ್ತವೆ.
ಸಾಲ್ಸೆಡೊ ಅವರ ನೀರಿನ ಮೇಲಿನ ಜೀವನ 1990ರ ದಶಕದಲ್ಲಿ ಪ್ರಾರಂಭವಾಯಿತು. ಇವರು ಆರಂಭದಲ್ಲಿ ವ್ಯಾಪಾರದ ಉದ್ದೇಶಕ್ಕಾಗಿ ಹಡಗುಗಳಲ್ಲಿ ಸಂಚರಿಸಲು ಪ್ರಯಾಣಿಸಲು ಆರಂಭಿಸಿದರು. ನಿಧಾನವಾಗಿ, ಅವರು ಭೂಮಿ ಮೇಲಿನ ಹೋಟೆಲ್, ಲಾಡ್ಜ್‌ಗಳಿಗಿಂತ ನೀರಿನ ಮೇಲಿನ ಹಡಗುಗಳು ಐಷಾರಾಮಿ ಜೀವನ ನೀಡುತ್ತಿವೆ ಎಂಬುದನ್ನು ಅರಿತುಕೊಂಡರು.
ಹೀಗೆ ಆರಂಭವಾದ ಇವರ ನೀರಿನ ಮೇಲಿನ ವಾಸ ನಿಧಾನವಾಗಿ 2000ನೇ ಇಸವಿ ಹೊತ್ತಿಗೆ ಸಂಪೂರ್ಣವಾಗಿ ಹಡಗುಗಳ ಮೇಲೆ ಜೀವನ ನಡೆಸಲು ಆರಂಭಿಸಿದರು. ಸದ್ಯ, ಅವರ ಸಮುದ್ರದ ಜೀವನಕ್ಕೆ 25 ವರ್ಷಗಳು ಪೂರ್ಣಗೊಂಡಿದ್ದು, ಸುಮಾರು 1 ಸಾವಿರಕ್ಕೂ ಅಧಿಕ ಸಮುದ್ರಯಾನಗಳನ್ನು ಪೂರೈಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.