ಶೂಟ್ ಮಾಡಲು ಬಂದವರನ್ನು ಕೈಯಲ್ಲಿ ಕೋಲು ಹಿಡಿದು ಓಡಿಸಿದ ಮಹಿಳೆ!
ಚಂಡೀಗಡ: ಪಿಸ್ತೂಲ್ ಹಿಡಿದು ಬಂದವರನ್ನು ಮಹಿಳೆಯೊಬ್ಬರು ಕೈಯಲ್ಲಿ ಕೋಲು ಹಿಡಿದು ಓಡಿಸಿದ ಘಟನೆ ಹರಿಯಾಣದಲ್ಲಿ ನಡೆದಿರುವುದು ಬೆಳಕಿಗೆ ಬಂದಿದೆ.
ಈ ಕುರಿತು ಸಿಸಿಟಿವಿಯಲ್ಲಿ ದಾಖಲಾಗಿರುವ ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕವಾಗಿ ಹರಿದಾಡುತ್ತಿದೆ.
ಎರಡು ಬೈಕ್‌ಗಳಲ್ಲಿ ಬಂದಿದ್ದ ನಾಲ್ವರಲ್ಲಿ ಒಬ್ಬ, ಮನೆಮುಂದೆ ನಿಂತಿದ್ದ ವ್ಯಕ್ತಿಯೊಬ್ಬನಿಗೆ ಏಕಾಏಕಿ ಪಿಸ್ತೂಲ್ ತೆಗೆದುಕೊಂಡು ಗುಂಡು ಹಾರಿಸುತ್ತಾನೆ. ಈ ವೇಳೆ ದಾಳಿಯಿಂದ ವಿಚಲೀತನಾದ ವ್ಯಕ್ತಿ ಮನೆಯ ಗೇಟ್ ತಳ್ಳಿ ಒಳಹೋಗುತ್ತಾನೆ.
ಈ ವೇಳೆ ದಾಳಿಕೋರರು ಆತನನ್ನು ಅಟ್ಟಿಸಿಕೊಂಡು ಹೋಗುತ್ತಿರುವಾಗ ಕೈಯಲ್ಲಿ ಉದ್ದನೆಯ ಕೋಲು ಹಿಡಿದು ಬಂದ ಮಹಿಳೆ ದಾಳಿಕೋರರನ್ನು ಬೆದರಿಸುತ್ತಾರೆ. ಮಹಿಳೆಯನ್ನು ನೋಡಿದ ದಾಳಿಕೋರರು ಅಲ್ಲಿಂದ ಕಾಲ್ಕಿತ್ತು ಹೋಗುತ್ತಾರೆ.
ಈ ಘಟನೆ ಹರಿಯಾಣದ ಭಿವಾನಿ ಎಂಬಲ್ಲಿ ಮಂಗಳವಾರ ಬೆಳಿಗ್ಗೆ ನಡೆದಿದೆ ಎಂದು ಎನ್‌ಡಿಟಿವಿ ವರದಿ ಮಾಡಿದೆ.
ದಾಳಿಗೊಳಗಾದ ವ್ಯಕ್ತಿಯನ್ನು ಹರಿಕೃಷ್ಣ ಎಂದು ಗುರುತಿಸಲಾಗಿದ್ದು ಗ್ಯಾಂಗ್‌ಸ್ಟರ್ ಲಾರೆನ್ಸ್ ಬಿಷ್ಣೋಯಿ ಸಹಚರ ಎಂದು ತಿಳಿದು ಬಂದಿದೆ. ಈತ ಕೊಲೆ ಪ್ರಕರಣವೊಂದರಲ್ಲಿ ಕಳೆದ ಮೂರು ತಿಂಗಳಿನಿಂದ ಜಾಮೀನಿನ ಮೇಲೆ ಹೊರಗಿದ್ದ ಎಂದು ಭಿವಾಯಿ ಪೊಲೀಸರು ತಿಳಿಸಿದ್ದಾರೆ. ಘಟನೆಯಲ್ಲಿ ನಾಲ್ಕು ಗುಂಡುಗಳು ಆತನಿಗೆ ತಗುಲಿದ್ದು ಪ್ರಾಣಾಪಾಯದಿಂದ ಪಾರಾಗಿದ್ದಾನೆ ಎಂದೂ ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.