ವಿಶ್ವನಾಥನ್ ಆನಂದ್ ಹಂಚಿಕೊಂಡ ಫೋಟೊ
ಚಿತ್ರ ಕೃಪೆ: vishy64theking
ನವದೆಹಲಿ: ಚೆಸ್ ಮಾಂತ್ರಿಕ ವಿಶ್ವನಾಥನ್ ಆನಂದ್ ಅವರು ಪ್ರಧಾನಿ ನರೇಂದ್ರ ಮೋದಿಯವರ ಹುಟ್ಟುಹಬ್ಬಕ್ಕೆ ಶುಭ ಕೋರಿ ಹಂಚಿಕೊಂಡ ಪೋಸ್ಟ್‌ನಲ್ಲಿ ‘ವಿಶ್ವನಾಥನ್ ಆನಂದ್ ಜಿ’ ಎನ್ನುವ ಸಾಲು ಸೇರಿಕೊಂಡಿದ್ದು ಟ್ರೋಲ್‌ಗಳಿಗೆ ಕಾರಣವಾಗಿದೆ.
ತಮ್ಮನ್ನೇ ಸಂಬೋಧಿಸುವ ಸಾಲುಗಳು ಪೋಸ್ಟ್‌ನಲ್ಲಿರುವುದು ಟ್ರೋಲ್ ಆಗುತ್ತಿದ್ದಂತೆ ಪೋಸ್ಟ್ ಡಿಲೀಟ್ ಮಾಡಿರುವ ಅವರು, MYMODISTORY ಎನ್ನುವ ಹ್ಯಾಷ್‌ಟ್ಯಾಗ್‌ನೊಂದಿಗೆ ಹೊಸ ಪೋಸ್ಟ್ ಹಂಚಿಕೊಂಡಿದ್ದಾರೆ.
ಆದರೆ, ಆನಂದ್ ಅವರ ಮೊದಲ ಪೋಸ್ಟ್‌ನ ಚಿತ್ರ ಎಲ್ಲೆಡೆ ಹರಿದಾಡುತ್ತಿದ್ದು, ಕಾಪಿ–ಪೇಸ್ಟ್ ಮಾಡುವ ಪ್ರವೃತ್ತಿ ಇದ್ದರೆ ಹೀಗೆ ಆಗುತ್ತದೆ ಎಂದು ನೆಟ್ಟಿಗರು ವ್ಯಂಗ್ಯವಾಡಿದ್ದಾರೆ.
ಬಳಕೆದಾರೊಬ್ಬರು, ‘ಐಟಿ ಸೆಲ್‌ನಿಂದ ಬಂದ ಸಂದೇಶವನ್ನು ಹಾಗೆಯೇ ಕಾಪಿ–ಪೇಸ್ಟ್ ಮಾಡಿದ್ದಾರೆ. ಆದರೆ, ‘ವಿಶ್ವನಾಥನ್ ಆನಂದ್ ಜಿ’ ಎನ್ನುವ ತಮ್ಮ ಹೆಸರನ್ನು ತಗೆಯಲು ಮರೆತಿದ್ದಾರೆ’ ಎಂದುಹಾಸ್ಯ ಮಾಡಿದ್ದಾರೆ.
ಇನ್ನೂ ಕೆಲವರು, ‘ಜನಪ್ರಿಯ ವ್ಯಕ್ತಿಗಳು ಪೂರ್ವವಾಗಿ ಸಿದ್ಧಪಡಿಸಿದ ರಾಜಕೀಯ ಸಂದೇಶಗಳನ್ನು ಹೇಗೆ ಅವಲಂಬಿಸುತ್ತಾರೆ ಎಂಬುದನ್ನು ಇದು ತೋರಿಸಿದೆ’ ಎಂದಿದ್ದಾರೆ.
‘ಐದು ಬಾರಿ ಚೆಸ್ ಗ್ರ್ಯಾಂಡ್ ಮಾಸ್ಟರ್ ಆಗಿರುವವರನ್ನು ಚೆಕ್‌ಮೀಟ್ ಮಾಡುವ ಐಟಿ ಸೆಲ್‌ಗಳನ್ನು ಹೊಂದಿರುವುದಕ್ಕೆ ಪ್ರಧಾನಿ ಮೋದಿಗೆ ಧನ್ಯವಾದಗಳು’ ಎಂದು ಮತ್ತೊಬ್ಬ ಬಳಕೆದಾರ ಕಮೆಂಟ್ ಮಾಡಿದ್ದಾರೆ.
ವಿಶ್ವನಾಥನ್ ಆನಂದ್ ಅವರು ಮೊದಲು ಹಂಚಿಕೊಂಡು ಡಿಲೀಟ್ ಮಾಡಿರುವ ಪೋಸ್ಟ್
ಹೊಸದಾಗಿ ಹಂಚಿಕೊಂಡ ಪೋಸ್ಟ್
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.