ADVERTISEMENT

ಮಿಂಚಲು ಮಿನುಗಲು ಎಚ್‌ಡಿ ಮೇಕಪ್‌

ವನಿತಾ ಜೈನ್
Published 23 ಸೆಪ್ಟೆಂಬರ್ 2023, 0:13 IST
Last Updated 23 ಸೆಪ್ಟೆಂಬರ್ 2023, 0:13 IST
   

ಮೇಕಪ್ ಎಲ್ಲ ಬಗೆಯ ಚರ್ಮಗಳಿಗೆ, ಮೊಗಗಳಿಗೆ ಒಂದೇ ತೆರನಾಗಿರುವುದಿಲ್ಲ. ವ್ಯಕ್ತಿಯ ಬಣ್ಣ, ಚರ್ಮದ ವಿಧ (ಒಣಚರ್ಮ, ಎಣ್ಣೆ ಚರ್ಮ) ಅನುಗುಣವಾಗಿ ಮೇಕಪ್ ಆಯ್ಕೆ ಮಾಡಿಕೊಳ್ಳಬೇಕು. ಜತೆಗೆ ಸಂದರ್ಭಕ್ಕೆ ಅನುಸಾರ ಮೇಕಪ್‌ ಮಾಡಿಕೊಳ್ಳಬೇಕು.

ನಾನಾ ಬಗೆಯ ಮೇಕಪ್‌

ಮೇಕಪ್‌ನಲ್ಲಿಯೂ ಬೇಸಿಕ್ ಮೇಕಪ್, ಮ್ಯಾಟ್ ಮೇಕಪ್, ಎಚ್‌ಡಿ ಮೇಕಪ್, ಶಿಮ್ಮರಿ ಮೇಕಪ್, ವಾಟರ್ ಪ್ರೂಫ್ ಮೇಕಪ್, ನ್ಯೂಡ್ ಮೇಕಪ್, 4ಕೆ ಮೇಕಪ್ ಎಂಬ ಹಲವು ವಿಧಗಳಿವೆ. ಮೊದಲೆಲ್ಲ ಮ್ಯಾಟ್ ಮೇಕಪ್‌ಗೆ ಹೆಚ್ಚು ಮಾನ್ಯತೆ ಕೊಡುತ್ತಿದ್ದವರು ಇದೀಗ ಎಚ್‌ಡಿ ಮೇಕಪ್ ಗೆ, ವಾಟರ್ ಪ್ರೂಫ್ ಮೇಕಪ್ ಗೆ ಹೆಚ್ಚು ಆದ್ಯತೆ ನೀಡಲಾಗುತ್ತಿದೆ. ಅದರಲ್ಲೂ ಹೆಚ್ಚು ಮೆಚ್ಚುಗೆ ಪಡೆದಿರುವುದು ಎಚ್‌ಡಿ ಮೇಕಪ್.

ಏನಿದು ಎಚ್ ಡಿ ಮೇಕಪ್?

ಇದನ್ನು ಹೈ –ಡೆಫಿನಿಷನ್ ಮೇಕಪ್ ಎನ್ನುತ್ತಾರೆ. ಹೆಸರಿನಂತೆ ಲುಕ್ ಕೂಡ ಇರುತ್ತದೆ. ಯಾವುದೇ ಕಲೆ ಕಾಣದಂತೆ ಮುಖದ ಸೌಂದರ್ಯ ವರ್ಧಿಸುತ್ತದೆ. ಸಹಜ ಸುಂದರಿಯಾಗಿ ಕಾಣಿಸಿಕೊಳ್ಳಬೇಕು ಎನ್ನವವರಿಗೆ ಇದು ಹೇಳಿ ಮಾಡಿಸಿದ ಮೇಕಪ್‌.

ADVERTISEMENT

ಈ ಎಚ್‌ಡಿ ಮೇಕಪ್‌ ಬೆವರಿದರೂ ಸುಮಾರು 12 ಗಂಟೆಗಳಿಂದ 24 ಗಂಟೆಯವರೆಗೆ ಯಾವುದೇ ರೀತಿಯಲ್ಲಿ ಹಾಳಾಗದೇ ಹಾಗೆಯೇ ಇರುತ್ತದೆ.

ಈ ಮೇಕಪ್ ವಿಧ

  • ಏರ್ ಬ್ರಶ್ ಎಚ್‌ಡಿ ಮೇಕಪ್ : ಬ್ರಶ್ ನ ಸಹಾಯವಿಲ್ಲದೇ ಏರ್ ಬ್ರಶ್ ಯಂತ್ರ ಉಪಯೋಗಿಸಿ ಮಾಡುವ ಮೇಕಪ್.

  • ಮಿನರಲ್ ಎಚ್‌ಡಿ ಮೇಕಪ್: ಇದು ಚರ್ಮಕ್ಕೆ ಸಹಜ ಕಾಂತಿ ನೀಡುವುದಲ್ಲದೇ ತುಂಬಾ ಸೂಕ್ಷ್ಮ ಚರ್ಮಗಳಿಗೆ ಇದು ಸೂಕ್ತ.

  • ಲಿಕ್ವಿಡ್ ಎಚ್‌ಡಿ ಮೇಕಪ್: ಇದು ಒಂದು ರೀತಿಯ ಫೌಂಡೇಶನ್ ಆಗಿದ್ದು, ಬ್ರಶ್ ಅಥವಾ ಸ್ಪಾಂಜ್ ಬಳಸಿ ಮಾಡಲಾಗುತ್ತದೆ. ಇದರಿಂದ ನೈಸರ್ಗಿಕ ಲುಕ್ ಕೊಡುತ್ತದೆ.

  • ಕ್ರೀಮ್ ಎಚ್‌ಡಿ ಮೇಕಪ್: ಇದು ಬೆರಳುಗಳಿಗೆ ಮಾತ್ರ ಉಪಯೋಗಿಸುವ ಮೇಕಪ್.

ಬ್ರ್ಯಾಂಡ್‌ ಆಗಿರುವ ಪ್ರಸಾಧನಗಳನ್ನೇ ಬಳಸುವುದು ಸೂಕ್ತ. ಯಾವುದೇ ಮೇಕಪ್‌ ಆಗಿರಲಿ. ಚರ್ಮದ ಆರೋಗ್ಯದ ಬಗ್ಗೆ ಕಾಳಜಿ ವಹಿಸಬೇಕು. ಇಷ್ಟಕ್ಕೂ ಆರೋಗ್ಯವಂತ ತ್ವಚೆಯೇ ಸರಳ, ಸ್ನಿಗ್ಧ ಮತ್ತು ಸುಂದರ ಅನ್ನುವುದಂತೂ ಅಲ್ಲಗಳೆಯಲಾಗದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.