ADVERTISEMENT

Deep Sea Fishing: ಪುರುಷ ಬಲದ ಕಡಲ ಮೀನುಗಾರಿಕೆಯಲ್ಲಿ ಪ್ರಾಪ್ತಿ 'ಪರಾಕ್ರಮ'..!

​ಪ್ರಜಾವಾಣಿ ವಾರ್ತೆ
Published 27 ಮಾರ್ಚ್ 2025, 9:11 IST
Last Updated 27 ಮಾರ್ಚ್ 2025, 9:11 IST

ಕಡಲ ಮೀನುಗಾರಿಕೆ (Deep Sea Fishing) ಎಂದರೆ ತಕ್ಷಣಕ್ಕೆ ಕಣ್ಮುಂದೆ ಬರುವವರು ಪುರುಷರು. ಮಹಿಳೆಯರ ಹಾಜರಿಯೇ ಇಲ್ಲದಂತಹ ಈ ಕಾರ್ಯದಲ್ಲಿ ಈಗ ತಮ್ಮನ್ನು ತೊಡಗಿಸಿಕೊಳ್ಳುತ್ತಿದ್ದಾರೆ ಮಂಗಳೂರಿನ ಪ್ರಾಪ್ತಿ ಮೆಂಡನ್‌ (Prapti Mendon) . ಸದ್ಯ, ಮೀನುಗಾರಿಕೆಯ (Fishing) ಅನನ್ಯ ಅನುಭವಗಳನ್ನೆಲ್ಲ ತನ್ನದಾಗಿಸಿಕೊಂಡಿರುವ ಪ್ರಾಪ್ತಿ, ಮಹಿಳೆಯರಿಗೆ ಕಷ್ಟ ಎನ್ನಬಹುದಾದ ನಾಡದೋಣಿ (deep sea fishing boats) ನಡೆಸುವುದನ್ನು ಕರಗತ ಮಾಡಿಕೊಂಡಿದ್ದಾರೆ. ಅಲ್ಲದೆ, ಮೀನುಗಾರಿಕೆ (Fishery) ವಿಷಯದಲ್ಲೇ ಪದವಿ (ಬಿಎಫ್‌ಎಸ್ಸಿ) ಮತ್ತು ಸ್ನಾತಕೋತ್ತರ ಪದವಿ (ಎಂಎಫ್‌ಎಸ್ಸಿ) ಪಡೆದಿದ್ದಾರೆ. ಈ ವಿಷಯದಲ್ಲೇ ಪಿಎಚ್‌.ಡಿ ಅಧ್ಯಯನ ನಡೆಸುವ, ಸುಸ್ಥಿರ ಮೀನುಗಾರಿಕೆ ಕುರಿತು ಸಂಶೋಧನೆ ನಡೆಸುವ ಮಹತ್ವಾಕಾಂಕ್ಷೆ ಹೊಂದಿರುವ ಪ್ರಾಪ್ತಿ ಅವರ ಬಗೆಗಿನ ಚಿತ್ರಣ ಈ ವಿಡಿಯೊದಲ್ಲಿ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.