ADVERTISEMENT

ಭಾವಯಾನ: ಜೈವಿಕ ಭಿನ್ನತೆಗೆ ವ್ಯಂಗ್ಯದ ಮಾತೇಕೆ?

​ಪ್ರಜಾವಾಣಿ ವಾರ್ತೆ
Published 8 ನವೆಂಬರ್ 2025, 0:30 IST
Last Updated 8 ನವೆಂಬರ್ 2025, 0:30 IST
   

ಶಾಲಿನಿ ಸಂಜೆ ಕೆಲಸ ಮುಗಿಸಿ, ಮೊದಲ ಮಹಡಿಯಲ್ಲಿದ್ದ ಕಚೇರಿಯಿಂದ ಕೆಳಗಿಳಿದು ಬಂದಳು. ಅಷ್ಟರ
ಲ್ಲಾಗಲೇ ಕೆಳಗೆ ಬಂದಿದ್ದ ಅವಳ ಸಹೋದ್ಯೋಗಿ  ಬಾಲಚಂದ್ರ ಸ್ನೇಹಿತರೊಂದಿಗೆ ದೊಡ್ಡ ಧ್ವನಿಯಲ್ಲಿ ಹರಟುತ್ತಿದ್ದ. ‘ಅಬ್ಬಾ! ಏನು ಧ್ವನಿ ನಿಂದು. ಸಭೆಯಲ್ಲಿ ಮಾತನಾಡಲು ನಿನಗೆ ಮೈಕೇ ಬೇಡ ನೋಡು’ ಎಂದು ತಮಾಷೆ ಮಾಡಿದಳು ಶಾಲಿನಿ. ಅದಕ್ಕೆ ಬಾಲಚಂದ್ರ ‘ಹೌದು ಕಣಮ್ಮಾ, ನಾನು ಗಂಡಸು. ಎಷ್ಟು ಎತ್ತರ ಇದ್ದೀನಿ ನೋಡು. ನನ್ನ ಮೈಕಟ್ಟು ಹೇಗಿದೆ ನೋಡು. ನನಗೆ ತಕ್ಕ ಹಾಗೆ ನನ್ನ ಧ್ವನಿ ಇದೆ. ನೀನು ಹೆಂಗಸು, ಕುಳ್ಳಿ. ನಿನ್ನ ಧ್ವನಿ ಸಣ್ಣದು’ ಎಂದು ವ್ಯಂಗ್ಯವಾಗಿ ಹೇಳಿದ. ಈ ಮಾತಿನಿಂದ ಶಾಲಿನಿ ಪೆಚ್ಚಾದಳು.

‘ಸಾಮಾನ್ಯವಾಗಿ ಹೆಣ್ಣುಮಕ್ಕಳು ಕುಳ್ಳೀರು ಅಲ್ವೇನೋ?’ ಎಂದು ಸ್ನೇಹಿತರೊಂದಿಗೆ ಅವನು ಏನೇನೋ ಮಾತನಾಡತೊಡಗಿದಾಗ ಶಾಲಿನಿ ಮಾತಿಗೆ ನಿಲ್ಲದೆ ಮುಂದೆ ನಡೆದಳು. ಅವಳಿಗೆ ಇಂತಹ ಮಾತು, ಚರ್ಚೆಗಳಲ್ಲಿ ಭಾಗವಹಿಸುವುದು ಇಷ್ಟವಾಗುತ್ತಿರಲಿಲ್ಲ.

ವಿದ್ಯಾವಂತರು ಸಹ ಈ ಆಧುನಿಕ ಯುಗದಲ್ಲೂ ಹೆಂಗಸು ಎಂದು ಹೀಯಾಳಿಸಿ ಮಾತನಾಡುವುದು ನಿಂತಿಲ್ಲ ಎಂಬುದಕ್ಕೆ ಇದೊಂದು ಉದಾಹರಣೆ ಅಷ್ಟೆ.

ADVERTISEMENT

‌ ‘... ಅನ್ಯರಿಗೆ ಅಸಹ್ಯ ಪಡಬೇಡ, ತನ್ನ ಬಣ್ಣಿಸಬೇಡ ಇದೇ ಅಂತರಂಗ ಶುದ್ಧಿ, ಇದೇ ಬಹಿರಂಗ ಶುದ್ಧಿ...’ ಎಂಬ ಬಸವಣ್ಣನವರ ವಚನವನ್ನು ನಮ್ಮ ಜನ ಪುಸ್ತಕದಲ್ಲಿ ಓದುವರೇ ವಿನಾ ಪಾಲಿಸುವುದಿಲ್ಲ. ಹೆಣ್ಣುಮಕ್ಕಳಿಗೂ ಒಂದು ಮನಸ್ಸಿದೆ, ವ್ಯಕ್ತಿತ್ವವಿದೆ, ಹೆಣ್ಣಿಗೂ ಗಂಡಿಗೂ ಜೈವಿಕ ಭಿನ್ನತೆಯಷ್ಟೇ ಇರುವುದು, ಅದನ್ನು ಗೌರವಿಸಬೇಕು ಎನ್ನುವಷ್ಟು ವೈಚಾರಿಕತೆ ಇಲ್ಲದೆ ಹೋದರೂ ಹೀಯಾಳಿಸಿ ಮಾತನಾಡಿದರೆ ಆಕೆಯ ಮನಸ್ಸಿಗೆ ನೋವಾಗುತ್ತದೆ ಎನ್ನುವ ಕನಿಷ್ಠ ಜ್ಞಾನವಾದರೂ ಇಲ್ಲದಿದ್ದರೆ ಹೇಗೆ?

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.