
ಪ್ರಜಾವಾಣಿ ವಾರ್ತೆ
ಪೂರಿಗೆ ಲಟ್ಟಿಸುವಾಗ ಉಂಡೆಯ ಮೇಲೆ ಗೋಧಿಹಿಟ್ಟಿನ ಪುಡಿ ಉದುರಿಸಿಕೊಳ್ಳುವುದು ಸಾಮಾನ್ಯ. ಹೀಗೆ ಮಾಡಿದರೆ, ಬೇಯಿಸುವಾಗ ಆ ಪುಡಿಯು ಎಣ್ಣೆಯಲ್ಲಿ ಸೇರಿ ಕ್ರಮೇಣ ಕಪ್ಪು ಬಣ್ಣಕ್ಕೆ ತಿರುಗುತ್ತದೆ. ಉಳಿದ ಪೂರಿಗಳನ್ನು ಬೇಯಿಸುವಾಗ ಪುಡಿಯ ಈ ಕಣಗಳು ಅವಕ್ಕೆ ಮೆತ್ತಿಕೊಳ್ಳುತ್ತವೆ. ಇದು ಆರೋಗ್ಯಕ್ಕೆ ಹಾನಿಕರ. ಹೀಗಾಗಿ, ಉಂಡೆಯ ಮೇಲೆ ಪುಡಿಯ ಬದಲು ಒಂದೆರಡು ಹನಿ ಎಣ್ಣೆಯನ್ನು ಹಾಕಿಕೊಂಡು ಲಟ್ಟಿಸಬೇಕು. ಆಗ, ಕಾದ ಎಣ್ಣೆಯಲ್ಲಿ ಗೋಧಿ ಪುಡಿಯ ಕಲ್ಮಶ ಸಂಗ್ರಹವಾಗುವುದು ತಪ್ಪುತ್ತದೆ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.