ಮಾರ್ಚ್ 1ರಿಂದ 3ರವರೆಗೂ ನಡೆದ ಕಿರಿಯ ಮಗ ಅನಂತ್ ಅವರ ವಿವಾಹ ಪೂರ್ವ ಕಾರ್ಯಕ್ರಮದಲ್ಲಿ ರಿಲಾಯನ್ಸ್ ಫೌಂಡೇಶನ್ ಸಂಸ್ಥಾಪಕಿ ನೀತಾ ಅಂಬಾನಿ ಕಾಂಚೀಪುರಂ ರೇಷ್ಮೆ ಸೀರೆ ಹಾಗೂ ದುಬಾರಿ ಆಭರಣ ತೊಟ್ಟು ಮಿಂಚಿದ್ದಾರೆ.
ಚಿತ್ರಕೃಪೆ: ಇನ್‌ಸ್ಟಾಗ್ರಾಮ್
ಕೆಂಪು ಮತ್ತು ಗುಲಾಬಿ ಬಣ್ಣ ಹೊಂದಿರುವ ಈ ಸೀರೆಯನ್ನು ಕೈಮಗ್ಗದಲ್ಲಿ ತಯಾರಿಸಲಾಗಿದೆ.
ಸ್ವದೇಶಿ ಉತ್ಪನ್ನಗಳನ್ನು ಉತ್ತೇಜಿಸುವ ನಿಟ್ಟಿನಲ್ಲಿ ಈ ಸೀರೆ ಧರಿಸಿ ಕಂಗೊಳಿಸಿದ್ದಾರೆ. ಸೀರೆಯ ಅಂದವನ್ನು
ಮತ್ತಷ್ಟು ಹೆಚ್ಚಿಸಿದ ಆಭರಣಗಳು.
ಮಗ ಅನಂತ್ ಹಾಗೂ ರಾಧಿಕಾ ಮರ್ಚೆಂಟ್ ವಿವಾಹ ಪೂರ್ವ ಕಾರ್ಯಕ್ರಮದಲ್ಲಿ ನೀತಾ
ಕಾರ್ಯಕ್ರಮದ ಭಾಗವಾಗಿ ಸ್ವತಃ ನೀತಾ ಅಂಬಾನಿ ಸಂಗಡಿಗರ ಜೊತೆ ಸೇರಿ ಶಾಸ್ತ್ರೀಯ ನೃತ್ಯ ಪ್ರದರ್ಶನ ನೀಡಿ ಸಂಭ್ರಮಿಸಿದ್ದರು.
ಗುಜರಾತ್‌ನ ಜಾಮ್ ನಗರದಲ್ಲಿ ನಡೆದ ಅನಂತ್ ಹಾಗೂ ರಾಧಿಕಾ ವಿವಾಹ ಪೂರ್ವ ಕಾರ್ಯಕ್ರಮಕ್ಕೆ ದೇಶ- ವಿದೇಶಗಳಿಂದ ಅತಿಥಿಗಳು ಬಂದಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.