‘ಸೂರ್ಯೋದಯದಿಂದ ಸೂರ್ಯಾಸ್ತದ ತನಕ ಕೆಲಸ ಮಾಡಿದರೆ ₹150 ಕೂಲಿ ಸಿಗುತ್ತಿತ್ತು. ಹೀಗಾದರೆ ಬದುಕು ಸುಧಾರಿಸುವುದು ಹೇಗೆ? ನಮ್ಮ ಮಕ್ಕಳು ಕೂಡ ಹೀಗೆ ಇನ್ನೊಬ್ಬರ ಹಂಗಿನಲ್ಲಿ ಬದುಕಬೇಕಾ? ಎಂಬ ಪ್ರಶ್ನೆ ಮೂಡಿದಾಗಲೇ ಸ್ವಂತ ಉದ್ಯಮದ ಯೋಚನೆ ಹೊಳೆಯಿತು. ಈಗ ದಿನಕ್ಕೆ ₹5 ಸಾವಿರದಿಂದ ₹6 ಸಾವಿರ ದುಡಿಯುತ್ತಿದ್ದೇನೆ...’ ಎಂದು ಹೆಮ್ಮೆಯಿಂದ ಹೇಳುತ್ತಾರೆ ತುಮಕೂರು (Tumakuru) ಜಿಲ್ಲೆ ಕೊರಟಗೆರೆ ತಾಲ್ಲೂಕಿನ ತೋವಿನಕೆರೆಯ (Tovinakere) ಲಲಿತಾ ರಘುನಾಥ್ (Lalitha Raghunath) . ಮಹಿಳೆಯಾಗಿ ಬಡಗಿ (carpenter) ಕೆಲಸಕ್ಕೆ ಹೊರಡಲು ಸಿದ್ಧವಾದಾಗ ಹಲವರು ಅಣಕಿಸಿದರೂ, ಪತಿಯ ಬಲದಿಂದ ಮುಂದುವರಿದವರು ಲಲಿತಾ. ಈಗ ಅನು ವುಡ್ ವರ್ಕ್ಸ್ ಎಂಬ ಕಿರು ಉದ್ಯಮದ ಮೂಲಕ ಬದುಕು ಕಟ್ಟಿಕೊಂಡಿದ್ದಾರೆ. ಅವರ ಯಶಸ್ಸಿನ ಕಥೆ (Success Story) ಈ ವಿಡಿಯೊದಲ್ಲಿ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.