ADVERTISEMENT

ಅವಮಾನವುಂಡ ಕಡೆ ನಗುತ್ತಲೇ ಜೀವಂತಿಕೆಯನ್ನ ಹೊಮ್ಮಿಸುವೆವು: ಸಿದ್ದೇಶ್ವರಿ ಮಾತು

​ಪ್ರಜಾವಾಣಿ ವಾರ್ತೆ
Published 6 ಮಾರ್ಚ್ 2021, 19:31 IST
Last Updated 6 ಮಾರ್ಚ್ 2021, 19:31 IST
ಉಪನ್ಯಾಸಕಿ ಎ.ಎನ್‌.ಸಿದ್ದೇಶ್ವರಿ
ಉಪನ್ಯಾಸಕಿ ಎ.ಎನ್‌.ಸಿದ್ದೇಶ್ವರಿ   

ಸ್ವಾತಂತ್ರ್ಯ ಮತ್ತು ಸಮಾನತೆ ಎಂಬುದು ಇವತ್ತಿಗೂ ಮಹಿಳೆಯರಿಗೆ ದಕ್ಕದ ಫಲ. ಪ್ರಗತಿಪರ ಎನ್ನಿಸಿಕೊಂಡ ಕುಟುಂಬಗಳಲ್ಲೂ ಹೆಣ್ಣುಮಕ್ಕಳು ಅತ್ಯಧಿಕ ಅಂಕ ಗಳಿಸಿದರೂ ಮನೆಯ ಗಂಡುಮಕ್ಕಳೊಂದಿಗೆ ತಾರತಮ್ಯವನ್ನು ಎದುರಿಸಲೇಬೇಕಾದ ಪರಿಸ್ಥಿತಿ ಇದೆ. ಆದರೆ ಅವರ ಅಂಕಗಳಿಕೆಯಲ್ಲಿ ವ್ಯತ್ಯಾಸವಾಗಿಲ್ಲ. ಅದೇ ಸ್ತ್ರೀ ಅಸ್ಮಿತೆ. ಅವಮಾನವುಂಡ ಕಡೆ ನಗುತ್ತಲೇ ಜೀವಂತಿಕೆಯನ್ನು ಹೊಮ್ಮಿಸುವುದು.

ಸಾಧನೆಯ ಹಾದಿಯಲ್ಲಿ ಪುರುಷರಿಗಿಂತಲೂ ಹೆಚ್ಚು ಪೆಟ್ಟುಗಳನ್ನು ತಿನ್ನುವವರು ಮಹಿಳೆಯರೇ. ಈಗಲೂ ಅದು ಬದಲಾವಣೆಯಾಗಿಲ್ಲ. ಆದರೆ ಮತ್ತಷ್ಟು ಗಟ್ಟಿಗೊಳ್ಳುವ ದಾರಿಯಲ್ಲಿ ಹಲವರಿದ್ದಾರೆ.

ಮಿಕ್ಸಿ, ವಾಷಿಂಗ್‌ ಮಷಿನ್‌, ಫ್ರಿಜ್‌ನಂತೆ ಯಂತ್ರವಾಗಿ ಎಷ್ಟೆಂದು ದುಡಿಯುವುದು ಎಂಬ ಪ್ರಶ್ನೆಯನ್ನು ಮಹಿಳೆಯರು ದಿಟ್ಟವಾಗಿ ಕೇಳಿಕೊಂಡಿದ್ದಾರೆ. ಅದನ್ನೇ ಪುರುಷಪರವಾದ ಸಮಾಜದ ಮುಖಕ್ಕೂ ಹಿಡಿದಿದ್ದಾರೆ. ಹಾಗೆ ಕೇಳುವ ಸಾಹಸದ ಫಲವೇನು ಎಂದರೆ ವಿಷಾದ ಆವರಿಸುತ್ತದೆ. ಅದರ ನಡುವೆ ಅಲ್ಲೊಂದು ಇಲ್ಲೊಂದು ಹೊಳೆವ ಒಂದೆರಡು ಚುಕ್ಕಿಗಳೇ ಭರವಸೆಗಳು.

ADVERTISEMENT

ಮುಂದಕ್ಕೆ ಹೋದಷ್ಟೂ ಕಳಂಕವನ್ನು ಅಂಟಿಸಿ ಹಿಂದಕ್ಕೆಳೆಯುವ ಪ್ರವೃತ್ತಿಯನ್ನುಹೆಣ್ಣುಮಕ್ಕಳು ಪ್ರಶ್ನಿಸುತ್ತಿದ್ದಾರೆ. ಅಂಥವರಲ್ಲಿ ನೋವಿನ ಕಡಲೇ ಇರುತ್ತದೆ. ಹೆಣ್ಣುಮಕ್ಕಳಿಗೆ ವಿದ್ಯೆ ಕೊಡಿಸಿದರೆ, ಉದ್ಯೋಗ ದೊರಕಿಸಿದರೆ ಸಾಲದು. ಅವರನ್ನು ಸಮಾನ ನೆಲೆಯಲ್ಲಿ ಗ್ರಹಿಸಿ ಜೊತೆಗೇ ನಡೆಯಬೇಕು.

ಹಿಂದೆ ಮಹಿಳೆಯನ್ನು ಮನೆಯೊಳಗೇ ಕೂಡಿಡುತ್ತಿದ್ದರು. ಈಗ ಹೊರಕ್ಕೆ ಬಂದರೂ ಶೋಷಣೆ ಕಡಿಮೆಯಾಗಿಲ್ಲ. ಮನೆಯ ಹೊರಗೂ ದುಡಿಯುವ ಮಹಿಳೆಯರಲ್ಲಿ ಹಣವಿದೆ. ಅದೇ ಕಾರಣಕ್ಕೆ ನೂರಾರು ತಾಕಲಾಟಗಳನ್ನು ಎದುರಿಸಬೇಕು. ಹಣವಿಲ್ಲದಿದ್ದಾಗ ಸಂತೋಷವಾಗಿದ್ದರೆ? ಅದೂ ಇಲ್ಲ.

(ನಿರೂಪಣೆ: ಕೆ.ನರಸಿಂಹಮೂರ್ತಿ)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.