ADVERTISEMENT

ಟ್ವಿಟರ್‌ ವಿರುದ್ಧ ಆಕ್ರೋಶ; ತಪ್ಪಾದ ಭಾರತದ ಭೂಪಟ ತೆಗೆದು ಹಾಕಿದ ಸಂಸ್ಥೆ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 28 ಜೂನ್ 2021, 17:02 IST
Last Updated 28 ಜೂನ್ 2021, 17:02 IST
ಟ್ವಿಟರ್ ತನ್ನ ವೆಬ್‌ಸೈಟ್‌ನಲ್ಲಿ ವಿಶ್ವಭೂಪಟ ತೆಗೆದು ಹಾಕಿದೆ– ಟ್ವಿಟರ್‌ ಕೆರಿಯರ್‌ ವೆಬ್‌ಸೈಟ್‌ನ ಸ್ಕ್ರೀನ್‌ ಶಾಟ್‌
ಟ್ವಿಟರ್ ತನ್ನ ವೆಬ್‌ಸೈಟ್‌ನಲ್ಲಿ ವಿಶ್ವಭೂಪಟ ತೆಗೆದು ಹಾಕಿದೆ– ಟ್ವಿಟರ್‌ ಕೆರಿಯರ್‌ ವೆಬ್‌ಸೈಟ್‌ನ ಸ್ಕ್ರೀನ್‌ ಶಾಟ್‌   

ಬೆಂಗಳೂರು: ತಪ್ಪಾದ ಭಾರತದ ಭೂಪಟವನ್ನು ಪ್ರಕಟಿಸಿದ್ದ ಟ್ವಿಟರ್‌, ವಿಶ್ವದ ಭೂಪಟದ ಚಿತ್ರವನ್ನು ತನ್ನ ಜಾಲತಾಣದಿಂದ ತೆಗೆದು ಹಾಕಿದೆ. ಜಮ್ಮು-ಕಾಶ್ಮೀರ ಮತ್ತು ಲಡಾಖ್ ಕೇಂದ್ರಾಡಳಿತ ಪ್ರದೇಶಗಳನ್ನು ಪ್ರತ್ಯೇಕ ದೇಶಗಳು ಎಂದು ತೋರಿಸುತ್ತಿದ್ದರಿಂದ ಸಾಮಾಜಿಕ ಮಾಧ್ಯಮಗಳಲ್ಲಿ ಟ್ವಿಟರ್‌ ವಿರುದ್ಧ ಭಾರೀ ಆಕ್ರೋಶ ವ್ಯಕ್ತವಾಗಿತ್ತು.

ಟ್ವಿಟರ್‌ನ ಕೆರಿಯರ್‌ ವಿಭಾಗದ ‘ಟ್ವೀಪ್‌ ಲೈಫ್‌’ನಲ್ಲಿ ಕಾರ್ಯನಿರ್ವಹಣಾ ಕಚೇರಿಗಳನ್ನು ಸೂಚಿಸುವ ಭೂಪಟದಲ್ಲಿ ತಪ್ಪಾಗಿರುವುದು ಗಮನಕ್ಕೆ ಬರುತ್ತಿದ್ದಂತೆ, ಟ್ವಿಟರ್ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳುವಂತೆ ಆಗ್ರಹಿಸಿದರು. ಇದರ ಬೆನ್ನಲ್ಲೇ ಸೋಮವಾರ ರಾತ್ರಿ ಟ್ವಿಟರ್‌ ಭೂಪಟವನ್ನು ತೆಗೆದು ಹಾಕಿದೆ. ಸದ್ಯಕ್ಕೆ ತನ್ನ ಕಚೇರಿಗಳಿರುವ ದೇಶಗಳ ಹೆಸರುಗಳನ್ನಷ್ಟೇ ಪ್ರಕಟಿಸಿದೆ.

ನೂತನ ಮಾಹಿತಿ ತಂತ್ರಜ್ಞಾನ ನಿಯಮಗಳನ್ನು ಪಾಲನೆ ಮಾಡುವುದರ ಸಂಬಂಧ ಕೇಂದ್ರ ಸರ್ಕಾರ ಮತ್ತು ಟ್ವಿಟರ್‌ ಮಧ್ಯೆ ಜಟಾಪಟಿ ನಡೆದಿತ್ತು. ಸುಳ್ಳು ಮಾಹಿತಿ ಪ್ರಸಾರವಾಗುವುದನ್ನು ತಡೆಯಲು ವಿಫಲವಾದ ಆರೋಪದಲ್ಲಿ ಟ್ವಿಟರ್ ವಿರುದ್ಧ ಉತ್ತರಪ್ರದೇಶದಲ್ಲಿ ಪ್ರಕರಣ ದಾಖಲಾಗಿದೆ. ಈ ಸಂದರ್ಭದಲ್ಲಿಯೇ ಟ್ವಿಟರ್‌ನಿಂದ ಈ ತಪ್ಪಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.