ADVERTISEMENT

ಪೆಂಟಗನ್‌ ಪ್ರಮುಖ ಹುದ್ದೆಗೆ ಭಾರತೀಯ ಅಮೆರಿಕನ್‌ ಆಶೀಶ್‌ ನೇಮಕ

ಪಿಟಿಐ
Published 22 ಸೆಪ್ಟೆಂಬರ್ 2021, 7:53 IST
Last Updated 22 ಸೆಪ್ಟೆಂಬರ್ 2021, 7:53 IST
ಪೆಂಟಗನ್‌ ಕಚೇರಿ (ಪ್ರಾತಿನಿಧಿಕ ಚಿತ್ರ)
ಪೆಂಟಗನ್‌ ಕಚೇರಿ (ಪ್ರಾತಿನಿಧಿಕ ಚಿತ್ರ)   

ವಾಷಿಂಗ್ಟನ್‌: ಭಾರತೀಯ ಅಮೆರಿಕನ್‌ ಆಶೀಶ್‌ ವಜೀರಾನಿ ಅವರನ್ನು ಪೆಂಟಗನ್‌ನ ಪ್ರಮುಖ ಹುದ್ದೆಯೊಂದಕ್ಕೆ ನೇಮಕ ಮಾಡಲಾಗಿದೆ.

ಆಶೀಶ್ ಅವರನ್ನು ರಕ್ಷಣಾ ಇಲಾಖೆಯ ಸಿಬ್ಬಂದಿ ಹಾಗೂ ಸನ್ನದ್ಧತೆ ವಿಭಾಗದ ಉಪ ಅಧೀನಕಾರ್ಯದರ್ಶಿಯನ್ನಾಗಿ ನೇಮಕ ಮಾಡಲಾಗಿದೆ ಎಂದು ಅಮೆರಿಕ ಅಧ್ಯಕ್ಷ ಜೋ ಬೈಡನ್ ತಿಳಿಸಿದ್ದಾರೆ.

ಮ್ಯಾನೇಜ್‌ಮೆಂಟ್‌ ಕನ್ಸಲ್ಟಂಟ್ ಆಗಿರುವ ಆಶೀಶ್, ಪ್ರಸ್ತುತ ‘ಎ2ಒ ಸ್ಟ್ರಾಟಜೀಸ್‌’ ಎಂಬ ಸಂಸ್ಥೆಯ ಪ್ರಾಚಾರ್ಯರಾಗಿದ್ದಾರೆ. ಈ ಸಂಸ್ಥೆ ವಾಣಿಜ್ಯ, ಲಾಭರಹಿತ ಸಂಸ್ಥೆಗಳು ಹಾಗೂ ದೊಡ್ಡ ಉದ್ಯಮಗಳಿಗೆ ಸಲಹೆ ನೀಡುತ್ತಿದ್ದಾರೆ.

ADVERTISEMENT

ವಜೀರಾನಿ ಅವರು ಅಮೆರಿಕ ನೌಕಾಪಡೆಯಲ್ಲಿ 1986ರಿಂದ 1993ರ ವರೆಗೆ ವಿವಿಧ ಹುದ್ದೆಗಳಲ್ಲಿ ಕಾರ್ಯನಿರ್ವಹಿಸಿದ್ದಾರೆ ಎಂದು ಶ್ವೇತಭವನದ ಪ್ರಕಟಣೆ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.