ADVERTISEMENT

ಟ್ರಂಪ್ ಫೇಸ್‌ಬುಕ್ ಖಾತೆ 2 ವರ್ಷ ಅಮಾನತು: ‘ಅಪಮಾನ’ ಎಂದ ಅಮೆರಿಕದ ಮಾಜಿ ಅಧ್ಯಕ್ಷ

ಪಿಟಿಐ
Published 5 ಜೂನ್ 2021, 2:53 IST
Last Updated 5 ಜೂನ್ 2021, 2:53 IST
ಡೊನಾಲ್ಡ್ ಟ್ರಂಪ್: ಅಮೆರಿಕದ ಮಾಜಿ ಅಧ್ಯಕ್ಷ
ಡೊನಾಲ್ಡ್ ಟ್ರಂಪ್: ಅಮೆರಿಕದ ಮಾಜಿ ಅಧ್ಯಕ್ಷ   

ಸ್ಯಾನ್ ಫ್ರಾನ್ಸಿಸ್ಕೊ: ಜನವರಿ 6ರ ಕ್ಯಾಪಿಟಲ್ ಭವನದ ಮೇಲಿನ ದಾಳಿ ಪ್ರಕರಣಕ್ಕೆ ಸಂಬಂಧಿಸಿದಂತೆ ಹಿಂಸಾಚಾರಕ್ಕೆ ಪ್ರಚೋದನೆ ನೀಡಿದ್ದಕ್ಕಾಗಿ ಅಮೆರಿಕದ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಖಾತೆಯನ್ನು ಎರಡು ವರ್ಷಗಳ ಕಾಲ ಅಮಾನತಿನಲ್ಲಿಟ್ಟಿರುವುದಾಗಿ ಫೇಸ್‌ಬುಕ್ ತಿಳಿಸಿದೆ.

‘ಈ ಅವಧಿ ಮುಗಿದ ಬಳಿಕ, ಅವರಿಂದ ಸಾರ್ವಜನಿಕ ಸುರಕ್ಷತೆಗೆ ಅಪಾಯವು ಕಡಿಮೆಯಾಗಿದೆಯೇ ಎಂದು ತಜ್ಞರು ಪರಿಶೀಲಿಸುತ್ತಾರೆ. ಹಿಂಸಾಚಾರದ ನಿದರ್ಶನಗಳು, ಶಾಂತಿಯುತ ಸಭೆಗೆ ಅಡ್ಡಿ ಮತ್ತು ನಾಗರಿಕ ಅಶಾಂತಿ ಇನ್ನಿತರ ಬಾಹ್ಯ ಅಂಶಗಳನ್ನು ನಾವು ಮೌಲ್ಯಮಾಪನ ಮಾಡುತ್ತೇವೆ ’ಎಂದು ಫೇಸ್‌ಬುಕ್‌ನ ಜಾಗತಿಕ ವ್ಯವಹಾರಗಳ ಉಪಾಧ್ಯಕ್ಷ ನಿಕ್ ಕ್ಲೆಗ್ ಬ್ಲಾಗ್ ಪೋಸ್ಟ್‌ನಲ್ಲಿ ಬರೆದಿದ್ದಾರೆ.

ಡೊನಾಲ್ಡ್ ಟ್ರಂಪ್ ಅವರ ಫೇಸ್‌ಬುಕ್ ಖಾತೆಯ ಎರಡು ವರ್ಷಗಳ ಅಮಾನತು ನಿರ್ಣಯ ಜನವರಿ 7 ರಿಂದ ಜಾರಿಯಾಗಿದೆ.

ADVERTISEMENT

ಈ ಬಗ್ಗೆ ಪತ್ರಿಕಾ ಪ್ರಕಟಣೆ ಬಿಡುಗಡೆ ಮಾಡಿರುವ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ಫೇಸ್‌ಬುಕ್‌ನ ಈ ನಿರ್ಧಾರ ನನಗೆ ಮಾಡಿದ ‘ಅವಮಾನ’ಎಂದು ಗುಡುಗಿದ್ದಾರೆ.

‘ಈ ರೀತಿ ಸೆನ್ಸಾರ್ ಮಾಡಲು ಮತ್ತು ನಮ್ಮನ್ನು ಮೌನವಾಗಿಸಲು ಅವರಿಗೆ ಅವಕಾಶ ಕೊಡಬಾರದು. ಅಂತಿಮವಾಗಿ, ನಾವೇ ಗೆಲ್ಲುತ್ತೇವೆ. ನಮ್ಮ ದೇಶವು ಈ ರೀತಿಯ ದುರುಪಯೋಗವನ್ನು ಇನ್ನುಮುಂದೆ ಸಹಿಸಲು ಸಾಧ್ಯವಿಲ್ಲ’ ಎಂದು ಪತ್ರಿಕಾ ಪ್ರಕಟಣೆ ತಿಳಿಸಿದೆ.

ಫೇಸ್‌ಬುಕ್‌ನಲ್ಲಿ, ಟ್ರಂಪ್‌ ಅವರ ಅಮಾನತಾದ ಖಾತೆಯು ವಾಸ್ತವವಾಗಿ ‘ಫೇಸ್‌ಬುಕ್ ಜೈಲಿನಲ್ಲಿ’ಇದೆ, ಅಲ್ಲಿ ಇತರರು ಈ ಹಿಂದಿನ ಪೋಸ್ಟ್‌ಗಳನ್ನು ಓದಬಹುದು ಮತ್ತು ಕಾಮೆಂಟ್ ಮಾಡಬಹುದು, ಆದರೆ, ಟ್ರಂಪ್ ಮತ್ತು ಇತರ ಖಾತೆ ನಿರ್ವಹಿಸುವವರು ಹೊಸ ಪೋಸ್ಟ್‌ಗಳನ್ನು ಮಾಡಲು ಸಾಧ್ಯವಾಗುವುದಿಲ್ಲ.

ಟ್ವಿಟರ್, ಇದಕ್ಕೆ ವಿರುದ್ಧವಾಗಿ, ಟ್ರಂಪ್ ಅವರ ಖಾತೆಯನ್ನು ಶಾಶ್ವತವಾಗಿ ನಿಷೇಧಿಸಿದೆ. ಅಲ್ಲಿ ಅವರ ಖಾತೆಯ ಯಾವುದೇ ಕುರುಹು ಇಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.