ADVERTISEMENT

ಅಮೆರಿಕ: ಭೀಕರ ಸುಂಟರಗಾಳಿಗೆ 13 ಮಂದಿ ಸಾವು

ಏಜೆನ್ಸೀಸ್
Published 25 ಮಾರ್ಚ್ 2023, 13:09 IST
Last Updated 25 ಮಾರ್ಚ್ 2023, 13:09 IST
ಸುಂಟರಗಾಳಿಯ ಪರಿಣಾಮ ಕೈಗಾರಿಕಾ ಕಟ್ಟಡದ ಚಾವಣಿಗೆ ಹಾನಿಯಾಗಿರುವುದು–ಎಎಫ್‌ಪಿ ಚಿತ್ರ
ಸುಂಟರಗಾಳಿಯ ಪರಿಣಾಮ ಕೈಗಾರಿಕಾ ಕಟ್ಟಡದ ಚಾವಣಿಗೆ ಹಾನಿಯಾಗಿರುವುದು–ಎಎಫ್‌ಪಿ ಚಿತ್ರ   

ವಾಷಿಂಗ್ಟನ್‌: ಅಮೆರಿಕದ ದಕ್ಷಿಣ ರಾಜ್ಯಗಳಾದ ಅಲಬಾಮಾ ಮತ್ತು ಮಿಸಿಸಿಪ್ಪಿಗಳಲ್ಲಿ ಶುಕ್ರವಾರ ಬೀಸಿದ ಭೀಕರ ಸುಂಟರಗಾಳಿಯ ಪರಿಣಾಮ ಕಟ್ಟಡಗಳು ಕುಸಿದು ಬಿದ್ದು 13 ಮಂದಿ ಸಾವನ್ನಪ್ಪಿದ್ದಾರೆ.‌

ಹವಾಮಾನ ವೈಪರೀತ್ಯದಿಂದ ಆಲಿಕಲ್ಲುಗಳು ಬಿದ್ದಿವೆ, ಹಲವೆಡೆ ವಿದ್ಯುತ್‌ ಸಂಪರ್ಕ ಕಡಿತಗೊಂಡಿದೆ. ಚಂಡಮಾರುತದ ಮುನ್ಸೂಚನೆ ನೀಡಿರುವ ಹವಾಮಾನ ಇಲಾಖೆ ಅಧಿಕಾರಿಗಳು ‘ನಿಮ್ಮ ಜೀವ ಅಪಾಯದಲ್ಲಿದೆ, ಪ್ರಾಣವನ್ನು ರಕ್ಷಿಸಿಕೊಳ್ಳಿ‘ ಎಂದು ಜನರಿಗೆ ಎಚ್ಚರಿಕೆ ನೀಡಿದ್ದಾರೆ.

ಸುಂಟರಗಾಳಿಯು ಮಿಸಿಸಿಪ್ಪಿಯ 96 ಕಿ.ಮೀ.ನಷ್ಟು ದೂರದವರೆಗೆ ಹಾನಿ ಮಾಡಿದೆ ಎಂದು ರಾಷ್ಟ್ರೀಯ ಹವಾಮಾನ ಸಂಸ್ಥೆಯು ತಿಳಿಸಿದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.