ADVERTISEMENT

ಮಂಗಳ ಗ್ರಹದಲ್ಲಿ ಸಂಭವಿಸಿದ ಸೂರ್ಯಗ್ರಹಣದ ವಿಡಿಯೊ ನೋಡಿ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 21 ಏಪ್ರಿಲ್ 2022, 9:41 IST
Last Updated 21 ಏಪ್ರಿಲ್ 2022, 9:41 IST
ಮಂಗಳನಲ್ಲಿ ಸಂಭವಿಸಿದ ಸೂರ್ಯಗ್ರಣದ ಚಿತ್ರ (ಚಿತ್ರ: ನಾಸಾ)
ಮಂಗಳನಲ್ಲಿ ಸಂಭವಿಸಿದ ಸೂರ್ಯಗ್ರಣದ ಚಿತ್ರ (ಚಿತ್ರ: ನಾಸಾ)   

ನವದೆಹಲಿ: ಮಂಗಳ ಗ್ರಹದಲ್ಲಿ ನಡೆದ ಸೂರ್ಯ ಗ್ರಹಣದ ವಿಡಿಯೊವೊಂದನ್ನು ಅಮೆರಿಕದ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ ನಾಸಾ ಬುಧವಾರ ಹಂಚಿಕೊಂಡಿದೆ.

ಮಂಗಳನ ಚಂದ್ರ (ನೈಸರ್ಗಿಕ ಉಪಗ್ರಹ) ಫೋಬೋಸ್ ಸೂರ್ಯನನ್ನು ಹಾದುಹೋಗುತ್ತಿರುವುದನ್ನುನಾಸಾದ ‘ಪರ್ಸೆವೆರೆನ್ಸ್ ರೋವರ್’ ಚಿತ್ರೀಕರಿಸಿ ಭೂಮಿಗೆ ರವಾನಿಸಿದೆ.

ಏಪ್ರಿಲ್ 2ರಂದು ಸಂಭವಿಸಿರುವ ಈ ಗ್ರಹಣ ಸರಿಸುಮಾರು 40 ಸೆಕೆಂಡ್‌ಗಳಲ್ಲಿ ಅಂತ್ಯಗೊಂಡಿದೆ.

ADVERTISEMENT

ಫೋಬೋಸ್ ಉಪಗ್ರಹವು ಚಂದ್ರನಿಗಿಂತಲೂ ಸುಮಾರು 157 ಪಟ್ಟು ಚಿಕ್ಕದು. ಮಂಗಳ ಗ್ರಹ ಎರಡು ನೈಸರ್ಗಿಕ ಉಪಗ್ರಹಗಳನ್ನು ಹೊಂದಿದ್ದು, ಅದರಲ್ಲಿ ಫೋಬೋಸ್‌ ಕೂಡ ಒಂದು. ಡಿಮೋಸ್‌ ಎಂಬುದು ಮತ್ತೊಂದು ನೈಸರ್ಗಿಕ ಉಪಗ್ರಹವಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.