ADVERTISEMENT

ಉತ್ತರ ಕೊರಿಯಾ: ರೈಲಿನಿಂದ ಖಂಡಾಂತರ ಕ್ಷಿಪಣಿ ಪರೀಕ್ಷೆ

ಏಜೆನ್ಸೀಸ್
Published 16 ಸೆಪ್ಟೆಂಬರ್ 2021, 7:06 IST
Last Updated 16 ಸೆಪ್ಟೆಂಬರ್ 2021, 7:06 IST
ಉತ್ತರ ಕೊರಿಯಾ ರೈಲಿನ ಮೇಲಿಂದ ಗುರುವಾರ ಯಶಸ್ವಿಯಾಗಿ ಖಂಡಾಂತರ ಕ್ಷಿಪಣಿ ಉಡಾಯಿಸಿದೆ   –ಎಪಿ/ಪಿಟಿಐ
ಉತ್ತರ ಕೊರಿಯಾ ರೈಲಿನ ಮೇಲಿಂದ ಗುರುವಾರ ಯಶಸ್ವಿಯಾಗಿ ಖಂಡಾಂತರ ಕ್ಷಿಪಣಿ ಉಡಾಯಿಸಿದೆ   –ಎಪಿ/ಪಿಟಿಐ   

ಸೋಲ್‌: ಉತ್ತರ ಕೊರಿಯಾ ಮೊದಲ ಬಾರಿಗೆ ರೈಲಿನಿಂದ ಖಂಡಾಂತರ ಕ್ಷಿಪಣಿಗಳನ್ನು ಗುರುವಾರ ಯಶಸ್ವಿಯಾಗಿ ಉಡಾಯಿಸಿದೆ.

ತನ್ನ ಮಿಲಿಟರಿ ಸಾಮರ್ಥ್ಯ ಪ್ರದರ್ಶನದ ಭಾಗವಾಗಿ ಬುಧವಾರವಷ್ಟೇ ಎರಡು ಖಂಡಾಂತರ ಕ್ಷಿಪಣಿಗಳನ್ನು ಉಡಾಯಿಸಿದ್ದ ಉತ್ತರ ಕೊರಿಯಾ ಬಲ ಪ್ರದರ್ಶನವನ್ನು ಮುಂದುವರಿಸಿದೆ.

ಪರ್ವತಗಳ ಮಧ್ಯ ಭಾಗದಲ್ಲಿನ ಗೋಪ್ಯ ಸ್ಥಳದಲ್ಲಿ ರೈಲಿನ ಹಳಿಗಳಿದ್ದು, ಅಲ್ಲಿ ರೈಲಿನ ಮೇಲೆ ನಿರ್ಮಿಸಲಾಗಿರುವ ಲಾಂಚರ್‌ನಿಂದ ಕ್ಷಿಪಣಿಯನ್ನು ಯಶಸ್ವಿಯಾಗಿ ಉಡಾಯಿಸಲಾಯಿತು. 800 ಕಿ.ಮೀ ದೂರದಲ್ಲಿನ ಸಮುದ್ರದ ಗುರಿಯನ್ನು ಈ ಕ್ಷಿಪಣಿ ನಿಖರವಾಗಿ ಹೊಡೆದಿದೆ ಎಂದು ಪಯೋಂಗ್ಯಾಂಗ್‌ನ ಅಧಿಕೃತ ಸೆಂಟ್ರಲ್‌ ನ್ಯೂಸ್‌ ಏಜೆನ್ಸಿ ತಿಳಿಸಿದೆ.

ದಟ್ಟವಾದ ಅರಣ್ಯದ ನಡುವಿನ ಹಳಿಗಳ ಮೇಲಿನ ಲಾಂಚರ್‌ನಿಂದ ಎರಡು ವಿಭಿನ್ನ ಕ್ಷಿಪಣಿಗಳು ಹೊರಹೊಮ್ಮುತ್ತಿರುವುದನ್ನು ಸರ್ಕಾರಿ ಮಾಧ್ಯಮ ತೋರಿಸಿದೆ.

ಇದು ಉತ್ತರ ಕೊರಿಯಾವು ತನ್ನ ಉಡಾವಣಾ ವ್ಯವಸ್ಥೆಯನ್ನು ವೈವಿಧ್ಯಗೊಳಿಸುತ್ತಿರುವ ಪ್ರಯತ್ನಗಳನ್ನು ಪ್ರತಿಬಿಂಬಿಸುತ್ತದೆ. ಪ್ರಸ್ತುತ ವಾಹನಗಳು ಮತ್ತು ನೆಲದ ಮೇಲಿನ ಉಡಾವಣಾ ತಾಣಗಳನ್ನು ಉತ್ತರ ಕೊರಿಯಾ ಒಳಗೊಂಡಿದೆ. ಜಲಾಂತರ್ಗಾಮಿಗಳಲ್ಲೂ ಅದು ಈ ವ್ಯವಸ್ಥೆ ಹೊಂದಿರಬಹುದು ಎಂದೂ ಹೇಳಲಾಗುತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.