ADVERTISEMENT

ಆರ್‌ಬಿಐ ಆಯ್ದ ಕಚೇರಿಗಳಲ್ಲಿ 2005ರ ಮುಂಚಿನ ನೋಟು ವಿನಿಮಯ

​ಪ್ರಜಾವಾಣಿ ವಾರ್ತೆ
Published 30 ಜೂನ್ 2016, 19:30 IST
Last Updated 30 ಜೂನ್ 2016, 19:30 IST

ಮುಂಬೈ (ಪಿಟಿಐ): 2005ಕ್ಕೂ ಮುಂಚೆ ಮುದ್ರಣಗೊಂಡಿರುವ ನೋಟುಗಳನ್ನು ಜುಲೈ 1 ರಿಂದ ತನ್ನ ಆಯ್ದ ಕಚೇರಿಗಳಲ್ಲಿ ಮಾತ್ರ ಸ್ವೀಕರಿಸಲಾಗುವುದು ಎಂದು ಭಾರತೀಯ ರಿಸರ್ವ್‌ ಬ್ಯಾಂಕ್‌ (ಆರ್‌ಬಿಐ) ತಿಳಿಸಿದೆ. 2005ರ ನಂತರ ಮುದ್ರಣಗೊಂಡ  ನೋಟುಗಳಿಗೆ ಹೋಲಿಸಿದರೆ, ಅದಕ್ಕೂ ಮುಂಚಿನ ನೋಟುಗಳ ಮುದ್ರಣದಲ್ಲಿ ಸುರಕ್ಷತೆಯ ಲಕ್ಷಣಗಳು ಕಡಿಮೆ ಸಂಖ್ಯೆಯಲ್ಲಿ ಇದ್ದವು.

2005ರ ಮುಂಚೆ ಮುದ್ರಣಗೊಂಡಿದ್ದ ಬಹುತೇಕ ನೋಟುಗಳನ್ನು ಈಗಾಗಲೇ ಚಲಾವಣೆಯಿಂದ ಹಿಂದೆ ಪಡೆಯಲಾಗಿದೆ.  ತುಂಬ ಕಡಿಮೆ ಸಂಖ್ಯೆಯ ನೋಟುಗಳು ಮಾತ್ರ ಚಲಾವಣೆಯಲ್ಲಿ ಇವೆ. ಹೀಗಾಗಿ 2005ರ  ಮುಂಚಿನ ನೋಟುಗಳನ್ನು ಬದಲಿಸಿಕೊಳ್ಳುವ ಸೌಲಭ್ಯವನ್ನು ಆರ್‌ಬಿಐನ ಆಯ್ದ ಕಚೇರಿಗಳಲ್ಲಿ ಮಾತ್ರ ಒದಗಿಸಲು ನಿರ್ಧರಿಸಲಾಗಿದೆ.

ಬೆಂಗಳೂರು, ಅಹ್ಮದಾಬಾದ್‌, ಮುಂಬೈ, ದೆಹಲಿ, ಕೊಚ್ಚಿ ಸೇರಿದಂತೆ ಆಯ್ದ ಪ್ರಾದೇಶಿಕ ಕಚೇರಿಗಳಲ್ಲಿ ಮಾತ್ರ ಈ ನೋಟುಗಳನ್ನು ವಿನಿಮಯ ಮಾಡಲಾಗುವುದು ಎಂದು ಬ್ಯಾಂಕ್‌ ಪ್ರಕಟಣೆಯಲ್ಲಿ ತಿಳಿಸಿದೆ. 2005ರ ಮುಂಚಿನ ನೋಟುಗಳನ್ನು ಹೊಸ ನೋಟುಗಳಿಗೆ ವಿನಿಮಯ ಮಾಡಿಕೊಳ್ಳಲು ಈ ವರ್ಷದ ಜೂನ್‌ 30ರ ಗಡುವು ನಿಗದಿಪಡಿಸಲಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.