ADVERTISEMENT

ಎಂಟು ತಿಂಗಳ ಕನಿಷ್ಠ ಮಟ್ಟಕ್ಕೆ ಸಗಟು ಹಣದುಬ್ಬರ ಇಳಿಕೆ

ಪಿಟಿಐ
Published 17 ಜುಲೈ 2017, 19:30 IST
Last Updated 17 ಜುಲೈ 2017, 19:30 IST

ನವದೆಹಲಿ: ಸಗಟು ಹಣದುಬ್ಬರ ಜೂನ್‌ ತಿಂಗಳಿನಲ್ಲಿ ಶೇ 0.90ಕ್ಕೆ ಇಳಿಕೆಯಾಗಿದೆ. ಇದು ಎಂಟು ತಿಂಗಳ ಕನಿಷ್ಠ ಮಟ್ಟವಾಗಿದೆ.

2016ರ ಜೂನ್‌ನಲ್ಲಿ ಶೇ (–) 0.09ರಷ್ಟಿತ್ತು. 2017ರ ಮೇ ತಿಂಗಳಿನಲ್ಲಿ ಶೇ 2.17 ರಷ್ಟು ಪ್ರಗತಿ ಕಂಡಿತ್ತು.

ತರಕಾರಿ, ಆಹಾರ ಪದಾರ್ಥಗಳ ಬೆಲೆ ಇಳಿಕೆ ಆಗಿರುವುದರಿಂದ ಸಗಟು ಹಣದುಬ್ಬರ ದರ ಕನಿಷ್ಠ ಮಟ್ಟಕ್ಕೆ ತಗ್ಗಿದೆ ಎಂದು ಕೇಂದ್ರ ಸಾಂಖ್ಯಿಕ ಮತ್ತು ಕಾರ್ಯಕ್ರಮ ಅನುಷ್ಠಾನ ಸಚಿವಾಲಯ ತಿಳಿಸಿದೆ.

ADVERTISEMENT

2011–12ರ ಮೂಲವರ್ಷದ ಆಧಾರದ ಮೇಲೆ ಈ ಮಾಹಿತಿ ನೀಡಿದೆ.

ಆಹಾರ ಪದಾರ್ಥಗಳ ಬೆಲೆ ಶೇ 3.47 ರಷ್ಟು ಮತ್ತು ತರಕಾರಿಗಳ ಬೆಲೆ ಶೇ (–) 21.16ರಷ್ಟು ಇಳಿಕೆಯಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.