ADVERTISEMENT

ಎಸ್‌ಬಿಐ: ಶೇ10ರಷ್ಟು ಉದ್ಯೋಗ ಕಡಿತ

​ಪ್ರಜಾವಾಣಿ ವಾರ್ತೆ
Published 27 ಮಾರ್ಚ್ 2017, 20:07 IST
Last Updated 27 ಮಾರ್ಚ್ 2017, 20:07 IST

ನವದೆಹಲಿ: ದೇಶದ ಅತಿದೊಡ್ಡ ಬ್ಯಾಂಕ್‌ ಆಗಿರುವ  ಸ್ಟೇಟ್‌ ಬ್ಯಾಂಕ್‌ ಆಫ್‌ ಇಂಡಿಯಾ (ಎಸ್‌ಬಿಐ), ಮುಂದಿನ ಎರಡು ವರ್ಷಗಳಲ್ಲಿ ತನ್ನ ಸಿಬ್ಬಂದಿ ಸಂಖ್ಯೆ  ಕಡಿಮೆ ಮಾಡಲಿದೆ.

‘ಆರು ಬ್ಯಾಂಕ್‌ಗಳ ವಿಲೀನ, ಹೊಸ ನೇಮಕಾತಿಗೆ ಕಡಿವಾಣ,  ಬ್ಯಾಂಕ್‌ ವೃತ್ತಿ ತೊರೆಯುವ ಪ್ರವೃತ್ತಿ ಮತ್ತು ಡಿಜಿಟಲೀಕರಣ  ಕಾರಣಗಳಿಗೆ 2019ರಷ್ಟೊತ್ತಿಗೆ ಶೇ 10ರಷ್ಟು ಸಿಬ್ಬಂದಿ ಕಡಿತವಾಗಲಿದೆ’ ಎಂದು ಎಸ್‌ಬಿಐ ವ್ಯವಸ್ಥಾಪಕ ನಿರ್ದೇಶಕ  ರಜನೀಶ್‌ ಕುಮಾರ್‌ ಹೇಳಿದ್ದಾರೆ.

‘ನಾವು ನಮ್ಮ ಸಿಬ್ಬಂದಿಗೆ ಸ್ವಯಂ ನಿವೃತ್ತಿ ಯೋಜನೆ (ವಿಆರ್‌ಎಸ್‌) ಕೊಡುಗೆ ನೀಡಲಿದ್ದೇವೆ. ಅದು ಕಡ್ಡಾಯವಲ್ಲ.  ಕೆಲವರು  ಸಹಜವಾಗಿಯೇ ವೃತ್ತಿ ತೊರೆಯುತ್ತಾರೆ. ನಿವೃತ್ತಿಯಾದವರ ಸಂಖ್ಯೆಯಷ್ಟೆ ಹೊಸಬರನ್ನು ನೇಮಿಸಿಕೊಳ್ಳದಿರುವುದು, ಡಿಜಿಟಲೀಕರಣದಿಂದ  ಮಾನವ ಸಂಪನ್ಮೂಲದ ಬಳಕೆ ಕಡಿಮೆಯಾಗಲಿದೆ. ಈ ಒಟ್ಟು ಪರಿಣಾಮದಿಂದ  ಉದ್ಯೋಗ ಅವಕಾಶ ಕಡಿಮೆಯಾಗಲಿವೆ’ ಎಂದು ಹೇಳಿದ್ದಾರೆ. ‘ಹೊಸ ನೇಮಕಾತಿ ಮುಂದುವರೆಯುತ್ತದೆ.  ಆದರೆ,ಹೊಸ ಉದ್ಯೋಗ ಅವಕಾಶ  ಶೇ 50ರಷ್ಟು ಕಡಿಮೆಯಾಗಲಿದೆ.  7ರಿಂದ 8 ಸಾವಿರ ಮಾತ್ರ ಹೊಸಬರನ್ನು ನೇಮಿಸಿಕೊಳ್ಳಲಾಗುವುದು ಎಂದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.