ADVERTISEMENT

ಟಾಟಾ ಮೋಟಾರ್ಸ್‌ನ ಹೊಸ ಸೆಡಾನ್ ಜೆಸ್ಟ್

​ಪ್ರಜಾವಾಣಿ ವಾರ್ತೆ
Published 20 ಆಗಸ್ಟ್ 2014, 19:30 IST
Last Updated 20 ಆಗಸ್ಟ್ 2014, 19:30 IST

ಬೆಂಗಳೂರು: ದೇಶದ ಕಾರು ಮಾರುಕಟ್ಟೆಯಲ್ಲಿ ತನ್ನ ಪಾಲು ಹೆಚ್ಚಿಸಿಕೊಳ್ಳಲು ಯತ್ನಿಸುತ್ತಿರುವ ಟಾಟಾ ಮೋಟಾರ್ಸ್‌,  ೪ ಮೀಟರ್‌ಗಿಂತ ಕಡಿಮೆ ಉದ್ದದ ಕಾಂಪ್ಯಾಕ್ಟ್ ಸೆಡಾನ್ ‘ಜೆಸ್ಟ್’ ಕಾರನ್ನು ರಾಜ್ಯದ ಮಾರುಕಟ್ಟೆಗೆ ಬಿಡುಗಡೆ ಮಾಡಿದೆ.

ಇಲ್ಲಿ ಮಂಗಳವಾರ ಸುದ್ದಿಗೋಷ್ಠಿ ನಡೆಸಿದ ಟಾಟಾ ಮೋಟಾರ್ಸ್‌ ಮಾರುಕಟ್ಟೆ ಯೋಜನೆ ವಿಭಾಗದ ಹಿರಿಯ ಉಪಾಧ್ಯಕ್ಷ ಗಿರೀಶ್‌ ವಾಘ್‌, ಜೆಸ್ಟ್ ಕಾರು ಬಹಳ ಶಕ್ತಿಶಾಲಿ ರಿವೊಟ್ರನ್ ೧.೨ಟಿ ಎಂಜಿನ್ ಒಳಗೊಂಡಿದೆ. ಕಡಿಮೆ ಘರ್ಷಣೆ ಉಂಟು ಮಾಡುವ ಕ್ರಾಂಕ್ ಕೇಸ್ ಅಳವಡಿಸಲಾಗಿದೆ. ೩ ವರ್ಷ ಅಥವಾ ೧ ಲಕ್ಷ ಕಿ.ಮೀವರೆಗೂ ವಾರಂಟಿಯೂ ಇದೆ ಎಂದು ವಿವರಿಸಿದರು.

ಜೆಸ್ಟ್‌ ಕಾರು ಪೆಟ್ರೋಲ್ ಮಾದರಿಗೆ ಬೆಂಗಳೂರಿನಲ್ಲಿ ಆರಂಭಿಕ ಬೆಲೆ (ಎಕ್ಸ್‌ಷೋ ರೂಂ) ೪.೬೯ ಲಕ್ಷ ಹಾಗೂ ಡೀಸೆಲ್ ಮಾದರಿಗೆ ₨೫.೭೩ಲಕ್ಷವಿದೆ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.