ನ್ಯೂಯಾರ್ಕ್ (ಪಿಟಿಐ): ‘ನಾನು ಸಲಿಂಗಕಾಮಿ ಎಂದು ಹೇಳಿಕೊಳ್ಳಲು ನನಗೆ ಹೆಮ್ಮೆ ಎನಿಸುತ್ತದೆ . ದೇವರು ನನಗೆ ನೀಡಿರುವ ವರ ಎಂದು ಭಾವಿಸುತ್ತೇನೆ’ ಎಂದು ಆ್ಯಪಲ್ ಮುಖ್ಯಕಾರ್ಯನಿರ್ವಹಣಾಧಿಕಾರಿ ಟಿಮ್ ಕುಕ್ ಗುರುವಾರ ಬಹಿರಂಗ ಹೇಳಿಕೆ ನೀಡಿದರು.
ಬ್ಲೂಮ್ಬರ್ಗ್ ಪತ್ರಿಕೆಗೆ ಬರೆದ ಲೇಖನದಲ್ಲಿ ಕುಕ್ ಈ ರೀತಿ ಹೇಳಿಕೊಂಡಿದ್ದಾರೆ.
‘ನಾನು ಸಲಿಂಗಕಾಮಿ ಎನ್ನುವ ಸತ್ಯವನ್ನು ಬಹಿರಂಗಪಡಿಸುವುದು ಅಷ್ಟು ಸುಲಭವಲ್ಲ. ಆದರೆ ಆ್ಯಪಲ್ನಂತಹ ಪ್ರತಿಷ್ಠಿತ ಕಂಪೆನಿಯ ಸಿಇಒ ಒಬ್ಬ ಸಲಿಂಗಕಾಮಿ ಎನ್ನುವುದು ಬಹಿರಂಗವಾದರೆ, ಸಲಿಂಗಕಾಮಿಯಾಗಿದ್ದೂ ಬೇರೆಯವರೊಂದಿಗೆ ಹೇಳಿಕೊಳ್ಳಲಾಗದೆ ಒಂಟಿತನ ಅನುಭವಿಸುತ್ತಿರುವವರಿಗೆ ತುಸು ಧೈರ್ಯ ಬರುತ್ತದೆ ಎನ್ನುವುದಷ್ಟೇ ನನ್ನ ಉದ್ದೇಶ’ ಎಂದಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.