ADVERTISEMENT

ಬಿಎಸ್‌ಇ ಸೂಚ್ಯಂಕ ಮತ್ತೆ 562 ಅಂಶ ಕುಸಿತ

​ಪ್ರಜಾವಾಣಿ ವಾರ್ತೆ
Published 4 ಸೆಪ್ಟೆಂಬರ್ 2015, 10:40 IST
Last Updated 4 ಸೆಪ್ಟೆಂಬರ್ 2015, 10:40 IST
ಬಿಎಸ್‌ಇ ಸೂಚ್ಯಂಕ ಮತ್ತೆ 562 ಅಂಶ ಕುಸಿತ
ಬಿಎಸ್‌ಇ ಸೂಚ್ಯಂಕ ಮತ್ತೆ 562 ಅಂಶ ಕುಸಿತ   

ಮುಂಬೈ (ಪಿಟಿಐ): ಅಮೆರಿಕದ ಸೆಂಟ್ರಲ್‌ ಬ್ಯಾಂಕ್‌ನ ಬಡ್ಡಿ ಪರಿಷ್ಕರಣೆ ನಿರ್ಧಾರ, ಅಲ್ಲಿನ ಉದ್ಯೋಗ ಮಾರುಕಟ್ಟೆಯ ನಕಾರಾತ್ಮಕ ಪ್ರಗತಿ, ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲದ ಬೆಲೆ ಹೆಚ್ಚಬಹುದು ಎಂಬ ವಿಶ್ಲೇಷಣೆಯಿಂದ ಮುಂಬೈ ಷೇರುಪೇಟೆ ಸಂವೇದಿ ಸೂಚ್ಯಂಕ ಶುಕ್ರವಾರದ ವಹಿವಾಟಿನಲ್ಲಿ 562 ಅಂಶಗಳಷ್ಟು ಕುಸಿತ ಕಂಡಿದ್ದು, ವರ್ಷದ ಹಿಂದಿನ ಮಟ್ಟವಾದ 25,201 ಅಂಶಗಳಿಗೆ ಜಾರಿದೆ.

ಡಾಲರ್‌ ವಿರುದ್ಧ ರೂಪಾಯಿ ಅಪಮೌಲ್ಯ ಮುಂದುವರಿದಿರುವುದೂ ಷೇರುಪೇಟೆಯ ಮೇಲೆ ದೊಡ್ಡ ಪ್ರಮಾಣದಲ್ಲಿ ನಕಾರಾತ್ಮಕ ಪ್ರಭಾವ ಬೀರಿದೆ.  ಜಾಗತಿಕ ವಿದ್ಯಮಾನಗಳಿಂದ ಆತಂಕಕ್ಕೆ ಒಳಗಾಗಿರುವ ಹೂಡಿಕೆದಾರರು  ಒಮ್ಮಲೆ ಷೇರು ಮಾರಾಟಕ್ಕೆ ಮುಂದಾಗಿದ್ದರಿಂದ ಶುಕ್ರವಾರ ಬೆಳಗಿನ ವಹಿವಾಟಿನಲ್ಲಿ ಸೂಚ್ಯಂಕ 14 ತಿಂಗಳ ಹಿಂದಿನ ಮಟ್ಟಕ್ಕೆ ಕುಸಿದಿತ್ತು.  ರಾಷ್ಟ್ರೀಯ ಷೇರು ಸೂಚ್ಯಂಕ ‘ನಿಫ್ಟಿ’ ಕೂಡ  160 ಅಂಶಗಳಷ್ಟು ಕುಸಿದು, 7,663 ಅಂಶಗಳಲ್ಲಿ ವಹಿವಾಟು ಕಂಡಿತು.

ಅಮೆರಿಕದ ಸೆಂಟ್ರಲ್‌ ಬ್ಯಾಂಕ್‌ ಸೆಪ್ಟೆಂಬರ್‌ 17ರಂದು ಬಡ್ಡಿ ದರ ಪರಿಷ್ಕರಣೆ ಮಾಡಲಿದೆ. ಈ ಬೆಳವಣಿಗೆಯು ಜಾಗತಿಕ ಹಣಕಾಸು ಮಾರುಕಟ್ಟೆಯ ಮೇಲೆ ದೊಡ್ಡ ಪ್ರಮಾಣದಲ್ಲಿ ಪ್ರಭಾವ ಬೀರುವ ಸಾಧ್ಯತೆಗಳಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.