ಬೆಂಗಳೂರು: ಸರಕು ಮತ್ತು ಸೇವಾ ತೆರಿಗೆ (ಜಿಎಸ್ಟಿ) ವ್ಯವಸ್ಥೆಗೆ ಬದಲಾಗಲು ಉದ್ದಿಮೆ ಮತ್ತು ತೆರಿಗೆದಾರರ ಅನುಕೂಲಕ್ಕಾಗಿ ‘ಜಿಎಸ್ಟಿ ಸ್ಟಾರ್’ ಹೆಸರಿನ ಸಮಗ್ರ ಸೇವೆ ಒದಗಿಸುವ ಸ್ಟಾರ್ಟ್ಅಪ್ ಅಸ್ತಿತ್ವಕ್ಕೆ ಬಂದಿದೆ.
ಇನ್ಫೊಸಿಸ್ನ ಮಾಜಿ ಉದ್ಯೋಗಿಗಳಾಗಿರುವ ಶೈಲೇಶ್ ಅಗರ್ವಾಲ್ ಮತ್ತು ಬಾಲಾಜಿ ಜಿ.ಎಸ್. ರಾವ್ ಅವರು ಈ ಸ್ಟಾರ್ಟ್ಅಪ್ ಆರಂಭಿಸಿದ್ದಾರೆ. ಇನ್ಫೊಸಿಸ್ನ ಮಾಜಿ ನಿರ್ದೇಶಕರಾದ ಟಿ.ವಿ ಮೋಹನ್ದಾಸ್ ಪೈ ಮತ್ತು ವಿ ಬಾಲಕೃಷ್ಣನ್ ಅವರು ‘ಜಿಎಸ್ಟಿ ಸ್ಟಾರ್’ನಲ್ಲಿ ₹ 6.5 ಕೋಟಿಗಳಷ್ಟು ಬಂಡವಾಳ ತೊಡಗಿಸಿದ್ದಾರೆ. ನೋಂದಣಿ, ಲೆಕ್ಕಪತ್ರ ಸಲ್ಲಿಕೆ, ತೆರಿಗೆ ಪಾವತಿ ಸೇರಿದಂತೆ ಜಿಎಸ್ಟಿಗೆ ಸಂಬಂಧಿಸಿದ ಎಲ್ಲ ಸೇವೆಗಳನ್ನು ‘ಜಿಎಸ್ಟಿ ಸ್ಟಾರ್ ’ ಒದಗಿಸಲಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.