ADVERTISEMENT

ಸೂಚ್ಯಂಕ ಸಾರ್ವಕಾಲಿಕ ದಾಖಲೆ

​ಪ್ರಜಾವಾಣಿ ವಾರ್ತೆ
Published 28 ನವೆಂಬರ್ 2014, 12:39 IST
Last Updated 28 ನವೆಂಬರ್ 2014, 12:39 IST

ನವದೆಹಲಿ (ಪಿಟಿಐ): ಮುಂಬೈ ಷೇರುಪೇಟೆ ಸಂವೇದಿ ಸೂಚ್ಯಂಕ (ಬಿಎಸ್‌ಇ) ಶುಕ್ರವಾರ ವಹಿವಾಟಿನ ಅಂತ್ಯಕ್ಕೆ ಮತ್ತೊಂದು ಸಾರ್ವಕಾಲಿಕ ದಾಖಲೆ ನಿರ್ಮಿಸಿದೆ. ದಿನದ ವಹಿವಾಟಿನಲ್ಲಿ 255 ಅಂಶಗಳಷ್ಟು ಏರಿಕೆ ಕಂಡ ಸೂಚ್ಯಂಕ 28,693 ಅಂಶಗಳಲ್ಲಿ ವಹಿವಾಟು ಕೊನೆಗೊಳಿಸಿತು.

ಇನ್ನು 307 ಅಂಶಗಳಷ್ಟು ಏರಿಕೆ ಕಂಡರೆ ಸೂಚ್ಯಂಕ 29 ಸಾವಿರದ ಗಡಿ ದಾಟಲಿದೆ. ರಾಷ್ಟ್ರೀಯ ಷೇರು ಸೂಚ್ಯಂಕ ‘ನಿಫ್ಟಿ’ ಕೂಡ 94 ಅಂಶಗಳಷ್ಟು ಜಿಗಿತ ಕಂಡು 8,588 ಅಂಶಗಳ ಗಡಿ ದಾಟಿತು.

ಮಾರುಕಟ್ಟೆ ತಜ್ಞರ ಲೆಕ್ಕಾಚಾರಗಳನ್ನು ಮೀರಿ ಷೇರುಪೇಟೆ ಏರಿಕೆ ಕಾಣುತ್ತಿದೆ. ವಿಮಾ ಮಸೂದೆ ತಿದ್ದುಪಡಿಗೆ ಅನುಮೋದನೆ ಲಭಿಸಿದರೆ ಸೂಚ್ಯಂಕ ಹೊಸ ಎತ್ತರಕ್ಕೆ ಚಿಮ್ಮಲಿದೆ ಎನ್ನುತ್ತಾರೆ ಹಣಕಾಸು ಮಾರುಕಟ್ಟೆ ಪರಿಣಿತರು.

ಭಾರತೀಯ ರಿಸರ್ವ್‌ ಬ್ಯಾಂಕ್‌ (ಆರ್‌ಬಿಐ) ಮುಂದಿನ ವಾರ ಪ್ರಕಟಿಸಲಿರುವ ಹಣಕಾಸು ನೀತಿಯಲ್ಲಿ ಬಡ್ಡಿ ದರ ಕಡಿತ ಮಾಡಲಿದೆ ಎಂಬ ವಿಶ್ಲೇಷಣೆಗಳಿಂದ ಕಳೆದ ಮೂರು ದಿನಗಳಿಂದ ಸೂಚ್ಯಂಕ ಸತತ ಏರಿಕೆ ಕಾಣುತ್ತಿದೆ. ಶುಕ್ರವಾರ ವಹಿವಾಟಿನ ಅಂತ್ಯಕ್ಕೆ ಮುಂಬೈ ಷೇರುಪೇಟೆ ಬಂಡವಾಳ ಮೌಲ್ಯ ರೂ 99.81 ಲಕ್ಷ ಕೋಟಿಗೆ ಏರಿಕೆ ಕಂಡಿದೆ.

ಶುಕ್ರವಾರ ಡಾಲರ್‌ ವಿರುದ್ಧ ರೂಪಾಯಿ ವಿನಿಮಯ ಮೌಲ್ಯ 9 ತಿಂಗಳಲ್ಲೇ ಕನಿಷ್ಠ ಮಟ್ಟವಾದ ರೂ 62.03ಕ್ಕೆ ಕುಸಿದಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT