ADVERTISEMENT

‘ಐಪಿಒ’ದಿಂದ ರೂ.180 ಕೋಟಿ ಸಂಗ್ರಹ ನಿರೀಕ್ಷೆ: ವಂಡರ್‌ಲಾ

​ಪ್ರಜಾವಾಣಿ ವಾರ್ತೆ
Published 16 ಏಪ್ರಿಲ್ 2014, 19:30 IST
Last Updated 16 ಏಪ್ರಿಲ್ 2014, 19:30 IST

ಬೆಂಗಳೂರು: ಮನರಂಜನಾ ಉದ್ಯಾನ ಕ್ಷೇತ್ರದ, ಕೊಚ್ಚಿ ಮೂಲದ ಕಂಪೆನಿ ‘ವಂಡರ್‌ಲಾ’, ಸಾಮರ್ಥ್ಯ ವಿಸ್ತರಣೆ ಗಾಗಿ ಹೆಚ್ಚುವರಿ ಬಂಡವಾಳ ಸಂಗ್ರಹಿ ಸಲು ಏ. 21ರಂದು ಷೇರುಪೇಟೆ ಪ್ರವೇ ಶಿಸುತ್ತಿದೆ. ‘ಆರಂಭಿಕ ಸಾರ್ವಜನಿಕ ಹೂಡಿಕೆ’ (ಐಪಿಒ) ಮೂಲಕ ರೂ.181 ಕೋಟಿ ಬಂಡವಾಳ ಸಂಗ್ರಹಣೆ ಗುರಿ ಇಟ್ಟುಕೊಂಡಿದೆ.

ರೂ.10 ಮುಖಬೆಲೆಯ 1.45 ಕೋಟಿ ಷೇರು ಬಿಡುಗಡೆ ಮಾಡುತ್ತಿದ್ದು, ಪ್ರತಿ ಷೇರಿಗೆ ರೂ.115ರಿಂದ ರೂ.125ರಷ್ಟು ದರ ನಿಗದಿಪಡಿಸಲಾಗಿದೆ. ಆರ್ಹ ಸಾಂಸ್ಥಿಕ ಹೂಡಿಕೆದಾರರಿಗೆ ಶೇ 30ರಷ್ಟು ಷೇರು ಮೀಸಲು ಎಂದು ವಂಡರ್‌ಲಾ ಹಾಲಿ ಡೇಸ್‌ ಲಿ.ನ ವ್ಯವಸ್ಥಾಪಕ ನಿರ್ದೇಶಕ ಅರುಣ್‌ ಕೆ.ಚಿಟ್ಟಿಲಾಪಳ್ಳಿ ಬುಧವಾರ ಇಲ್ಲಿ ಸುದ್ದಿ ಗೋಷ್ಠಿಯಲ್ಲಿ ತಿಳಿಸಿದರು.

ಕೊಚ್ಚಿಯಲ್ಲಿ 28.75 ಎಕರೆಯಲ್ಲಿ ಮತ್ತು ಬೆಂಗಳೂರಿನಲ್ಲಿ 39.20 ಎಕರೆ ಯಲ್ಲಿ ವಂಡರ್‌ಲಾ ಉದ್ಯಾನವಿದೆ. ಎರ ಡರಿಂದ ಒಟ್ಟು ರೂ.230 ಕೋಟಿ ಬಂಡ ವಾಳ ತೊಡಗಿಸಲಾಗಿದೆ. ರೂ.250 ಕೋಟಿ ವೆಚ್ಚದಲ್ಲಿ 3ನೇ ಘಟಕ ಹೈದರಬಾದ್‌ ನಲ್ಲಿ 14.70 ಎಕರೆಯಲ್ಲಿ ನೆಲೆಗೊಳ್ಳು ತ್ತಿದ್ದು, 2016ಕ್ಕೆ ಕಾರ್ಯಾರಂಭ ಮಾಡಲಿದೆ(ಸದ್ಯ ಭೂಮಿ ಸ್ವಾಧೀನ ವಿವಾದದಲ್ಲಿದೆ). ಇಲ್ಲಿ ಸದ್ಯ ರೂ.36 ಕೋಟಿ ವಿನಿಯೋಗಿಸಲಾಗಿದೆ ಎಂದು ಪ್ರಶ್ನೆಗಳಿಗೆ ಉತ್ತರಿಸಿದರು.

ದೇಶದಲ್ಲಿ 1988ರಲ್ಲಿ ಮೊದಲ ಮನರಂಜನೆ ಉದ್ಯಾನ ಆರಂಭವಾ ಯಿತು. ಸದ್ಯ ದೇಶದಾದ್ಯಂತ 150ರಷ್ಟು ಮನರಂಜನೆ ಉದ್ಯಾನಗಳಿದ್ದು, ಮಾರು ಕಟ್ಟೆ ಗಾತ್ರ ರೂ.2600 ಕೋಟಿಯಷ್ಟಿದೆ. ಟಿಕೆಟ್‌ ಮೂಲಕ ಶೇ 33, ಹೋಟೆಲ್‌, ಗೇಮ್ಸ್‌ಗಳಿಂದ ಶೇ 67ರಷ್ಟು ವರಮಾನ ಸಂಗ್ರಹವಾಗುತ್ತಿದೆ ಎಂದು ಉದ್ಯಮ ಕುರಿತು ವಿವರ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.