ADVERTISEMENT

ವಿದೇಶಿ ಹೂಡಿಕೆ ಹೆಚ್ಚಳ ನಿರೀಕ್ಷೆ

ಪಿಟಿಐ
Published 9 ಜನವರಿ 2018, 19:30 IST
Last Updated 9 ಜನವರಿ 2018, 19:30 IST

ಮುಂಬೈ: ಪ್ರಸಕ್ತ ಆರ್ಥಿಕ ವರ್ಷದಲ್ಲಿ ವಿದೇಶಿ ಹೂಡಿಕೆ ಐದು ಪಟ್ಟು ಹೆಚ್ಚಾಗುವ ನಿರೀಕ್ಷೆ ಇದೆ ಎಂದು ಇಂಡಿಯನ್‌ ಕ್ರೆಡಿಟ್‌ ರೇಟಿಂಗ್‌ ಏಜಿನ್ಸಿ (ಐಸಿಆರ್‌ಎ) ಹೇಳಿದೆ.

2017ರಲ್ಲಿ ಬಿಎಸ್‌ಇ ಮತ್ತು ನಿಫ್ಟಿ ಸೂಚ್ಯಂಕಗಳು ಶೇ 28ರಷ್ಟು ಏರಿಕೆ ದಾಖಲಿಸಿವೆ. 2018ರ ಮೊದಲ ವಾರದ ವಹಿವಾಟಿನಲ್ಲಿ ಸಾರ್ವಕಾಲಿಕ ದಾಖಲೆ ಮಟ್ಟಕ್ಕೆ ಏರಿಕೆ ಕಂಡಿವೆ. ಈ ಸಕಾರಾತ್ಮಕ ವಹಿವಾಟಿನಿಂದಾಗಿ ವಿದೇಶಿ ಹೂಡಿಕೆ ಮೊತ್ತವೂ ಏರಿಕೆ ಕಾಣಲಿದೆ ಎಂದು ತಜ್ಞರು ಹೇಳಿದ್ದಾರೆ.

2016–17ರ ಅಂತ್ಯಕ್ಕೆ ವಿದೇಶಿ ಹೂಡಿಕೆ ಮೊತ್ತ ₹ 48,400 ಕೋಟಿ ಇತ್ತು. 2017–18ರ ಅಂತ್ಯದ ವೇಳೆಗೆ ₹ 1.76 ಲಕ್ಷ ಕೋಟಿಯಿಂದ ₹ 2.20 ಲಕ್ಷ ಕೋಟಿಗೆ ಏರಿಕೆ ಕಾಣಲಿದೆ ಎಂದು ಅಂದಾಜಿಸಲಾಗಿದೆ. ಈಗಾಗಲೇ ₹ 95,600 ಕೋಟಿ ಹೂಡಿಕೆ ಮಾಡಿವೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.