ADVERTISEMENT

ಆರೋಪಿಗೆ ಶಿಕ್ಷೆ ಕೊಡಿಸಲು ಒತ್ತಾಯ

​ಪ್ರಜಾವಾಣಿ ವಾರ್ತೆ
Published 20 ಏಪ್ರಿಲ್ 2018, 4:49 IST
Last Updated 20 ಏಪ್ರಿಲ್ 2018, 4:49 IST

ರಬಕವಿ- ಬನಹಟ್ಟಿ: ಬನಹಟ್ಟಿಯಲ್ಲಿ ಬಾಲಕಿ ಮೇಲೆ ಅತ್ಯಾಚಾರಕ್ಕೆ ಪ್ರಯತ್ನಿಸಿದ ನಗರಸಭೆ ಮಾಜಿ ಅಧ್ಯಕ್ಷ ಮೌಲಾಸಾಬ್‌ ಬೂದಿಹಾಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಸಿದ್ದು ಸವದಿ ಒತ್ತಾಯಿಸಿದರು.

ನಗರದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಇಂತಹ ಘಟನೆ ನಡೆದರೂ ಕೆಲವರು ಆರೋಪಿ ಪರ ನಿಂತು ಆತನನ್ನು ಬೆಂಬಲಿಸುತ್ತಿದ್ದಾರೆ. ಅದು ಖಂಡ ನೀಯ. ಅಂತಹವರನ್ನು ಬೆಂಬಲಿಸುವ ವ್ಯಕ್ತಿಗಳಿಗೂ ಶಿಕ್ಷೆಯಾಗಬೇಕು ಎಂದರು.

ಆರೋಪಿ ಮೌಲಾಸಾಬ್‌ ಮನೆ ಅನೈತಿಕ ಚಟುವಟಿಕೆಯ ತಾಣವಾಗಿದೆ. ಆತನ ಮನೆಯನ್ನು ಅಧಿಕಾರಿಗಳು ವಶಕ್ಕೆ ಪಡೆದು ಪರಿಶೀಲನೆ ನಡೆಸಬೇಕು ಎಂದು ಸವದಿ ಒತ್ತಾಯಿಸಿದರು. ಈ ಪ್ರಕರಣದ ಬಗ್ಗೆ ಕೆಪಿಸಿಸಿ ಕಾರ್ಯಾಧ್ಯಕ್ಷ ದಿನೇಶ ಗುಂಡೂರಾವ್ ಪ್ರತಿಕ್ರಿಯೆ ನೀಡಲಿ ಎಂದರು.

ADVERTISEMENT

ಅತ್ಯಾಚಾರಕ್ಕೆ ಬೆದರಿದ ಮಗು ಹಾಗೂ ಅವರ ಕುಟುಂಬಕ್ಕೆ ಸೂಕ್ತ ರಕ್ಷಣೆ ನೀಡಬೇಕಾಗಿದೆ. ಇಂತಹ ಘಟನೆಗಳನ್ನು ಎಲ್ಲ ಸಮುದಾಯದವರು ಒಂದಾಗಿ ಖಂಡಿಸಬೇಕು ಎಂದರು.

ಮಹಾದೇವಪ್ಪ ಹಟ್ಟಿ, ಭೀಮಶಿ ಮಗದುಮ್, ದುಂಡಪ್ಪ ಮಾಚಕನೂರ, ಹರ್ಷವರ್ಧನ ಪಟವರ್ಧನ, ಸಿದ್ದು ಮುನ್ನೋಳ್ಳಿ, ಪ್ರಭಾಕರ ಮೊಳೇದ, ರಾಜು ಬಾಣಕಾರ, ನಂದು ಗಾಯಕವಾಡ, ಕುಮಾರ ಕದಮ, ಶೇಖರ ಹಕ್ಕಲದಡ್ಡಿ, ಗೋವಿಂದ ಡಾಗಾ, ಈರಣ್ಣ ಚಿಂಚಕಂಡಿ, ಚಿದಾನಂದ ಹೊರಟ್ಟಿ ಸೇರಿದಂತೆ ಅನೇಕರಿದ್ದರು.

ಬಂದ್ ಕರೆ: ಬಾಲಕಿ ಮೇಲಿನ ಅತ್ಯಾಚಾರ ಯತ್ನ ಪ್ರಕರಣ ಸಂಬಂಧಪಟ್ಟಂತೆ ಶ್ರೀರಾಮಸೇನೆ ನೇತೃತ್ವದಲ್ಲಿ ಇದೇ 20 ರಬಕವಿ- ಬನಹಟ್ಟಿ ಬಂದ್‌ಗೆ ಕರೆ ನೀಡಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.