ADVERTISEMENT

‘ಬಾಹುಬಲಿ 2’ ಚಿತ್ರ ಬಿಡುಗಡೆಗೆ ವಿರೋಧ

​ಪ್ರಜಾವಾಣಿ ವಾರ್ತೆ
Published 18 ಏಪ್ರಿಲ್ 2017, 6:58 IST
Last Updated 18 ಏಪ್ರಿಲ್ 2017, 6:58 IST

ಬಳ್ಳಾರಿ: ತಮಿಳು ನಟ ಸತ್ಯರಾಜ ಅವರು ನಟಿಸಿರುವ ತೆಲುಗು ಚಿತ್ರ ಬಾಹುಬಾಲಿ 2 ಸಿನಿಮಾ ಬಿಡುಗಡೆಯನ್ನು ರಾಜ್ಯದಾ ದ್ಯಂತ ರದ್ದುಪಡಿಸಬೇಕು ಎಂದು ಆಗ್ರ ಹಿಸಿ ಕರ್ನಾಟಕ ರಕ್ಷಣಾ ಸೇನೆ ಜಿಲ್ಲಾ ಘಟಕದ ಪದಾಧಿಕಾರಿಗಳು ಸೋಮ ವಾರ ಇಲ್ಲಿ ಚಿತ್ರತಂಡದ ಪ್ರತಿಕೃತಿದಹಿಸಿ ಪ್ರತಿಭಟನೆ ನಡೆಸಿದರು.ಇಲ್ಲಿನ ಗಡಿಗಿ ಚೆನ್ನಪ್ಪ ವೃತ್ತದ ಬಳಿ ಸೇನೆಯ ಅಧ್ಯಕ್ಷ ಧರ್ಮರೆಡ್ಡಿ ನೇತೃತ್ವದ ನೂರಾರು ಕಾರ್ಯಕರ್ತರು ಸಮಾವೇಶ ಗೊಂಡು ಚಿತ್ರತಂಡದ ವಿರುದ್ಧ ಘೋಷಣೆ ಕೂಗಿದರು. ಬಳಿಕ ಬೆಂಗಳೂರು ರಸ್ತೆ, ಕೃಷ್ಣಮಾಚಾ ರ್ಯ ರಸ್ತೆಯ ಮಾರ್ಗವಾಗಿ ಜಿಲ್ಲಾಧಿಕಾರಿ ಕಚೇರಿಯವರೆಗೆ ಬೃಹತ್ ಮೆರವಣಿಗೆ ಕೈಗೊಂಡರು. ತಹಶೀಲ್ದಾರ್ ಮೆಹತಾಬ್ ಅವರಿಗೆ ಮನವಿಪತ್ರವನ್ನು ಸಲ್ಲಿಸಿದರು. 

ಕರ್ನಾಟಕದ ಕಾವೇರಿ ನದಿ ಹಾಗೂ ಕನ್ನಡಪರ ಹೋರಾಟಗಾರರ ಬಗ್ಗೆ ನಟ ಸತ್ಯರಾಜ ಅವರು ಕಟ್ಟಪ್ಪನ ಪಾತ್ರದಲ್ಲಿ ಕಾಣಿಸಿಕೊಂಡು ಅವಹೇಳನಕಾರಿ ಮಾತುಗಳನ್ನಾಡಿದ್ದಾರೆ. ಅವರು ಕನ್ನಡಿ ಗರ ಕೆಂಗಣ್ಣಿಗೆ ಗುರಿ ಆಗಿದ್ದಾರೆ. ಈ ಕೂಡಲೇ ಬಾಹುಬಲಿ 2 ಸಿನಿಮಾ ಪ್ರದರ್ಶನಕ್ಕೆ ರಾಜ್ಯ ಸರ್ಕಾರ ಅವಕಾಶ ಕಲ್ಪಿಸಬಾರದು.
ಸತ್ಯರಾಜ ಅವರು ಕೂಡಲೇ ಕನ್ನಡಿಗರ ಕ್ಷಮೆಯಾಚಿಸಬೇಕು ಎಂದು ಆಗ್ರಹಿಸಿದರು.

ಪದಾಧಿಕಾರಿಗಳಾದ ಉಮ್ಮರ್ ಫಾರೂಕ್, ಯು.ವೀರಸ್ವಾಮಿ, ಗಂಗಣ್ಣ, ರಾಮಾಂಜಿನಿ, ಎಸ್‌.ಆರ್.ನೀಲ ಕಂಠ, ಸಣ್ಣ ಹೊನ್ನೂರಪ್ಪ, ದುರುಗೇಶ, ಶ್ರೀನಿ ವಾಸ, ನೀಲಕಂಠ, ಗವಿಸಿದ್ದ, ಲಿಂಗ ರಾಜ, ಶಿವು, ಮಸ್ತಾನ್‌, ರಾಜ, ಜಾನಿ, ಬಸವರಾಜ ಇದ್ದರು.ಕರ್ನಾಟಕ ಯುವಕ ಸಂಘದ ಜಿಲ್ಲಾ ಘಟಕ: ತೆಲುಗು ಚಿತ್ರ ಬಾಹುಬಾಲಿ 2 ಸಿನಿಮಾ ಪ್ರದರ್ಶನವನ್ನು ರಾಜ್ಯದಾ ದ್ಯಂತ ರದ್ದುಪಡಿಸಬೇಕು ಎಂದು ಆಗ್ರ ಹಿಸಿ ಸಂಘದ ಪದಾಧಿಕಾರಿಗಳು ಇಲ್ಲಿನ ಜಿಲ್ಲಾಧಿಕಾರಿ ಕಚೇರಿಯಲ್ಲಿ ತಹಶೀಲ್ದಾರ್ ಮೆಹತಾಬ್ ಅವರಿಗೆ ಮನವಿಪತ್ರವನ್ನು ಸಲ್ಲಿಸಿದರು.

ADVERTISEMENT

ನಗರದ ವಿವಿಧ ಚಿತ್ರಮಂದಿರಗಳಲ್ಲಿ ನಿಗದಿತ ದರಕ್ಕಿಂತಲೂ ಹೆಚ್ಚುವರಿ ದರವನ್ನು ಸಿನಿಮಾ ವೀಕ್ಷಕರಿಂದ ಪಡೆಯುತ್ತಿದ್ದಾರೆ. ಹೊಸ ಸಿನಿಮಾ ಬಿಡುಗಡೆಯ ಸಂದರ್ಭ ಟಿಕೇಟ್‌ ದರ ಗಗನಕ್ಕೇರುತ್ತದೆ. ಕನಿಷ್ಠ ₹ 150 ದರ ನಿಗದಿಪಡಿಸಿದೆಯಾದರೂ, ಆ ದಿನ ಗಳಲ್ಲಿ ಅದರ ಮೂರ್ನಾಲ್ಕು ಪಟ್ಟು ಹೆಚ್ಚಿಸಿ, ಚಿತ್ರ ಪ್ರೇಮಿಗಳಿಂದ ಹಣ ವಸೂಲಿ ಮಾಡುತ್ತಿದ್ದಾರೆ. ಈ ಕುರಿತು ಕೂಡಲೇ ಜಿಲ್ಲಾಡಳಿತ ಕ್ರಮ ಕೈಗೊಳ್ಳ ಬೇಕು ಎಂದು ಆಗ್ರಹಿಸಿದರು.ಸಂಘದ ಪದಾಧಿಕಾರಿಗಳಾದ ಕೇಣಿ ಬಸವರಾಜ, ಮುಂಡಾಸದ ಮಲ್ಲಿಕಾ ರ್ಜುನ, ಸಿದ್ಮಲ್ ಮಂಜುನಾಥ, ಎಂ. ನಾಗರಾಜ, ಕೋಳೂರು ವೆಂಕಟೇಶ ಗೌಡ, ಮಂಜುನಾಥ, ಬಸವರಾಜ, ಕೇದಾರನಾಥ, ರವಿಕುಮಾರ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.