ADVERTISEMENT

‘ಭಾಷಾ ಉಳಿವಿಗೆ ಕಟಿಬದ್ಧರಾಗಿ’

ಕಸಾಪ ಮಹಿಳಾ ಅಧ್ಯಕ್ಷೆ ಪುನಿತಾ ನಟರಾಜ್‌ ಅಭಿಮತ

​ಪ್ರಜಾವಾಣಿ ವಾರ್ತೆ
Published 9 ಜನವರಿ 2017, 10:03 IST
Last Updated 9 ಜನವರಿ 2017, 10:03 IST
ದೇವನಹಳ್ಳಿ: ಮಾತೃ ಭಾಷೆಯಾಗಿರುವ ಕನ್ನಡ ಉಳಿವು ಮನೆಯಲ್ಲಿರುವ ತಾಯಂದಿರ ಮಾತ್ರ ಸಾಧ್ಯವೆಂದು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್‌ ಮಹಿಳಾ ಅಧ್ಯಕ್ಷೆ ಪುನಿತಾ ನಟರಾಜ್‌ ಅಭಿಪ್ರಾಯಪಟ್ಟರು.
 
ದೇವನಹಳ್ಳಿ ಕನಕ ಭವನದಲ್ಲಿ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್‌ ಮಹಿಳಾ ಅಧ್ಯಕ್ಷರ ನೇಮಕ ಮತ್ತು ಸಾವಿತ್ರಿ ಬಾಪುಲೆ ಜನ್ಮದಿನಾಚರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಜ್ಞಾನಾರ್ಜನೆಗೆ ಎಲ್ಲ  ಭಾಷೆಗಳು ಬೇಕು. ಆದರೆ ತಾಯಿ ನೆಲದ ಭಾಷೆಯನ್ನು ನಿರ್ಲಕ್ಷ್ಯ ಮಾಡಬಾರದು ಎಂದರು. ಉದ್ದೇಶಿತ ಭಾಷೆ ಉಳಿವಿಗೆ ಮಾತೆಯರು ಟೊಂಕ ಕಟ್ಟಿ ನಿಂತು, ಸ್ವಾಭಿಮಾನಿಗಳಾದ ನಾವು ಕನ್ನಡ ಭಾಷೆ ಬೆಳವಣಿಗೆ ವಿಚಾರದಲ್ಲಿ ಕಟಿಬದ್ಧರಾಗಿ ನಿಲ್ಲಬೇಕು ಎಂದರು.
 
ಕನ್ನಡಸಾಹಿತ್ಯ ಪರಿಷತ್‌ ಹಿರಿಯ ಸಲಹೆಗಾರ ಶರಣಯ್ಯ ಹಿರೇಮಠ್‌ ಮಾತನಾಡಿ, ಮಹಿಳೆಯರಲ್ಲಿ ಜಾಗೃತಿ ಮೂಡಬೇಕು. ಉದ್ಯೋಗಾವಕಾಶಕ್ಕಾಗಿ ಮಾತ್ರ ಆಂಗ್ಲ ಮಾಧ್ಯಮ ಬೇಡ. ತಾಯಿಯ ಅಂತರಾಳದ ಹೃದಯದಲ್ಲಿ ಕನ್ನಡದ ಡಿಂಡಿಮ ಉಕ್ಕಿ ಕನ್ನಡದ ಶಕ್ತಿಯನ್ನು ತುಂಬಬೇಕು ಎಂದರು. 
 
ತಾಲ್ಲೂಕು ಕಸಾಪ ಕಾರ್ಯದರ್ಶಿ ಪರಮೇಶ್‌, ಕಸಾಪ ಆವತಿ ಗ್ರಾಮ ಶಾಖೆ ಅಧ್ಯಕ್ಷ ಬಿಎಂಟಿಸಿ ನಾಗರಾಜ್‌ ಮಾತನಾಡಿದರು. ಕಸಾಪ ಜಿಲ್ಲಾ ಮಹಿಳಾ ಕಾರ್ಯದರ್ಶಿ ಚಂದ್ರಕಲಾ ಮೂರ್ತಿ, ಕಸಾಪ ತಾಲ್ಲೂಕು ಅಧ್ಯಕ್ಷ ರಾಜ್‌ಗೋಪಾಲ್‌, ಟೌನ್‌ ಅಧ್ಯಕ್ಷ ರಮೇಶ್‌ ಕುಮಾರ್‌, ಜಿಲ್ಲಾ ಸಂಘಟನಾ ಕಾರ್ಯದರ್ಶಿ ಭಾರತಿ ವಿಶ್ವನಾಥ್‌ ಉಪಸ್ಥಿತರಿದ್ದರು. ಇದೇ ಸಂದರ್ಭದಲ್ಲಿ ತಾಲ್ಲೂಕು ಕಸಾಪ ಮಹಿಳಾ ಘಟಕ ನೂತನ ಅಧ್ಯಕ್ಷರಾಗಿ ಮಹಾದೇವಿ ಕಾಂತರಾಜ್‌, ಕಾರ್ಯದರ್ಶಿಯಾಗಿ ಆರತಿ, ಖಜಾಂಚಿಯಾಗಿ ಉಷಾ ರಮೇಶ್‌ ಬಾಬು ನೇಮಕಗೊಂಡರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.